Site icon Kannada News-suddikshana

ನಿಮ್ಮ ಆಧಾರ್‌ಕಾರ್ಡ್ ಅಪ್ಡೇಡ್ ಮಾಡಲು ಸೆಪ್ಟೆಂಬರ್ 14 ಕೊನೆ ದಿನ!

ಬೆಂಗಳೂರು:- ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯಾರು 10 ವರ್ಷಗಳ ಹಿಂದೆ ಆಧಾರ್ ಕಾರ್ಡ್‌ ಮಾಡಿಸಿಕೊಂಡಿದ್ದಾರೋ ಅವರು ತಮ್ಮ ಆಧಾರ್‌ಕಾರ್ಡನ್ನು ಇದುವರೆಗೆ ಅಪ್‌ಡೇಟ್ ಮಾಡಿಸಿಕೊಳ್ಳದೇ ಇದ್ದರೆ ಸೆಪ್ಟೆಂಬರ್‌ 14ರೊಳಗಾಗಿ ತಮ್ಮ ಅಪ್‌ಡೇಟ್‌ ಮಾಡಿಸಿಕೊಳ್ಳಬೇಕು ಎಂದು ಘೋಷಣೆ ಮಾಡಿದೆ.

ನೀವು ಈಗಿರುವ ವಿಳಾಸದ ಪ್ರೂಫ್ ಹಾಗೂ ಈಗಿನ ಐಡೆಂಟಿಟಿ ಪ್ರೂಫ್ ಗಳು, ಬದಲಾಗಿರುವ ಮೊಬೈಲ್ ಸಂಖ್ಯೆ, ಬಯೋಮೆಟ್ರಿಕ್ಸ್ ಮಾಹಿತಿ – ಮುಂತಾದವುಗಳನ್ನು ನೀವು ಅಪ್ಡೇಟ್ ಮಾಡಬಹುದು. ಇವುಗಳಿಗೆ ಸಂಬಂಧಿಸಿದ ದಾಖಲೆಗಳ ಜೊತೆಗೆ ಯಾವುದೇ ಆಧಾರ್ ಅಪ್ಡೇಟ್ ಕೇಂದ್ರಕ್ಕೆ ಹೋಗಿ ಅಲ್ಲಿ ಉಚಿತವಾಗಿ ಸೆ. 14ರೊಳಗೆ ಅಪ್ಡೇಟ್ ಮಾಡಿಸಬಹುದು. ಆದರೆ, ಸೆ. 14ರ ನಂತರ ಈ ಪ್ರತಿಯೊಂದು ಅಪ್ಡೇಟ್ ಗೂ ಮೇಲೆ ತಿಳಿಸಿದಂತೆ ತಲಾ 50 ರೂ. ಶುಲ್ಕ ವಿಧಿಸಲಾಗುತ್ತದೆ. ಗೂಗಲ್ ಟ್ರೆಂಡ್ಸ್ ನಲ್ಲಿ ಆಧಾರ್ ಕಾರ್ಡ್ ನ ಮಾಹಿತಿಯ ಉಚಿತ ಬದಲಾವಣೆಯ ಗಡುವು ವಿಚಾರ ಸೆ. 10ರಂದು ಭಾರೀ ಟ್ರೆಂಡ್ ನಲ್ಲಿತ್ತು.

ತೆಲಂಗಾಣದಲ್ಲಿ ಶೇ. 100ರಷ್ಟು ಗೂಗಲ್ ಬಳಕೆದಾರರು ಇದಕ್ಕಾಗಿ ಹುಡುಕಾಟ ನಡೆಸಿದ್ದರು. ಛತ್ತೀಸ್ ಗಡದಲ್ಲಿ ಶೇ. 66, ಗುಜರಾತ್ ನಲ್ಲಿ ಶೇ. 66, ಹರ್ಯಾಣದಲ್ಲಿ ಶೇ. 66 ಹಾಗೂ ಹಿಮಾಚಲ ಪ್ರದೇಶದಲ್ಲಿ ಶೇ. 58ರಷ್ಟು ಮಂದಿ ಇದಕ್ಕಾಗಿ ಹುಡುಕಾಟ ನಡೆಸಿದ್ದರು. ಮನೆಯಲ್ಲಿ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಇದ್ದರೆ ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು. ಅದಕ್ಕಾಗಿ ಈ ಕೆಳಗಿನ ಸೂಚನೆಗಳನ್ನು ಪಾಲಿಸಿದರಾಯ್ತು. ಯುಎಐಡಿಐ ವೆಬ್ ಸೈಟ್ myaadhaar.uidai.gov.in ಓಪನ್ ಮಾಡಿ.

