ಬೆಂಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ಪಕ್ಷವು ದಶಕಗಳ ಕಾಲ ಜತೆಗಿದ್ದ ಮಿತ್ರಪಕ್ಷವನ್ನೇ ಸ್ವಾರ್ಥಕ್ಕಾಗಿ ಬಲಿ ಕೊಡಲು ಹೊರಟಿತ್ತು. ಇದಕ್ಕೆ ತಕ್ಕ ಪಾಠ ಉತ್ತರ ಸಿಕ್ಕಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಅವರು ರಾಜಕೀಯ ಲಾಭಕ್ಕಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು “ಸಹೋದರ” ಎಂದು ಕರೆಯುತ್ತಾರೆ, ಆದರೆ ತಮಗೆ ಅನುಕೂಲವಿಲ್ಲದಾಗ ಅದೇ ಸಹೋದರನಿಗೆ ಬೆನ್ನಿಗೆ ಚೂರಿ ಹಾಕಿ ದ್ರೋಹ ಎಸಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವ ಹೆಸರಿನಲ್ಲಿ ಕಾಂಗ್ರೆಸ್ ಮಾಡುತ್ತಿರುವ ನಾಟಕ ಬಯಲಾಗಿದೆ ಎಂದಿರುವ ವಿಜಯೇಂದ್ರ, ಕಾಂಗ್ರೆಸ್ನ ಈ ರಾಜಕೀಯ ಪ್ಲಾನ್ ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಟೀಕಿಸಿದ್ದಾರೆ.
ಸ್ವಂತ ಬಲದ ಮೇಲೆ ಗೆಲ್ಲದೆ ಮೈತ್ರಿಕೂಟದ ಬೆಂಬಲದಿಂದ ಗೆದ್ದುಕೊಂಡು, ಕೊನೆಗೆ ಅದೇ ಮಿತ್ರಪಕ್ಷಕ್ಕೆ ಬೆನ್ನುಹಾಕಿರುವುದು ಕಾಂಗ್ರೆಸ್ನ ನಿಜವಾದ ಬಣ್ಣವನ್ನು ಬಯಲು ಮಾಡಿದೆ ಎಂದು ಅವರು ಟೀಕಿಸಿದ್ದಾರೆ.
ಎರಡು ದಶಕಗಳ ಮೈತ್ರಿಗೆ ದ್ರೋಹ: ದಶಕಗಳ ಕಾಲ ಜತೆಗಿದ್ದ ಹಳೆಯ ಮಿತ್ರಪಕ್ಷ ಡಿಎಂಕೆ ಜತೆಗಿನ ಸಂಬಂಧವನ್ನು ಕಾಂಗ್ರೆಸ್ ಕೇವಲ ಸ್ವಾರ್ಥ ರಾಜಕೀಯಕ್ಕಾಗಿ ಬಲಿ ನೀಡುತ್ತಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ದಕ್ಷಿಣ ಭಾರತದ ಹಿತಾಸಕ್ತಿ ಬಲಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯದ ಭವಿಷ್ಯವನ್ನೇ ಪಣಕ್ಕಿಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ವೈಯಕ್ತಿಕ ಸ್ವಾರ್ಥ: ದೇಶದ ಅಥವಾ ರಾಜ್ಯಗಳ ಕಲ್ಯಾಣಕ್ಕಿಂತ ರಾಹುಲ್ ಗಾಂಧಿ ಅವರಿಗೆ ತಮ್ಮ ಸ್ವಂತ ರಾಜಕೀಯ ಭವಿಷ್ಯದ ಚಿಂತನೆ ಮಾತ್ರ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರ ಈ ಇಬ್ಬಂದಿ ರಾಜಕಾರಣವನ್ನು ಮೈತ್ರಿಕೂಟದ ಪಕ್ಷಗಳೇ ಈಗ ಅರ್ಥ ಮಾಡಿಕೊಂಡಿವೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.





