Site icon Kannada News-suddikshana

ದಾವಣಗೆರೆ ವಿವಿ ನೆಟ್‌ಬಾಲ್ ಪಂದ್ಯಾವಳಿ: ಜಿಎಂಎಸ್ ಅಕಾಡೆಮಿ ವಿದ್ಯಾರ್ಥಿಗಳ ಅಮೋಘ ಕ್ರೀಡಾ ಸಾಧನೆ

SUDDIKSHANA KANNADA NEWS/ DAVANAGERE/ DATE:24-12-2024

ದಾವಣಗೆರೆಯ ಜಿಎಂಎಸ್ ಅಕಾಡೆಮಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ತಂಡವು ದಾವಣಗೆರೆ ವಿಶ್ವವಿದ್ಯಾನಿಲಯ ನೆಟ್‌ಬಾಲ್ ಪಂದ್ಯಾವಳಿ 2024 ರಲ್ಲಿ ಭಾಗವಹಿಸಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ಕ್ರೀಡಾ ಸಾಧನೆ ಮೆರೆದಿದ್ದಾರೆ.

ಇದೇ ಡಿಸೇಂಬರ್ 21 ರಂದು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯಲ್ಲಿ ರಾಕೇಶ್ ವೈ ಎಸ್(3ನೇ ಬಿಎಸ್ಸಿ), ಮಯೂರ್ ಎಸ್ ಕೆ (3ನೇ ಬಿಕಾಂ), ಶಶಿಧರ್ (3ನೇ BCA), ಚರಣ್ ಟಿ ಎಂ(3ನೇ ಬಿಎಸ್ಸಿ), ಮೋಹನ್ ಕೆಎಂ(2ನೇ ಬಿಕಾಂ), ಅಜಯ್ ಕುಮಾರ್ ಡಿ ಎನ್(3ನೇ ಬಿಸಿಎ), ಮಧು ಎಂ(2ನೇ ಬಿಕಾಂ), ಧನುಷ್ ಗೌಡ ಡಿ(2ನೇ ಬಿಸಿಎ), ಸಾಹಿಲ್ ಎ ಸಿ(2ನೇ ಬಿಎಸ್ಸಿ) ಜಿಎಂಎಸ್ ಅಕಾಡೆಮಿ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನದ ಬಹುಮಾನವನ್ನು ಪಡೆದುಕೊಂಡಿದೆ.

ಜಿಎಂಎಸ್ ಅಕಾಡೆಮಿ ಬಾಲಕಿಯರ ತಂಡದ ತೇಜಸ್ವಿನಿ ಎ(3ನೇ ಬಿಕಾಂ), ತನ್ವಿ ಎನ್ ಗುಪ್ತಾ(3ನೇ ಬಿಕಾಂ), ದಿಯಾಶ್ರೀ ಎಸ್ ಎಸ್(3ನೇ ಬಿಕಾಂ), ತೇಜಸ್ವಿನಿ ಎನ್(3ನೇ BCA), ಕ್ಷೇಮ ಕೋನ B(3ನೇ BCA), ಧನುಶ್ರೀ (3ನೇ ಬಿಕಾಂ), ರಕ್ಷಿತಾ ಟಿ ಪಿ(2ನೇ ಬಿಸಿಎ), ಕರ್ಣಶ್ರೀ ಎಸ್ ಎಸ್(3ನೇ ಬಿಕಾಂ), ಭೂಮಿಕಾ ಕೆಬಿ(3ನೇ ಬಿಸಿಎ) ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಅತ್ಯುತ್ತಮ ಪ್ರದರ್ಶನಕ್ಕಾಗಿ ಈ ಎರಡೂ ತಂಡಗಳಿಗೆ ಜಿಎಂ ವಿಶ್ವವಿದ್ಯಾನಿಲಯದ ಆಡಳಿತ ವಿಭಾಗ, ಕ್ರೀಡಾ ವಿಭಾಗ ಅಭಿನಂದಿಸಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ನಮಗೆ ಹೆಮ್ಮೆ ತಂದಿದೆ ಎಂದು ಹರ್ಷ ವ್ಯಕ್ತಪಡಿಸಲಾಗಿದೆ.

Exit mobile version