Home ಕ್ರೈಂ ನ್ಯೂಸ್ ಲಲಿತಾ ಇಂಟರ್ ನ್ಯಾಷನಲ್ ಸ್ಕೂಲ್ ಬಸ್ ಚಾಲಕನ ಅಜಾಗರೂಕತೆ: ತಂತಿ ಬೇಲಿಗೆ ಬಸ್ ಡಿಕ್ಕಿ, 25 ಮಕ್ಕಳು ಅದೃಷ್ಟವಶಾತ್ ಪಾರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಲಲಿತಾ ಇಂಟರ್ ನ್ಯಾಷನಲ್ ಸ್ಕೂಲ್ ಬಸ್ ಚಾಲಕನ ಅಜಾಗರೂಕತೆ: ತಂತಿ ಬೇಲಿಗೆ ಬಸ್ ಡಿಕ್ಕಿ, 25 ಮಕ್ಕಳು ಅದೃಷ್ಟವಶಾತ್ ಪಾರು!

Share
ಮಕ್ಕಳು
Share

ದಾವಣಗೆರೆ: ದಾವಣಗೆರೆ ನಗರದ ಲಲಿತಾ ಇಂಟರ್ ನ್ಯಾಷನಲ್ ಬಸ್ ಚಾಲಕನ ಅಜಾಗರೂಕತೆಯಿಂದ ಬಸ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ 25 ಮಕ್ಕಳು ಅಪಾಯದಿಂದ ಪಾರಾದ ಘಟನೆ ನಡೆದಿದೆ.

READ ALSO THIS STORY: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಅಲ್ಪಸಂಖ್ಯಾತರು ಇಲ್ಲವೇ ಅಹಿಂದ ವರ್ಗಕ್ಕೆ ಟಿಕೆಟ್ ನೀಡದಿದ್ದರೆ…!

ಜಿಲ್ಲಾ ಪಂಚಾಯಿತಿ ಹತ್ತಿರದ ಲೋಕಿಕೆರೆ ಬ್ರಿಡ್ಜ್ ಸಮೀಪ ಈ ಅಪಘಾತ ಸಂಭವಿಸಿದೆ. ಲಲಿತಾ ಇಂಟರ್ ನ್ಯಾಷನಲ್ ಸ್ಕೂಲ್ ಬಸ್ ಚಾಲಕನು ಎಂದಿನಂತೆ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಸರ್ವಿಸ್ ರಸ್ತೆಯ ತಂತಿ ಬೇಲಿಗೆ ಡಿಕ್ಕಿ ಹೊಡೆದಿದೆ. ಕೂದಲೆಳೆ ದೂರದಲ್ಲೇ ಹೆದ್ದಾರಿ ಇದ್ದು, ಇಲ್ಲೇನಾದರೂ ಬಸ್ ಬಂದಿದ್ದರೆ ದೊಡ್ಡ ಅಪಾಯವೇ ಆಗುತಿತ್ತು.

ಬಸ್ ನಲ್ಲಿ 25ಕ್ಕೂ ಹೆಚ್ಚು ಮಕ್ಕಳು ಇದ್ದರು ಎನ್ನಲಾಗಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ. ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಿಕೆರೆ ಮುಖ್ಯರಸ್ತೆಯಲ್ಲಿ ಲಲಿತಾ ಇಂಟರ್ ನ್ಯಾಷನಲ್ ಸ್ಕೂಲ್ ಇದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧವೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *