Site icon Kannada News-suddikshana

ನೀರಿನಲ್ಲಿ ಆಟವಾಡಿದ ವಿದ್ಯಾರ್ಥಿಯ ಹಲ್ಲು ಮುರಿದ ಶಿಕ್ಷಕಿ

ಬೆಂಗಳೂರು: ಗುರುಗಳು ದೇವರಿಗೆ ಸಮಾನ ಎನ್ನುತ್ತೇವೆ. ಆದರೆ ಅಂತಹ ಗುರುಗಳೇ ಮಕ್ಕಳಿಗೆ ಯಮನಂತೆ ಕಾಡಿದ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇಂತಹ ಒಂದು ಪ್ರಕರಣ ರಾಜ್ಯ ರಾಜಧಾನಿಯಲ್ಲಿ ಗುರುವಾರ ನಡೆದಿದೆ.

ನೀರಿನಲ್ಲಿ ಆಟವಾಡಿದ್ದ ವಿದ್ಯಾರ್ಥಿಯ ಹಲ್ಲು ಮುರಿಯುವಂತೆ ಶಿಕ್ಷಕಿ ಹೊಡೆದಿದ್ದಾರೆ. ಬೆಂಗಳೂರಿನ ಜಯನಗರದ ಹೋಲಿ ಕ್ರಿಸ್ಟ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಗುರುವಾರ ಮಧ್ಯಾಹ್ನ ಊಟದ ಸಮಯದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ. ಇದರಿಂದ ಕೋಪಗೊಂಡ ಹಿಂದಿ ವಿಷಯ ಶಿಕ್ಷಕಿ ಅಜ್ಮತ್ ವಿದ್ಯಾರ್ಥಿ ಮುಖಕ್ಕೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ಸದ್ಯ ಶಿಕ್ಷಕಿ ವಿರುದ್ಧ ಜಯನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

Exit mobile version