SUDDIKSHANA KANNADA NEWS/ DAVANAGERE/ DATE:15-09-2023
ದಾವಣಗೆರೆ: ಚನ್ನಗಿರಿ (Channagiri) ಅಡಿಕೆ ನಾಡು. ಅಡಿಕೆ ಬೆಳೆಗಾರರು ಹೆಚ್ಚಿದ್ದಾರೆ. ಖೇಣಿಯನ್ನೂ ಮಾಡುತ್ತಾರೆ. ಆದ್ರೆ, ಈಗ ಅಡಿಕೆ ಕಾಯೋದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಯಾಕೆಂದರೆ ಚಿನ್ನದ ಬೆಲೆ ಅಡಿಕೆಗೆ ಬರುತ್ತಿದ್ದಂತೆ ಮತ್ತೆ ಕಳ್ಳತನ ಶುರುವಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಅಡಿಕೆ ಕಳ್ಳತನ ಶುರುವಾಗಿತ್ತು. ಮತ್ತೆ ಈಗ ಇದೇ ಸಮಸ್ಯೆ ಕಾಡಲಾರಂಭಿಸಿದೆ. ಮನೆ ಮುಂದೆ ಅಡಿಕೆ ಒಣಿಗಿಸಲು ಹಾಕಲಾಗಿರುತ್ತದೆ. ಹೆಚ್ಚಿನ ಖೇಣಿದಾರರು ಅಡಿಕೆ ಕಾಪಾಡಿಕೊಳ್ಳಲು ಹಗಲು ರಾತ್ರಿ ಕಾಯುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ.
ಚನ್ನಗಿರಿ (Channagiri) ಪೊಲೀಸರ ಕಾರ್ಯಾಚರಣೆ:
ಚನ್ನಗಿರಿ (Channagiri) ಉಪವಿಭಾಗ ಸಂತೇಬೆನ್ನೂರು ಠಾಣಾ ಸರಹದ್ದಿನ ಹೊಸೂರು ಗ್ರಾಮದಲ್ಲಿನ ಗೋದಾಮಿನಲ್ಲಿ ಇಟ್ಟಿದ್ದ ಸುಮಾರು 15 ಕ್ಷಿಂಟಾಲ್ ಅಡಿಕೆ ಕಳ್ಳತನವಾದ ಬಗ್ಗೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿಯನ್ನೂ ಓದಿ:
M. P. Renukacharya: ಎಂ. ಪಿ. ರೇಣುಕಾಚಾರ್ಯ ಸರಿ ಹೋದರೆ ಸರಿ, ಇಲ್ಲದಿದ್ದರೆ ಪಕ್ಷ ಕ್ರಮ ಕೈಗೊಳ್ಳುತ್ತದೆ: ಕೆ. ಎಸ್. ನವೀನ್ ವಾರ್ನಿಂಗ್
ಆರೋಪಿಗಳ ಪತ್ತೆಗೆ ಎಸ್ಪಿ, ಎಎಸ್ಪಿ ಚನ್ನಗಿರಿ (Channagiri) ಡಿವೈಎಸ್ಪಿ ಡಾ. ಸಂತೋಷ ಕೆ.ಎಂ. ರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತದ ಸಿಪಿಐ ಲಿಂಗನಗೌಡ ನೆಗಳೂರು ರವರ ನೇತೃತ್ವದಲ್ಲಿ ಸಂತೇಬೆನ್ನೂರು ಪಿಎಸ್ ಐ ರೂಪಾ ತೆಂಬದ್, ಸಿಬ್ಬಂದಿ ಸತೀಶ, ಎಂ. ರುದ್ರೇಶ, ಶಂಕರಗೌಡ, ಆಂಜನೇಯ, ರಾಘವೇಂದ್ರ, ಪರಶುರಾಮ, ಪ್ರವೀಣಗೌಡ, ರವಿಕುಮಾರ ರವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಇಂದು ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಚಾಲಕ ಎಸ್. ಎಚ್. ಕಾರ್ತಿಕ್ (26) ಎಂಬಾತನನ್ನು ಬಂಧಿಸಲಾಗಿದೆ.
ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 5 ಕ್ವಿಂಟಾಲ್ ಅಡಿಕೆ ಮತ್ತು ಅಡಿಕೆ ಸಾಗಾಣಿಕೆ ಮಾಡಲು ಬಳಸಿದ ಸುಮಾರು 2 ಲಕ್ಷ ರೂ ಬೆಲೆಬಾಳುವು ಕೆಎ-51 ಎ-8066 ಮಹೀಂದ್ರಾ ಮ್ಯಾಕ್ಷಿಮೋ ಸೇರಿ ಒಟ್ಟು 4 ಲಕ್ಷ ರೂ ಬೆಲೆವಾಳುವ ವಸ್ತುಗಳನ್ನು
ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಅಡಕೆ ಕಳ್ಳತನ ಪ್ರಕರಣದಲ್ಲಿನ ಆರೋಪಿತನನ್ನು ಬಂಧಿಸಿ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಂತೇಬೆನ್ನೂರು ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡತಂಡವನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಅಭಿನಂದಿಸಿದ್ದಾರೆ.