Site icon Kannada News-suddikshana

ಬಾಪೂಜಿ ದೈಹಿಕ ಶಿಕ್ಷಣ ಮಹಾ ವಿದ್ಯಾಲಯದ ಸಾಧನೆ

SUDDIKSHANA KANNADA NEWS/ DAVANAGERE/ DATE:01-01-2025

ದಾವಣಗೆರೆ: ಜನವರಿ 27ರಿಂದ 31ರವರೆಗೆ ತಮಿಳುನಾಡಿನ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವ ವಿದ್ಯಾಲಯ ಖೋ ಖೋ ಪಂದ್ಯಾವಳಿಯಲ್ಲಿ ನಗರದ ಬಾಪೂಜಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ರಾಜು, ಆಕಾಶ್, ಲಕ್ಷ್ಮಣ್, ನೇಸರ್ ,ಕ್ರೀಡಾಪಟುಗಳು ದಾವಣಗೆರೆ ವಿಶ್ವವಿದ್ಯಾಲಯ ವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ಮೂಲಕ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಕ್ಕೆ ಅರ್ಹತೆ ಪಡೆದಿದ್ದಾರೆ. ಲಕ್ಷ್ಮಣ್ ಬೆಸ್ಟ್ ಚೇಸರ್ ಪ್ರಶಸ್ತಿ ಪಡೆದಿದ್ದಾನೆ. ಈ ಕ್ರೀಡಾಪಟುಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಕಾಲೇಜಿನ ಮಾರ್ಗದರ್ಶಕರಾದ ಪ್ರೊ. ಸಿ. ಹೆಚ್. ಮುರಿಗೇಂದ್ರಪ್ಪ , ಖೋ ಖೋ ತರಬೇತುದಾರರಾದ ರಾಮಲಿಂಗಪ್ಪ, ತಂಡದ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Exit mobile version