ನಿಮ್ಮ ಕ್ರೆಡೆನ್ಷಿಯಲ್ ಗಳನ್ನು ಬಳಸಿ ಲಾಗಿನ್ ಆಗಿ. ಆಗ, ಆಧಾರ್ ನಂಬರ್ ಜೊತೆಗೆ ಜೋಡಣೆಯಾಗಿರುವ ನಿಮ್ಮ ಮೊಬೈಲಿಗೆ ಒಟಿಪಿ ನಂಬರ್ ಬರುತ್ತದೆ. ಓಟಿಪಿ ನಂಬರ್ ಹಾಕಿದ ನಂತರ ನಿಮ್ಮ ಲಾಗಿನ್ ಪೂರ್ಣವಾಗುತ್ತದೆ. ನಿಮ್ಮ ಐಡೆಂಟಿಟಿ ರಿವ್ಯೂ ಮಾಡಿ. ನೀವು ಈ ಹಿಂದೆ ನೀಡಿದ್ದ ವಿಳಾಸವನ್ನು ಒಮ್ಮೆ ಚೆಕ್ ಮಾಡಿ. ನಿಮ್ಮ ವಿಳಾಸ ಅಥವಾ ಐಡಿ ಕಾರ್ಡ್ ಗಳನ್ನು ಬದಲಾಯಿಸಲು ಅಲ್ಲಿ ಕಾಣುವ verify that the above details are correct ಆಪ್ಷನ್ ಕ್ಲಿಕ್ ಮಾಡಿ. ಅಲ್ಲಿ ಮುಂದೆ ಬರುವ ಡ್ರಾಪ್ ಡೌನ್ ಬಾಕ್ಸ್ ನಿಂದ ನೀವು ಯಾವುದನ್ನು (ವಿಳಾಸ ಅಥವಾ ಇತರ ಐಡೆಂಟಿಟಿ) ಬದಲಾಯಿಸಲು ಇಚ್ಛಿಸುವಿರೋ ಅದನ್ನು ಆಯ್ಕೆ ಮಾಡಿ.

ನಿಮ್ಮ ಹೊಸ ಐಡೆಂಟಿಟಿ ಪ್ರೂಫ್ ಹಾಗೂ ನಿಮ್ಮ ವಿಳಾಸದ ಪ್ರೂಫ್ ನ ಸಾಫ್ಟ್ ಕಾಪಿಗಳನ್ನು ಅಪ್ಡೋಡ್ ಮಾಡಿ. (ನೀವು ಲಾಗಿನ್ ಆಗುವ ಮೊದಲೇ ನಿಮ್ಮ ಹೊಸ ವಿಳಾಸ ಪ್ರೂಫ್ ಹಾಗೂ ಐಡಿ ಪ್ರೂಫ್ ಗಳ ಸ್ಕ್ಯಾನ್ಡ್ ಕಾಪಿಯನ್ನು ಡೆಸ್ಕ್ ಟಾಪ್ ನಲ್ಲಿ ಸೇವ್ ಮಾಡಿಟ್ಟುಕೊಂಡಿರುವುದು ಒಳಿತು. ಈ ಸ್ಕ್ಯಾನ್ಡ್ ಕಾಪಿಗಳು ತಲಾ 2 ಎಂ.ಬಿ.ಗಿಂತ ಕಡಿಮೆ ಗಾತ್ರದ್ದಾಗಿರಬೇಕು ಹಾಗೂ JPEG, PNG, ಅಥವಾ PDF ಮಾದರಿಗಳಲ್ಲಿ ಸೇವ್ ಆಗಿರಬೇಕು.

Exit mobile version