Site icon Kannada News-suddikshana

ಕನಸು ನನಸು, ಪುತ್ರನ ಸೆಂಚುರಿ ಕಣ್ತುಂಬಿಕೊಂಡ ತಂದೆ: ಅಪ್ಪ-ಮಗನ ಅಪರೂಪ ಗಳಿಗೆಗೆ ಸಾಕ್ಷಿಯಾಯ್ತು ಎಂಸಿಜಿ!

SUDDIKSHANA KANNADA NEWS/ DAVANAGERE/ DATE:28-12-2024

ಮೇಲ್ಬರ್ನ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಸೆಂಚುರಿ ಬಾರಿಸಲು ಕೇವಲ ಒಂದು ರನ್ ಬೇಕಿತ್ತು. ಆಗ ನಿತೀಶ್ ರೆಡ್ಡಿ ತಂದೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪುತ್ರ ಜೋರಾಗಿ ಬ್ಯಾಟ್ ಬೀಸುತ್ತಿದ್ದಂತೆ ತಂದೆಯಲ್ಲಿದ್ದ ಆತಂಕ ದೂರವಾಗಿ ಚೆಂಡು ಬೌಂಡರಿಗೆರೆ ದಾಟಿತು. ಪುಟ್ಟ ಮಗುವಿನಂತೆ ಪುತ್ರ ಶತಕ ಬಾರಿಸುತ್ತಿದ್ದಂತೆ ತಂದೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಗ್ಯಾಲರಿಯಲ್ಲಿದ್ದ ನಿತೀಶ್ ಕುಮಾರ್ ರೆಡ್ಡಿ ತಂದೆಗೆ ಪುತ್ರ 90 ರನ್ ಗಳಿಸಿದ ಮೇಲೆ ಟೆನ್ಶನ್ ಶುರುವಾಗಿತ್ತು. ಪ್ರತಿ ರನ್ ಸಹ ತದೇಕಚಿತ್ತದಿಂದ ನೋಡುತ್ತಿದ್ದರು. ವಾಷಿಂಗ್ಟನ್ ಸುಂದರ್ ಹಾಗೂ ಬೂಮ್ರಾ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಮತ್ತಷ್ಟು ಆತಂಕ ಹೆಚ್ಚಾಯಿತು. ಈ ವೇಳೆ ಸಿರಾಜ್ ಅಹ್ಮದ್ ರಕ್ಷಣಾತ್ಮಕ ಆಟ ಆಡಿ ಸ್ಟ್ರೈಕ್ ಅನ್ನು ನಿತೀಶ್ ಕುಮಾರ್ ರೆಡ್ಡಿಗೆ ನೀಡಿದರು. ಸಿಕ್ಕ ಅವಕಾಶ ಬಳಸಿಕೊಂಡ ನಿತೀಶ್ ಕುಮಾರ್ ಚೆಂಡನ್ನು ವೇಗವಾಗಿ ಬಾರಿಸುವ ಮೂಲಕ ಶತಕ ಬಾರಿಸಿ ಸಂಭ್ರಮಿಸಿದರು.

ಎಂಸಿಜಿಯಲ್ಲಿ ಕನಸು ನನಸಾಗಿದೆ ಎಂದು ನಿತೀಶ್ ರೆಡ್ಡಿ ತಂದೆ ಮುತಾಯಲಾ ರೆಡ್ಡಿ ಹೇಳಿದರು. ಎಂಸಿಜಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರ ಚೊಚ್ಚಲ ಟೆಸ್ಟ್ ಶತಕವು ಐತಿಹಾಸಿಕ ಮತ್ತು ಭಾವನಾತ್ಮಕ ಕ್ಷಣವಾಗಿತ್ತು ಎಂದು ಹೇಳಿದರು

