Site icon Kannada News-suddikshana

Davanagere: ದಾವಣಗೆರೆ ಮೂಲದ ದಂಪತಿ ಮಗು ಸಾವಿಗೆ ಅಮೆರಿಕಾದಲ್ಲಿ ಕಣ್ಣೀರು ಸುರಿಸಿದ ನೆರೆಹೊರೆಯವರು, ಸ್ನೇಹಿತರು.. ಕ್ಯಾಂಡಲ್ ಹಿಡಿದು ಭಾವಪೂರ್ಣ ಶ್ರದ್ಧಾಂಜಲಿ

SUDDIKSHANA KANNADA NEWS/ DAVANAGERE/ DATE:21-08-2023

ದಾವಣಗೆರೆ (Davanagere): ದಾವಣಗೆರೆ ಮೂಲದ ಎಂಜಿನಿಯರ್ ದಂಪತಿ ಹಾಗೂ ಮಗು ಅಸ್ವಾಭಾವಿಕ ಸಾವಿಗೆ ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ನ ನಿವಾಸಿಗಳು, ಸ್ನೇಹಿತರು, ಸಂಬಂಧಿಕರು, ಅಮೆರಿಕಾದಲ್ಲಿ
ನೆಲೆಸಿರುವ ಕನ್ನಡಿಗರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಅತ್ಯಂತ ಮುದ್ದಾದ ಕುಟುಂಬದ ದುರಂತ ಸಾವಿಗೆ ಕಂಬನಿ ಮಿಡಿಯಿತು. ಕ್ಯಾಂಡಲ್ ಹಿಡಿದು ಕಣ್ಣೀರು ಸುರಿಸುತ್ತಾ ಸಂತಾಪ ಸೂಚಿಸಿದರು.

ಅಮೆರಿಕಾದಲ್ಲಿನ ಸಂಪ್ರದಾಯದಂತೆ ದಾವಣಗೆರೆ(Davanagere)ಯ ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ, ಪುತ್ರ ಯಶ್ ಹೊನ್ನಾಳ ಫೋಟೋ ಇಟ್ಟು, ಕ್ಯಾಂಡಲ್ ಗಳನ್ನು ಹಚ್ಚಿ ಸಂತಾಪ ಸೂಚಿಸಲಾಯಿತು. ಈ ವೇಳೆ ಮೃತರ ಆತ್ಮಕ್ಕೆ ಅಮೆರಿಕಾದ ಸಂಪ್ರದಾಯದಂತೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಯಿತು.

T

ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ನ ಅಕ್ಕಪಕ್ಕದ ನಿವಾಸಿಗಳು, ಸ್ನೇಹಿತರು, ಅಮೆರಿಕಾದಲ್ಲಿಯೇ ಇದ್ದ ಕೆಲ ಸಂಬಂಧಿಕರು ಯೋಗೇಶ್ ಹೊನ್ನಾಳ ನೆಲೆಸಿದ್ದ ಮನೆಯೊಳಗೆ ಭಾವಚಿತ್ರಗಳನ್ನು ಇಟ್ಟು ಹೂವಿನಿಂದ ಅಲಂಕರಿಸಿ, ಕ್ಯಾಂಡಲ್ ಹಚ್ಚಿ ನೋವಿನಿಂದಲೇ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸುದ್ದಿಯನ್ನೂ ಓದಿ: 

SUSPECT DEATH BIG EXCLUSIVE STORY: ಸಾವಿನ ಸುತ್ತ ಅನುಮಾನದ ಹುತ್ತ: ಅಮೆರಿಕಾದಲ್ಲಿ ಮೂವರು ಸಾವಿನ ಸುತ್ತ ಗಿರಕಿ ಹೊಡೆಯುತ್ತಿರುವ ಮೂರು ಕಾರಣಗಳು…!

ಈ ವೇಳೆ ಮಾತನಾಡಿದ ನೆರೆಹೊರೆಯವರು, ದಾವಣಗೆರೆ (Davanagere) ಮೂಲದ ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ ಹಾಗೂ ಯಶ್ ಅನೋನ್ಯವಾಗಿದ್ದರು. ಎಲ್ಲರೊಟ್ಟಿಗೆ ಬೆರೆಯುತ್ತಿದ್ದವರು. ಯಾರನ್ನೂ ಎದುರು ಹಾಕಿಕೊಂಡವರಲ್ಲ. ಒಳ್ಳೆಯ ಕುಟುಂಬವಾಗಿತ್ತು. ನೆರೆಹೊರೆಯವರ ಜೊತೆಗೂ ಉತ್ತಮ ಬಾಂಧವ್ಯ ಇತ್ತು. ಯೋಗೇಶ್ ಹಾಗೂ ಪ್ರತಿಭಾ ಅವರು ಕೆಲಸವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದ್ರೆ, ಏನಾಯ್ತು ಎಂಬುದು ಇನ್ನೂ ಗೊತ್ತಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಯಶ್ ಫೋಟೋ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ:

ಯೋಗೇಶ್ ಹೊನ್ನಾಳ ಮನೆಯಲ್ಲಿ ದಂಪತಿಯ ಫೋಟೋ ಹಾಗೂ ಯಶ್ ಫೋಟೋವನ್ನು ಇಡಲಾಗಿತ್ತು. ಆದ್ರೆ, ಗೋಡೆಯ ಮೇಲಿದ್ದ ಯಶ್ ಫೋಟೋ ನೋಡಿದರೆ ಸಾಕು ಎಂಥವರ ಕಣ್ಣಲ್ಲಿ ನೀರು ಜಿನುಗುತ್ತದೆ. ಮುದ್ದಾದ ಮಗು ಈ ಲೋಕ ಬಿಟ್ಟು ಹೋಗಿದೆ. ಮಗುವನ್ನು ನೋಡುತ್ತಿದ್ದಂತೆ ಕೆಲವರು ಭಾವುಕರಾದರೆ, ಮತ್ತೆ ಕೆಲವರು ಕಣ್ಣೀರು ಸುರಿಸಿದರು.

ಎಂಟು ದಿನಗಳ ಹಿಂದೆ ಇದ್ದವರು ಇಂದು ಎಲ್ಲ ಎಂಬುದನ್ನು ಊಹಿಸಿಕೊಳ್ಳಲು ಆಗುತ್ತಿರಲಿಲ್ಲ. ನಾವು ನಮ್ಮ ಕೆಲಸದಲ್ಲಿ ಬ್ಯುಸಿ ಇದ್ದೆವು. ಯಾವಾಗ ಪೊಲೀಸರು ಬಂದರೋ ಆಗಲೇ ಈ ವಿಷಯ ಗೊತ್ತಾಗಿದ್ದು. ನಮಗೂ ಈ ಸಾವು ಹೇಗಾಯ್ತು ಎಂಬ ಕುತೂಹಲದ ಜೊತೆಗೆ ಆತಂಕವೂ ಇದೆ ಎಂದು ಸ್ಥಳೀಯರು ತಿಳಿಸಿದರು.

Exit mobile version