SUDDIKSHANA KANNADA NEWS/DAVANAGERE/DATE:24_12_2025
ದಾವಣಗೆರೆ: ಶಾಮನೂರು ಶಿವಶಂಕರಪ್ಪ. ಈ ದೇಶ ಕಂಡ ಅತ್ಯಂತ ಹಿರಿಯ ಶಾಸಕರಾಗಿದ್ದವರು. ಕಾಂಗ್ರೆಸ್ ಪಕ್ಷವಷ್ಟೇ ಅಲ್ಲ ಎಲ್ಲ ಪಕ್ಷಗಳಲ್ಲಿಯೂ ಅತ್ಯಂತ ಹಿರಿಯ ರಾಜಕೀಯ ಮುತ್ಸದ್ಧಿ. 93ನೇ ವಯಸ್ಸಿನಲ್ಲೂ ಚುನಾವಣಾ ಕಣಕ್ಕಿಳಿದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಎಂಎಲ್ಎ ಆದವರು. ರಾಜ್ಯ ರಾಜಕಾರಣದಲ್ಲಿ ಸೋಲರಿಯದ ಸರದಾರ ಎಂಬ ಕೀರ್ತಿ ಹೊಂದಿದ್ದ ಈ ಯುಗ ಪುರುಷ ಇನ್ನೂ ನೆನಪು ಮಾತ್ರ.
READ ALSO THIS STORY: ಡಿ. 26ಕ್ಕೆ ಶಿವಶಂಕರಪ್ಪರ ಶಿವಗಣಾರಾಧನೆ, ನುಡಿನಮನ: ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಹಿಂಭಾಗದ 100 ಎಕರೆಯಲ್ಲಿ ಅಂತಿಮ ಸಿದ್ದತೆ
ಎಲ್ಲೆಲ್ಲೂ ಶಾಮನೂರು ಶಿವಶಂಕರಪ್ಪರ ಸ್ಮರಣೆ, ನೀಡಿದ ಕೊಡುಗೆ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸೈ ಎನಿಸಿಕೊಂಡವರು. 95 ವರ್ಷಗಳ ಸಾರ್ಥಕ ಬದುಕು ಸಾಗಿಸಿದವರು.
ಯುಗಪುರುಷ ಶಾಮನೂರು ಶಿವಶಂಕರಪ್ಪ:
ಇಂಥ ಹಿರಿಯ ರಾಜಕಾರಣಿ ದೇಶದಲ್ಲಿ ಹುಡುಕಿದರೂ ಸಿಗುವುದು ತುಂಬಾನೇ ಕಡಿಮೆ. ಯಾಕೆಂದರೆ ಇಳಿವಯಸ್ಸಿನಲ್ಲಿಯೂ ರಾಜಕೀಯ ಮಾಡಿದ ಮುತ್ಸದ್ಧಿ. ನಿಧನ ಹೊಂದುವ ಒಂದು ವಾರದ ಮುಂಚೆಯವರೆಗೂ ಜ್ಞಾಪಕ ಶಕ್ತಿ ಎಲ್ಲರನ್ನೂ ಅಚ್ಚರಿ ಮೂಡಿಸಿತ್ತು. ಮಾತ್ರವಲ್ಲ, ಬೇಳೆ, ಅಕ್ಕಿ ದರ ಕೇಳುತ್ತಿದ್ದರಷ್ಟೇ ಅಲ್ಲದೇ ಎಷ್ಟಿದೆ ದಾಸ್ತಾನು ಎಂದು ಕೇಳುತ್ತಿದ್ದರು. ಅಷ್ಟು ಜ್ಞಾಪಕ ಶಕ್ತಿ ಹೊಂದಿದ್ದ ಯುಗಪುರುಷ ಅವರು.
ಗಣ್ಯಾತಿಗಣ್ಯರ ದಂಡು:
ಶಾಮನೂರು ಶಿವಶಂಕರಪ್ಪರ ಶಿವಗಣಾರಾಧನೆ, ನುಡಿನಮನ ಕಾರ್ಯಕ್ರಮಕ್ಕೆ ದಾವಣಗೆರೆ ಸಜ್ಜಾಗಿದೆ. ಡಿಸೆಂಬರ್ 26ರಂದು ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಹಿಂಭಾಗದಲ್ಲಿನ ಸುಮಾರು 100 ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಮಾತ್ರವಲ್ಲ,ಸಿದ್ಧತೆಗಳು ಭರದಿಂದ ಸಾಗಿದೆ. ಜೆಸಿಬಿಗಳ ಮೂಲಕ ಕಾರ್ಯವೂ ಬಿರುಸುಗೊಂಡಿದೆ. ಗಣ್ಯಾತಿಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನೂರಕ್ಕೂ ಹೆಚ್ಚು ಮಠಾಧೀಶರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ, ಭವ್ಯ ವೇದಿಕೆ ರೂಪುಗೊಳ್ಳುತ್ತಿದೆ.
