SUDDIKSHANA KANNADA NEWS/ DAVANAGERE/ DATE:26_07_2025
ದಾವಣಗೆರೆ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, 18 ಕುರಿಗಳು ಸಾವನ್ನಪ್ಪಿದ್ದು, 5 ಕುರಿಗಳಿಗೆ ಗಂಭೀರ ಗಾಯವಾದ ಘಟನೆ ಚನ್ನಗಿರಿ ತಾಲ್ಲೂಕಿನ ಮಂಟರಘಟ್ಟ ಗ್ರಾಮದಲ್ಲಿ
ನಡೆದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಂಟರಘಟ್ಟಗ್ರಾಮದ ಸುರೇಶ್ ಎಂಬುವವರಿಗೆ ಸೇರಿದ ಕುರಿಗಳಾಗಿವೆ. ಗ್ರಾಮದ ಹೊರವಲಯದ ಶೆಡ್ ನಲ್ಲಿ ಕುರಿಗಳನ್ನು ಕಟ್ಟಲಾಗಿತ್ತು. ಏಕಾಏಕಿ 20ಕ್ಕೂ ಅಧಿಕ ಬೀದಿನಾಯಿಗಳಿಂದ
ದಾಳಿ ನಡೆದಿದೆ.
READ ALSO THIS STORY: SPECIAL STORY: ಚಾಣಾಕ್ಷ ನಾಯಕ ಕಾಂಗ್ರೆಸ್ ಕಟ್ಟಾಳು “ಗಜೇಂದ್ರ” ಜಗನ್ನಾಥ
ಮಳೆ ಹಿನ್ನೆಲೆ ಕೊಟ್ಟಿಗೆಯಲ್ಲಿ 100 ಕುರಿಗಳನ್ನು ಸುರೇಶ್ ಕಟ್ಟಿದ್ದರು. ಮಧ್ಯಾಹ್ನದ ವೇಳೆ ಏಕಾಏಕಿ ದಾಳಿ ಮಾಡಿದ್ದ ಬೀದಿ ನಾಯಿಗಳು ಕ್ಷಣಾರ್ಧದಲ್ಲಿ ರಣಾಂಗಣ ಮಾಡಿ 18 ಕುರಿ ಬಲಿ ಪಡೆದಿವೆ. ಸತ್ತ ಕುರಿಗಳ ಮುಂದೆ ಮಾಲೀಕನ ಆಕ್ರಂದನ ಮುಗಿಲು ಮುಟ್ಟಿದೆ.