Site icon Kannada News-suddikshana

ಪ್ರಿಯಕರನ ಮೇಲೆ ಆಸಿಡ್ ಎರಚಿದ ಯುಪಿ ಮಹಿಳೆ; 12 ವರ್ಷಗಳ ಬ್ಲ್ಯಾಕ್‌ಮೇಲ್ ಗೆ ಬೇಸತ್ತು ಕೃತ್ಯ..!

SUDDIKSHANA KANNADA NEWS/ DAVANAGERE/ DATE:06-10-2024

ಆಲಿಗಡ: ಉತ್ತರ ಪ್ರದೇಶದ ಅಲಿಗಢದಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಮೇಲೆ ಆಸಿಡ್ ಎರಚಿದ್ದಾಳೆ. ಕಳೆದ 12 ವರ್ಷಗಳಿಂದ ಆ ವ್ಯಕ್ತಿ ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದ ಅಲಿಗಢದಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಮೇಲೆ ಆಸಿಡ್ ಎರಚಿದ್ದಕ್ಕೆ ಕಾರಣ ಕೇಳಿದ್ರೆ ನೀವೂ ಬೆರಗಾಗ್ತೀರಾ. ಇದು ಹಲವು ವರ್ಷಗಳ ಬ್ಲ್ಯಾಕ್‌ಮೇಲ್‌ಗೆ ಪ್ರತೀಕಾರವಾಗಿ ಎಂದು ಆರೋಪಿಸಲಾಗಿದೆ.

ಆಸಿಡ್ ಎರಚಿದಾಕೆ ಹೆಸರು ವರ್ಷಾ ಎಂದು ಗುರುತಿಸಲಾಗಿರುವ ಮಹಿಳೆಯು ವಿವೇಕ್ ಎಂಬ ವ್ಯಕ್ತಿಯೊಂದಿಗೆ ಕಳೆದ 12 ವರ್ಷಗಳಿಂದ ವಿವಾಹವಾಗಿದ್ದರೂ ಸಹ ಸಂಬಂಧ ಹೊಂದಿದ್ದಳು. ವಿವೇಕ್ ಎಂಬಾತ ವರ್ಷಾ ಅವರನ್ನು ಸ್ಥಳೀಯ ರೆಸ್ಟೋರೆಂಟ್‌ಗೆ ಭೇಟಿಯಾಗಲು ಕರೆ ಮಾಡಿದಾಗ ಈ ಘಟನೆ ಸಂಭವಿಸಿದೆ. ಅವರಿಬ್ಬರ ಮಾತುಕತೆಯ ವೇಳೆ ವರ್ಷಾ ಇದ್ದಕ್ಕಿದ್ದಂತೆ ತನ್ನ ಬ್ಯಾಗ್‌ನಿಂದ ಆಸಿಡ್ ಬಾಟಲಿಯನ್ನು ತೆಗೆದು ವಿವೇಕ್ ಮೇಲೆ ಎಸೆದಿದ್ದಾಳೆ. ಅವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ವರ್ಷಾ ಮತ್ತು ರೆಸ್ಟೋರೆಂಟ್ ಉದ್ಯೋಗಿ ಇಬ್ಬರೂ ಸಹ ಗಾಯಗೊಂಡಿದ್ದಾರೆ.

ದಾಳಿಯ ನಂತರ ವಿವೇಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಆಗಮಿಸಿದ ಪೊಲೀಸರು ವರ್ಷಾ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ವಿವೇಕ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ರೆಸ್ಟೋರೆಂಟ್ ಮಾಲೀಕ ದೀಪಕ್ ಗಾರ್ಗ್ ಪ್ರಕಾರ, ಘಟನೆ ಬೆಳಿಗ್ಗೆ 11:30 ರ ಸುಮಾರಿಗೆ ನಡೆದಿದೆ. “ಮಹಿಳೆ ಮೊದಲು ಬಂದರು, ಸ್ವಲ್ಪ ಸಮಯದ ನಂತರ ಪುರುಷನು ಬಂದನು. ನಾನು ಸ್ನೇಹಿತನೊಂದಿಗೆ ಉಪಾಹಾರ ಸೇವಿಸುತ್ತಿದ್ದಾಗ ಹೊಟೇಲ್ ಸಿಬ್ಬಂದಿ ಗಲಾಟೆಯಾಗುತ್ತಿರುವ ಕುರಿತಂತೆ ತಿಳಿಸಿದರು. ಎಲ್ಲವೂ ಅಸ್ತವ್ಯಸ್ತವಾಗಿದೆ. ನಾನು ಏನಾಯಿತು ಎಂದು ಮಹಿಳೆಯನ್ನು ಕೇಳಿದಾಗ 12 ವರ್ಷಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕಾರಣ ಆತನ ಮೇಲೆ ಆಸಿಡ್ ಎರಚಿದ್ದಾಗಿ ತಿಳಿಸಿದ್ದಾಳೆ.

ಸಹಾಯಕ ಪೊಲೀಸ್ ಅಧೀಕ್ಷಕ (ಎಎಸ್ಪಿ) ವರುಣ್ ಕುಮಾರ್ ಮಿಶ್ರಾ ಅವರು ಪ್ರತಿಕ್ರಿಯೆ ನೀಡಿದ್ದು, ವರ್ಷಾ ವಿವಾಹಿತೆ. ದಾಳಿಯ ಹಿಂದಿನ ನಿಖರವಾದ ಉದ್ದೇಶವು ಸ್ಪಷ್ಟವಾಗಿಲ್ಲ ಎಂದು ಖಚಿತಪಡಿಸಿದ್ದಾರೆ.

“ವರ್ಷಾ ತನ್ನ ಸ್ನೇಹಿತ ವಿವೇಕ್ ಮೇಲೆ ಆಸಿಡ್ ಎರಚಿದ್ದಾಳೆ, ನಂತರ ಸ್ಥಳದಿಂದ ಓಡಿಹೋಗಿದ್ದಾನೆ. ಆಸಿಡ್ ವರ್ಷಾ ಮೇಲೂ ಬಿದ್ದಿದೆ. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಮಗೆ ಇನ್ನೂ ಅಧಿಕೃತ ದೂರು ಬಂದಿಲ್ಲ, ಆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು

ವರ್ಷಾ ಮತ್ತು ವಿವೇಕ್ ನಡುವಿನ ಸಂಬಂಧ ಇದ್ದದ್ದು ನಿಜ. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಈ ಘಟನೆ ನಡೆದಿರಬಹುದು. ಇದು ಗಂಭೀರ ಪ್ರಕರಣವಾಗಿದೆ. ಎರಡೂ ಕಡೆ ವಿಚಾರಣೆ ನಡೆಸಿ, ಹೆಚ್ಚಿನ ವಿವರಗಳನ್ನು
ಸಂಗ್ರಹಿಸಿದ ನಂತರ ಮಾಧ್ಯಮಗಳೊಂದಿಗೆ ನೀಡಲಾಗುತ್ತದೆ ಎಂದರು. ಪೊಲೀಸರು ರೆಸ್ಟೋರೆಂಟ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ವಿವೇಕ್ ಅವರ ಬೈಕ್ ಮತ್ತು ಫೋನ್ ಸಂಖ್ಯೆಯನ್ನು ಬಳಸಿಕೊಂಡು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

Exit mobile version