Site icon Kannada News-suddikshana

BIG BREAKING: ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್: ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ

SUDDIKSHANA KANNADA NEWS/ DAVANAGERE/ DATE:11-06-2024

ಬೆಂಗಳೂರು: ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ನಟ, ನಿರ್ಮಾಪಕ ದರ್ಶನ್ ತೂಗುದೀಪ ಅವರನ್ನು ಬಂಧಿಸಲಾಗಿದೆ.

ಯುವಕನೊಬ್ಬನ ಹಲ್ಲೆ ಕೇಸ್ ಸಂಬಂಧ ಡಿಸಿಪಿ ಗಿರೀಶ್ ನೇತೃತ್ವದ ತಂಡ ಬಂಧಿಸಿದೆ. ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ತೂಗುದೀಪ ಅವರನ್ನು ಅರೆಸ್ಟ್ ಮಾಡಲಾಗಿದೆ.

ರೇಣುಕಾಸ್ವಾಮಿ ಎಂಬ ಯುವಕನ ಮೇಲೆ ಹಲ್ಲೆ ನಡೆಸುವ ವೇಳೆ ದರ್ಶನ್ ಅವರೊಂದಿಗೆ ಬಾಕ್ಸರ್ಸ್ ಗಳು ಇದ್ದರು. ಈ ವೇಳೆ ಯುವಕನ ಮರ್ಮಾಂಗಕ್ಕೆ ಹೊಡೆತ ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.

ದರ್ಶನ್ ಪರಿಚಯಸ್ತ ಮಹಿಳೆಗೆ ಅಶ್ಲೀಲ ಮೆಸೇಜ್ ಅನ್ನು ರೇಣುಕಾಸ್ವಾಮಿ ಕಳುಹಿಸಿದ್ದ. ಚಿತ್ರದುರ್ಗದ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಎಂದು ತಿಳಿದು ಬಂದಿದೆ.

ನಟ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಪವಿತ್ರ ಗೌಡ ಎಂಬಾಕೆಗೆ ಮೆಸೇಜ್ ಮಾಡಿದ್ದ. ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಕಾರಣ ದರ್ಶನ್ ತೂಗುದೀಪ ಅವರು ಆತನನ್ನು ಕರೆಯಿಸಿ ಮರ್ಮಾಂಗಕ್ಕೆ ಹಲ್ಲೆ ನಡೆಸಿದ್ದರು. ಈ ವೇಳೆ ಆಸ್ಪತ್ರೆಗೆ ದಾಖಲಿಸದೇ ನಿರ್ಲಕ್ಷ್ಯ ವಹಿಸಲಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಲಾಗಿತ್ತು.

ಪವಿತ್ರಾಗೌಡ ಅವರು ದರ್ಶನ್ ತೂಗುದೀಪ ಫೋಟೋ ಹಂಚಿಕೊಂಡ ಬಳಿಕ ಪತ್ನಿ ವಿಜಯಲಕ್ಷ್ಮೀ ಅವರು ಕಿಡಿಕಾರಿದ್ದಾರೆ. ರೇಣುಕಾಸ್ವಾಮಿ ಚಿತ್ರದುರ್ಗದ ಮೂಲದವನಾಗಿದ್ದು, ಕಾಮಾಕ್ಷಿಪಾಳ್ಯದ ಬಳಿ ರೂಂ ಮಾಡಿಕೊಂಡು ಇದ್ದ. ದರ್ಶನ್ ಬೌನ್ಸರ್ಸ್ ಗಳು ಹಲ್ಲೆ ನಡೆಸಿ ಬಳಿಕ ಕಾಮಾಕ್ಷಿಪಾಳ್ಯದ ಕೊಠಡಿ ಬಳಿ ಎಸೆದು ಬಂದಿದ್ದರು ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಸ್ನೇಹಿತರು ಮಾಹಿತಿ ಆಧರಿಸಿ ಪೊಲೀಸರು ಸೆರೆ ಹಿಡಿದಿದ್ದಾರೆ. ಪವಿತ್ರಾ ಗೌಡರಿಗೆ ಮೆಸೇಜ್ ಮಾಡಿದ್ದರಿಂದ ದರ್ಶನ್ ತೂಗುದೀಪ ಕರೆಯಿಸಿಕೊಂಡಿದ್ದರು ಎಂದು ಮೃತ ಯುವಕನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Exit mobile version