21 ವರ್ಷದ ನಿತೀಶ್ ಕುಮಾರ್ ರೆಡ್ಡಿ ಬ್ಯಾಟಿಂಗ್ ಅನ್ನು ತಂದೆ ಮುತಾಯಲಾ ರೆಡ್ಡಿ ನೋಡಿದರು. ತುಂಬಿದ್ದ ಎಸಿಜಿಯಲ್ಲಿ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದರು. ನಿತೀಶ್ ಅವರು ಮೂರು ಅಂಕಿಗಳ ಗಡಿ ದಾಟಲು ಲಾಫ್ಟೆಡ್ ಆನ್-ಡ್ರೈವ್ ಅನ್ನು ಆಡಿದಾಗ, 60,000 ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಆದ್ರೆ, ಈ ಪೈಕಿ ಒಬ್ಬ ವ್ಯಕ್ತಿಗೆ ಕಣ್ಣೀರು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅವನ ತಂದೆ, ತನ್ನ ಮಗನಿಗಾಗಿ ತನ್ನ ಸ್ವಂತ ಕನಸುಗಳನ್ನು ಬದಲಾಯಿಸಿಕೊಂಡ ವ್ಯಕ್ತಿ, ಅವನ ಹೃದಯದ ಪ್ರತಿಯೊಂದು ಬಡಿತದಲ್ಲೂ ಹೆಮ್ಮೆಯಿಂದ ನೋಡುತ್ತಿದ್ದರು.

2ನೇ ದಿನದಂದು ಆಸ್ಟ್ರೇಲಿಯದ ಬೌಲಿಂಗ್ ದಾಳಿಯ ಬ್ಯಾರೆಲ್‌ನ ಕೆಳಗೆ ದಿಟ್ಟಿಸುತ್ತಿದ್ದ ಭಾರತವು 191/6 ಕ್ಕೆ ತತ್ತರಿಸಿತ್ತು. ಹೊಸ ಚೆಂಡಿನಲ್ಲಿ ಪ್ಯಾಟ್ ಕಮ್ಮಿನ್ಸ್ ಘರ್ಜಿಸಿದರು. ನಾಥನ್ ಲಿಯಾನ್ ಸ್ಪಿನ್ ಸಂಕಷ್ಟಕ್ಕೀಡಾಗುವಂತೆ ಮಾಡಿತ್ತು. ಆದ್ರೆ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಭಾರತವು 358 ರನ್ ಗಳಿಸಲು ಸಹಕಾರಿಯಾದರು.

ಇನ್ನು ನಿತೀಶ್ ಕುಮಾರ್ ರೆಡ್ಡಿ ಸೆಂಚುರಿ ಬಾರಿಸುತ್ತಿದ್ದಂತೆ ತಂದೆ ಖುಷಿ ತಡೆಯಲಾರದೇ ಆನಂದಭಾಷ್ಪ ಸುರಿಸಿದರು. ವಿದೇಶಿ ನೆಲದಲ್ಲಿ ಪುತ್ರನ ಆಟ ನೋಡುವ ಜೊತೆಗೆ ತಂಡವನ್ನು ಫಾಲೋ ಆನ್ ನಿಂದ ಪಾರು ಮಾಡಿದ್ದು, ದಿನದಂತ್ಯಕ್ಕೆ
104 ರನ್ ಗಳಿಸಿ ಔಟಾಗದೇ ಉಳಿದ ನಿತೀಶ್ ಕುಮಾರ್ ರೆಡ್ಡಿ ಆಟಕ್ಕೆ ತಂದೆ ಮನಸೋತರು. ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ಮಗ ಇಂದು ವಿದೇಶಿ ನೆಲದಲ್ಲಿ ಸೆಂಚುರಿ ಬಾರಿಸುವುದು ಸಾಮಾನ್ಯ ಸಾಧನೆ ಅಲ್ಲ. ನನ್ನ ಕನಸನ್ನು ಪುತ್ರ ನನಸು ಮಾಡಿದ
ಎಂದು ಹೆಮ್ಮೆಯಿಂದ ಮುತಾಯಲಾ ರೆಡ್ಡಿ ಹೇಳಿದರು.

Exit mobile version