ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿರುವುದರಿಂದ ಈ ಬಾರಿಯ ಟಿಕೆಟ್ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಬೇಕು ಎಂದು ಒತ್ತಾಯಿಸಿದವರಲ್ಲಿ ಎಲ್ಲ ಮುಖಂಡರೂ ಸೇರಿದ್ದರು. ಈಗ ಮಾತ್ರ ಸೋಲಿನ ಭಯದಿಂದ ಎಲ್ಲ ಆರೋಪಗಳನ್ನು ನನ್ನ ಮೇಲೆ ಹೊರಿಸುತ್ತಿದ್ದಾರೆ. ನಾನು ಯಾವತ್ತೂ ನನಗೆ ಟಿಕೆಟ್ ಕೊಡಿ ಎಂದು ಕೇಳಿಯೇ ಇಲ್ಲ. ನನ್ನ ಉದ್ದೇಶ ಹಾಗೂ ಮಾತುಗಳು ಸ್ಪಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ಬಂದವರು ನನ್ನನ್ನು ಭೇಟಿಯಾಗದೇ ಇದ್ದದ್ದು, ನೋವಾದರೂ, ನನಗದು ದೊಡ್ಡ ವಿಷಯವಲ್ಲ. ಆದರೆ ನನ್ನ ಅರ್ಹತೆ ಹಾಗೂ ಪ್ರಾಮಾಣಿಕತೆಯನ್ನು ಪ್ರಶ್ನಿಸಿರುವುದು, ಪತ್ರಿಕಾಗೋಷ್ಠಿ ಮೂಲಕ ತೇಜೋವಧೆಗೆ ಯತ್ನಿಸಿರುವುದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಬೆಂಕಿಯುಗುಳಿದ್ದಾರೆ.
ರಿಜ್ವಾನ್ ಅರ್ಷದ್ ಹಾಗೂ ಸಲೀಮ್ ಅಹ್ಮದ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತುಗಳು ನನಗೆ ನೋವುಂಟುಮಾಡಿದೆ. ಅರ್ಹತೆ ಇಲ್ಲ ಎಂಬ ಮಾತಿನಿಂದ ನೊಂದು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಯೇ ಹೊರತು ಪಕ್ಷಕ್ಕಲ್ಲ. ಕಾಂಗ್ರೆಸ್ ಪಕ್ಷವು ನನ್ನನ್ನು ಇಲ್ಲಿಯವರೆಗೆ ಬೆಳೆಸಿದೆ. ಆದ್ದರಿಂದ ನಾನು ಪಕ್ಷಕ್ಕೆ ನಿಷ್ಠನಾಗಿರುತ್ತೇನೆ. ಯಾರದೋ ಆರೋಪಕ್ಕಾಗಿ ಪಕ್ಷವನ್ನು ದೂಷಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಾತಿನಿಧ್ಯ ಇಲ್ಲದ ಸಮುದಾಯಕ್ಕೆ ಅವಕಾಶ ನೀಡಿ ಎಂದು ನಾವು ಕೊನೆಕ್ಷಣದವರೆಗೂ ಕೇಳಿದ್ದೇವೆ. ಅಹಿಂದ ವರ್ಗದ ಸಾಮಾನ್ಯ ಕಾರ್ಯಕರ್ತರನ್ನು ಗೆಲ್ಲಿಸುವ ಭರವಸೆ ನೀಡಿದ್ದೇವೆ. ಜನರು ರೋಸಿಹೋಗಿ ತಿರುಗಿಯೂ ನೋಡದ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಅವರ ಚಿಕ್ಕದೊಂದು ಭೇಟಿಯು ಜನರ ಅಸಮಧಾನ ಕಡಿಮೆಗೊಳಿಸಿತ್ತು. ರಿಜ್ವಾನ್ ಅರ್ಷದ್ ಮತ್ತು ಸಲೀಮ್ ಅಹ್ಮದ್ ಇಪ್ಪತ್ತು ದಿನಗಳಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು ಝಮೀರ್ ಅಹ್ಮದ್ ಅವರು ಎರಡು ಗಂಟೆಗಳಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದು ಜಮೀರ್ ಅಹ್ಮದ್ ಅವರನ್ನು ಹೊಗಳಿದ್ದಾರೆ.
- Abdul Jabbar
- Congress Internal Rift
- Davanagere Politics
- Davanagere South By-election
- Karnataka Political News
- MLC Resignation
- Rizwan Arshad
- Saleem Ahmed
- Zameer Ahmed Khan
- ಅಬ್ದುಲ್ ಜಬ್ಬಾರ್
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಅಸಮಾಧಾನ
- ಜಮೀರ್ ಅಹ್ಮದ್ ಖಾನ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ ಸುದ್ದಿ
- ರಿಜ್ವಾನ್ ಅರ್ಷದ್
- ವಿಧಾನ ಪರಿಷತ್ ಸದಸ್ಯ ರಾಜೀನಾಮೆ
- ಸಲೀಂ ಅಹ್ಮದ್





Leave a comment