ಯಾವಾಗ ಬರುತ್ತೆ ದಾವಣಗೆರೆಗೆ ಪುತ್ಥಳಿ:
ಈ ನಡುವೆ ಅಯೋಧ್ಯೆಯ ರಾಮಮಂದಿರಕ್ಕೆ ರಾಮನ ಮೂರ್ತಿ ಕೆತ್ತನೆ ಮಾಡಿದ್ದ ಅರುಣ್ ಯೋಗಿರಾಜ್ ಕೈಯಲ್ಲಿ ಶಾಮನೂರು ಶಿವಶಂಕರಪ್ಪರ ಪುತ್ಥಳಿ ಸಿದ್ಧವಾಗುತ್ತಿದೆ. ಗುರುವಾರ ಸಂಜೆ ಅಥವಾ ಶುಕ್ರವಾರ ಬೆಳಿಗ್ಗೆ ದಾವಣಗೆರೆಗೆ ಬರಲಿದೆ. ಶಾಮನೂರು ಶಿವಶಂಕರಪ್ಪರು ನಿಧನ ಹೊಂದಿದಾಗ ಪುತ್ಥಳಿ ಮಾಡಿಕೊಡುವುದಾಗಿ ಅರುಣ್ ಯೋಗಿರಾಜ್ ಎರಡು ಬಾರಿ ಫೋನ್ ಮಾಡಿ ಹೇಳಿದ್ದರು. ಹಾಗಾಗಿ, ನಾವು ಒಪ್ಪಿದ್ದೆವು. ಈ ಪುತ್ಥಳಿಯನ್ನು ಶುಕ್ರವಾರದಂದು ಅನಾವರಣಗೊಳಿಸಲಾಗುವುದು ಎಂದು ಶಾಮನೂರು ಶಿವಶಂಕರಪ್ಪರ ಪುತ್ರರೂ ಆದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾಹಿತಿ ನೀಡಿದ್ದಾರೆ.
ಎಸ್ ಎಸ್ ಆಪ್ತ ಮಲ್ಲಿಕಾರ್ಜುನ್ ಖರ್ಗೆ ಪುತ್ಥಳಿ ಅನಾವರಣ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಪುತ್ಥಳಿ ಅನಾವರಣಗೊಳಿಸಿ ನುಡಿನಮನ ಸಲ್ಲಿಸಲಿದ್ದಾರೆ. ಅರುಣ್ ಯೋಗಿರಾಜ್ ಕೈಯಲ್ಲಿ ಅರಳಿರುವ ಶಾಮನೂರು ಶಿವಶಂಕರಪ್ಪರ ಪುತ್ಥಳಿ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ
ಗರಿಗೆದರಿದೆ.
ಕರ್ನಾಟಕದ ಮೈಸೂರಿನ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯಲ್ಲಿ ನಿರ್ಮಿಸಿದ್ದ ರಾಮಮಂದಿರಕ್ಕಾಗಿ ರಾಮಲಲ್ಲಾ ವಿಗ್ರಹವನ್ನು ಕೆತ್ತನೆ ಮಾಡಿದ್ದ ಬಳಿಕ ದೇಶಾದ್ಯಂತ ಮನೆ ಮಾತಾಗಿದ್ದರು. ರಾಮನ ಮೂರ್ತಿ ಕಂಡಿದ್ದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ದೇಶದ ಜನರ ಮನಗೆದ್ದಿದ್ದರು. ಅಂಥ ಕಲಾವಿದನ ಕೈಯಲ್ಲಿ ಶಾಮನೂರು ಶಿವಶಂಕರಪ್ಪರ ಪುತ್ಥಳಿ ರೆಡಿಯಾಗಿರುವುದು ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಎಂಬಿಎ ಮುಗಿಸಿದ ನಂತರ ಅರುಣ್ ಯೋಗಿರಾಜ್ ಸ್ವಲ್ಪ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಬಳಿಕ ತಮ್ಮ ಪೂರ್ವಜರ ಪರಂಪರೆ ಮುಂದುವರಿಸಿದ್ದರು. ತನ್ನ ಕಲಾ ನೈಪುಣ್ಯತೆ ಮೂಲಕ ಇಡೀ ದೇಶದ ಮನೆಮಾತಾಗಿದ್ದಾರೆ. 2008ರಿಂದ ಅವರು ಪ್ರತಿಮೆಗಳನ್ನು ರಚಿಸುತ್ತಿದ್ದಾರೆ ಮತ್ತು ರಾಷ್ಟ್ರವ್ಯಾಪಿ ಮನ್ನಣೆ ಗಳಿಸಿದ್ದಾರೆ.
- Shamanuru Shivashankarappa
- Shamanuru Shivashankarappa Death
- Shamanuru Shivashankarappa Death news
- Shamanuru Shivashankarappa Mla
- Shamanuru Shivashankarappa News
- Shamanuru Shivashankarappa News Updates
- ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ
- ಶಾಮನೂರು ಶಿವಶಂಕರಪ್ಪ ಅಜರಾಮರ
- ಶಾಮನೂರು ಶಿವಶಂಕರಪ್ಪ ಇನ್ನಿಲ್ಲ
- ಶಾಮನೂರು ಶಿವಶಂಕರಪ್ಪ ನೆನಪು ಮಾತ್ರ
- ಶಾಮನೂರು ಶಿವಶಂಕರಪ್ಪ ನ್ಯೂಸ್
- ಶಾಮನೂರು ಶಿವಶಂಕರಪ್ಪ ವಿಧಿವಶ








Leave a comment