SUDDIKSHANA KANNADA NEWS/ DAVANAGERE/ DATE:17_07_2025
ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಾರು ಮತ್ತು ಮೋಟಾರ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ 2 ವರ್ಷದ ಮಗು ಸೇರಿದಂತೆ 7 ಮಂದಿ ಸಾವು ದುರ್ಮರಣಕ್ಕೀಡಾಗಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬುಧವಾರ ತಡರಾತ್ರಿ ಕಾರು ಮತ್ತು ಮೋಟಾರ್‌ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ದಿಂಡೋರಿ ಪ್ರದೇಶದಲ್ಲಿ ಮಾರುತಿ ಆಲ್ಟೊ ಕಾರು ಮೋಟಾರ್‌ಸೈಕಲ್‌ಗೆ ಡಿಕ್ಕಿ
ಹೊಡೆದ ಪರಿಣಾಮ ಕಾರು ರಸ್ತೆ ಬದಿಯ ಚರಂಡಿಗೆ ಉರುಳಿಬಿದ್ದಿದೆ.
ಮೃತರಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಮತ್ತು ಕಾರಿನಲ್ಲಿದ್ದ ಒಂದು ಮಗು ಸೇರಿದ್ದು. ಮೋಟಾರ್ ಬೈಕ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ನಾಸಿಕ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.