Site icon Kannada News-suddikshana

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲೂ ಪಾಪಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗ!

SUDDIKSHANA KANNADA NEWS/ DAVANAGERE/ DATE-06-05-2025

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರ ಕೊಂದ ಭಯೋತ್ಪಾದಕರ ಕೃತ್ಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ. ಸಭೆಯಲ್ಲಿ ಪಾಕ್ ಕುಕೃತ್ಯಕ್ಕೆ ಶಾಕ್ ನೀಡಿದ್ದು, ಇಲ್ಲೂ
ಪಾಪಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದೆ ಎಂದು ಎಎನ್ಐ ವರದಿ ಮಾಡಿದೆ. ಕಳೆದ ತಿಂಗಳು ನಡೆದ ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಭಾಗಿಯಾಗಿರುವ ಬಗ್ಗೆ ಸದಸ್ಯರು ಪಾಕ್ ವಿರುದ್ಧ ಆಕರೋಶ ವ್ಯಕ್ತಪಡಿಸಿದು.

ಜಾಗತಿಕ ಭದ್ರತಾ ಸಂಸ್ಥೆಯ ಸದಸ್ಯರು ಪಾಕಿಸ್ತಾನದ ಪರಮಾಣು ದಾಳಿ ಬೆದರಿಕೆ, ಕ್ಷಿಪಣಿ ಪರೀಕ್ಷೆಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಮಂಡಳಿಯ 10 ಖಾಯಂ ಸದಸ್ಯರಲ್ಲಿ ಪಾಕಿಸ್ತಾನವೂ ಒಂದು. ಭಾರತದೊಂದಿಗಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು UNSC ಯ ಗ್ರೀಕ್ ಅಧ್ಯಕ್ಷತೆಯು ಶಾಂತಿ ಕಾಪಾಡುವಂತೆ ಮನವಿ ಮಾಡಿತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಇತರ ಸದಸ್ಯ ರಾಷ್ಟ್ರಗಳಲ್ಲಿ ವೀಟೋ ಚಲಾಯಿಸುವ ಖಾಯಂ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಅಮೆರಿಕ ಸೇರಿವೆ. ಅಲ್ಜೀರಿಯಾ, ಡೆನ್ಮಾರ್ಕ್, ಗ್ರೀಸ್, ಗಯಾನಾ, ಪನಾಮ, ದಕ್ಷಿಣ ಕೊರಿಯಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ಸೊಮಾಲಿಯಾ ಅದರ ಖಾಯಂ ಸದಸ್ಯರಲ್ಲದ ಸದಸ್ಯ ರಾಷ್ಟ್ರಗಳಾಗಿವೆ.

ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ UNSC ಸದಸ್ಯರು ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಿ ಕೊಲ್ಲಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು. ಪಹಲ್ಗಾಮ್ ಕುರಿತು ಪಾಕಿಸ್ತಾನ ಸರ್ಕಾರದ ಕೈವಾಡವಿಲ್ಲ. ನಾವು ಶಾಂತಿ ಬಯಸುತ್ತೇವೆ. ಭಾರತದೊಂದಿಗೆ ದ್ವಿಪಕ್ಷೀಯವಾಗಿ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕೊಡುವಂತೆ ಬೇಡಿಕೊಂಡಿತು.

UNSC ಮಾತುಕತೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಾಕಿಸ್ತಾನಿ ರಾಯಭಾರಿ ಅಸಿಮ್ ಇಫ್ತಿಕರ್, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಗಳನ್ನು ತಮ್ಮ ದೇಶ ತಿರಸ್ಕರಿಸಿದೆ ಎಂದು ಹೇಳಿದರು. ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿರುವುದನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದೂ ಹೇಳಿದ್ದಾರೆ,

ಭದ್ರತಾ ಮಂಡಳಿ ಅಥವಾ ಭಾರತ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಸಭೆಯ ನಂತರ, ಟುನೀಷಿಯಾದ ರಾಜತಾಂತ್ರಿಕ ಖಾಲೀದ್ ಮೊಹಮ್ಮದ್ ಖಿಯಾರಿ, ಪರಿಸ್ಥಿತಿ “ಅಸ್ಥಿರ”ವಾಗಿದೆ ಮತ್ತು “ಸಂವಾದ ಮತ್ತು ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ” ಕರೆ ನೀಡಲಾಗಿದೆ ಎಂದು ಹೇಳಿದರು.

Exit mobile version