SUDDIKSHANA KANNADA NEWS/ DAVANAGERE/ DATE:12-12-2023
ದಾವಣಗೆರೆ: ಹರಿಹರದ ಬೈಪಾಸ್ ಹನಗವಾಡಿ ಸರ್ವಿಸ್ ರಸ್ತೆ ರಾಷ್ಟ್ಕೀಯ ಹೆದ್ದಾರಿ -48 ರಸ್ತೆ ಪಕ್ಕದಲ್ಲಿನ ಮಳಿಗೆಯಲ್ಲಿ ಸಿಮೆಂಟ್ ಸಿಮೆಂಟ್ ಇಟ್ಟಿಗೆ ತಯಾರು ಮಾಡುವ ಬಿಡಿಭಾಗಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ಕೂಲಿ ಕೆಲಸ ಮಾಡುತ್ತಿದ್ದ ಹೆಚ್. ಬಸವರಾಜ್ (36) ಬಂಧಿತ ಆರೋಪಿ. ಈತನಿಂದ ಕಳ್ಳತನ ಮಾಡಿದ್ದ ಒಟ್ಟು 1,05,000 ರೂಪಾಯಿ ಮೌಲ್ಯದ ಸಿಮೆಂಟ್ ಇಟ್ಟಿಗೆ ತಯಾರು ಮಾಡುವ ಮಿಷನ್ ನ ಬಿಡಿ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹರಿಹರ ಗ್ರಾಮೀಣ ಪೊಲೀಸ್ ಠಾಣೆಗೆ ಮೊಹ್ಮದ್ ರಫೀ ರವರು ಹಾಜರಾಗಿ ಹರಿಹರದ ಬೈಪಾಸ್ ಹನಗವಾಡಿ ಸರ್ವಿಸ್ ರಸ್ತೆ NH-48 ರಸ್ತೆ ಪಕ್ಕದಲ್ಲಿ ಕಳೆದ 4 ವರ್ಷಗಳಿಂದ ARF ಕಾಂಕ್ರೀಟ್ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಆದ್ರೆ, ಕಳೆದ ಡಿಸೆಂಬರ್ 6ರಂದು ಸಂಜೆ ಕೆಲಸ ಮುಗಿಸಿಕೊಂಡು ರೂಮಿಗೆ ಮತ್ತು ಗೇಟಿಗೆ ಬೀಗ ಹಾಕಿಕೊಂಡು ಮನೆಗೆ ಬಂದಿದ್ದೆ. ಆದ್ರೆ, ಮಾರನೇ ದಿನ ಬೆಳಗ್ಗೆ ನಮ್ಮಲ್ಲಿ ಕೆಲಸ ಮಾಡುವ ಫಯಾಜ್ ಮತ್ತು ಇತರೆ ಕೆಲಸಗಾರರು ಕೆಲಸಕ್ಕೆಂದು ಹೋದಾಗ, ಗೇಟು ತೆರೆದಿದ್ದಾರೆ. ಆಫೀಸ್ ಡೋರ್, ಸ್ಟೋರ್ ರೂಂ ಡೋರ್, ಸಿಮೆಂಟ್ ಗೋಡಾನ್ ಡೋರ್ ಒಡೆದಿದ್ದು, ಕೂಡಲೇ ನನಗೆ ಪೋನ್ ಮಾಡಿ ತಿಳಿಸಿದರು. ನಾನು ಸ್ಥಳಕ್ಕೆ ಹೋಗಿ ನೋಡಿದಾಗ, ಯಾರೋ ಕಳ್ಳರು ಆಫೀಸ್ ರೂಮಿನಲ್ಲಿದ್ದ ಡೀಲಿಂಗ್ ಮಿಷನ್, ಸ್ಟೋರ್ ರೂಮಿನಲ್ಲಿದ್ದ ಕಾಂಕ್ರೀಟ್ ಬ್ರೇಕರ್, ಜಾಕ್, ಕೇಬಲ್ ಇತರೆ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಗೊತ್ತಾಗಿದೆ. ಕಳ್ಳತನವಾದ ಎಲ್ಲ ವಸ್ತುಗಳ ಬೆಲೆ ಸುಮಾರು 1,40,000 ರೂಗಳಾಗಬಹುದು. ಸಿಮೆಂಟ್ ಕಾಂಕ್ರೀಟ್ ಪಂಚಿಂಗ್ ಬಾಕ್ಸ್, ಮಿಷಿನ್, ಜಾಕ್, ಕೇಬಲ್ ವೈರುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದರು.
ಪ್ರಕರಣದಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ ಸಂತೋಷ್ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಿ.ಎಸ್. ಬಸವರಾಜ್ ಅವರ ಹರಿಹರ ವೃತ್ತ ನಿರೀಕ್ಷ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಆರೋಪಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಿ.ಎಸ್. ಬಸವರಾಜ ಮತ್ತು ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅರವಿಂದ್ ಬಿ.ಎಸ್. ಮತ್ತು ಅಬ್ದುಲ್ ಖಾದರ್ ಜಿಲಾನಿ, ಸಿಬ್ಬಂದಿಯಾದ ವೆಂಕಟೇಶ, ಅನಿಲ್ ಕುಮಾರ್ ನಾಯ್ಕ, ರಮೇಶ, ಸುರೇಶ ಉಪ್ಪಾರ, ಸುಶೀಲಮ್ಮ, ನಾಗರಾಜ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ ಎಂ. ಸಂತೋಷ ಅವರು ಶ್ಲಾಘಿಸಿದ್ದಾರೆ.