Site icon Kannada News-suddikshana

ಟ್ರ್ಯಾಕ್ಟರ್ – ಬೈಕ್ ನಡುವೆ ಡಿಕ್ಕಿ: ದಾವಣಗೆರೆ ಎಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಮೂರ್ತಿ ದುರ್ಮರಣ

SUDDIKSHANA KANNADA NEWS/ DAVANAGERE/ DATE_03-07_2025

ದಾವಣಗೆರೆ: ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತವಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ. ಹೆಚ್. ಸಿ. 201 ಪೊಲೀಸ್ ಸಿಬ್ಬಂದಿ ಮೃತಪಟ್ಟ ದಾರುಣ
ಘಟನೆ ನಡೆದಿದೆ.

READ ALSO THIS STORY: “19 ಕೋಟಿ 25 ಲಕ್ಷ ರೂ. ಬಂದಿದ್ದರೂ ಕೊಡುತ್ತಿಲ್ಲ”: ಸಾವಿಗೆ ಕಾರಣ ಬರೆದಿಟ್ಟು ಹೋದ ದಾವಣಗೆರೆಯ ಶಶಿಕುಮಾರ!

ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಮೂರ್ತಿ ಮೃತಪಟ್ಟ ದುರ್ದೈವಿ. ದಾವಣಗೆರೆ ನಗರದ ಕೊಂಡಜ್ಜಿ ರಸ್ತೆಯಿಂದ ಹಳೆಯ ಪಿ. ಬಿ. ರಸ್ತೆ ಸಮೀಪದ ರಿಂಗ್ ರಸ್ತೆಯ ಫ್ಲೈ ಓವರ್ ಮೇಲೆ ಈ ಅಪಘಾತ ಸಂಭವಿಸಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಇಟಗಿ ಗ್ರಾಮದವರಾಗಿದ್ದ ಗುರುಮೂರ್ತಿ ಅವರು ದಾವಣಗೆರೆ ನಗರದ ವಿದ್ಯಾನಗರದಲ್ಲಿ ಪತ್ನಿ ರೇಖಾ‌ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಿದ್ದಾರ್ಥ ಜೊತೆ ವಾಸವಿದ್ದರು. ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಶವ ಇರಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Exit mobile version