Site icon Kannada News-suddikshana

ಚಲಿಸುತ್ತಿದ್ದ ಆಟೋದಲ್ಲಿ ಚಾಲಕನ ಕುತ್ತಿಗೆ ಹಿಸುಕಲು ಯತ್ನಿಸಿದ ಪ್ರಯಾಣಿಕ

ಸಾಗರ : ಚಲಿಸುತ್ತಿದ್ದ ಆಟೋದಲ್ಲಿ ಪ್ರಯಾಣಿಕನೊಬ್ಬ ಚಾಲಕನ ಕುತ್ತಿಗೆಗೆ ಕೈ ಹಾಕಿ ಬಿಗಿಯಾಗಿ ಒತ್ತಲು ಪ್ರಯತ್ನಸಿದ್ದಾನೆ. ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಮೊಬೈಲ್‌ ಫೋನ್‌ನಿಂದ ಕುತ್ತಿಗೆಗೆ ಹೊಡೆದು ಪರಾರಿಯಾಗಿದ್ದಾನೆ. ಅದೃಷ್ಟವಶಾತ್‌ ಚಾಲಕ ಪಾರಾಗಿದ್ದಾನೆ.

ಸಾಗರ ಬಸ್‌ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಸೊರಬಕ್ಕೆ ಬಾಡಿಗೆಗೆ ಬರುವಂತೆ ಆಟೋ ಚಾಲಕನಿಗೆ ಕೇಳಿದ್ದ. ಚಾಲಕ ಒಪ್ಪಿಕೊಂಡಿದ್ದು ರಾತ್ರಿ 10.30ರ ಹೊತ್ತಿಗೆ ಮಾಸೂರು ಸಮೀಪ ತೆರಳುತ್ತಿದ್ದಾಗ ಪ್ರಯಾಣಿಕ, ಚಾಲಕ ಗಣೇಶನ ಕುತ್ತಿಗೆಗೆ ಕೈ ಹಾಕಿದ್ದಾ ಬಿಗಿಯಾಗಿ ಒತ್ತಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ಆಟೋ ನಿಲ್ಲಿಸಿದ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪ್ರಯಾಣಿಕ ಮೊಬೈಲ್‌ನಿಂದ ಕುತ್ತಿಗೆಗೆ ಹೊಡೆದಿದ್ದಾನೆ.

ಚಾಲಕ ಗಣೇಶ್‌ ತಕ್ಷಣ ದೊಣ್ಣೆ ಕಸಿದುಕೊಂಡಿದ್ದು, ಪ್ರಯಾಣಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸಾಗರ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಗರ ತಾಲೂಕು ಮಾಸೂರು ಬಳಿ ಘಟನೆ ಸಂಭವಿಸಿದ್ದು ಆಟೋ ಚಾಲಕ ಗಣೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Exit mobile version