Site icon Kannada News-suddikshana

22 ವರ್ಷಗಳ ಹಿಂದೆ, ವಂಚನೆಗೊಳಗಾಗಿ ಪಾಕಿಸ್ತಾನಕ್ಕೆ ಸೇರಿದ ಭಾರತೀಯ ಮಹಿಳೆ ತಾಯ್ನಾಡಿಗೆ ಮರಳಿದ್ದಾರೆ

ನವದೆಹಲಿ: ಟ್ರಾವೆಲ್‌ ಏಜೆಂಟ್ ಒಬ್ಬರಿಂದ ಮೋಸಕ್ಕೊಳಗಾಗಿ ಪಾಕಿಸ್ಥಾನದಲ್ಲಿ ಇದ್ದ ಭಾರತದ ಮಹಿಳೆ ಈಗ ಮರಳಿ ತಾಯ್ನಾಡಿಗೆ ಬಂದಿದ್ದಾರೆ.

ಮುಂಬೈ ಮೂಲದ ಹಮೀದಾ ಬಾನೋ ಎಂಬುವ ಮಹಿಳಗೆ ದುಬೈನಲ್ಲಿ‌ ಕೆಲಸ ಕೊಡಿಸುವ ಆಸೆ ತೋರಿಸಿ ಆಕೆಯನ್ನು ಪಾಕ್ ನ ಸಿಂಧ್ ಪ್ರಾಂತ್ಯದ ಹೈದರಾಬಾದ್ ಗೆ 2002 ಕರೆದೊಯ್ಯಲಾಗಿತ್ತು.

22 ವರ್ಷ ಅಲ್ಲೇ ಕಳೆದ ಹಮೀದಾ ಕಥೆಯನ್ನು ಇತ್ತೀಚೆಗೆ ಯೂಟ್ಯೂಬರ್‌ವೊಬ್ಬರು ತಮ್ಮ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದರು. ಇದರ ಫ‌ಲವಾಗಿ ಅವರಿಗೆ ಭಾರತದಲ್ಲಿನ ತಮ್ಮ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗಿದ್ದು, ವಾಘಾ ಗಡಿ ಮೂಲಕ ಭಾರತಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Exit mobile version