Home ದಾವಣಗೆರೆ “ನನ್ನ ದೇಹ, ನನ್ನ ಇಷ್ಟ” ಎನ್ನುವವರಿಗೆ ಪ್ರಶ್ನೆ: ಬ್ರಹ್ಮಚರ್ಯ ಆಯ್ಕೆ ಮಾಡಿಕೊಂಡ ಬ್ರಿಟನ್ ವಿದ್ಯಾರ್ಥಿನಿ ಸಮೀಕ್ಷಾ ಭಟ್ಟಾಚಾರ್ಜಿಗೆ ಸ್ತ್ರೀವಾದಿಗಳ ವಿರೋಧೇಕೆ?
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

“ನನ್ನ ದೇಹ, ನನ್ನ ಇಷ್ಟ” ಎನ್ನುವವರಿಗೆ ಪ್ರಶ್ನೆ: ಬ್ರಹ್ಮಚರ್ಯ ಆಯ್ಕೆ ಮಾಡಿಕೊಂಡ ಬ್ರಿಟನ್ ವಿದ್ಯಾರ್ಥಿನಿ ಸಮೀಕ್ಷಾ ಭಟ್ಟಾಚಾರ್ಜಿಗೆ ಸ್ತ್ರೀವಾದಿಗಳ ವಿರೋಧೇಕೆ?

Share
ಸಮೀಕ್ಷಾ ಭಟ್ಟಾಚಾರ್ಜಿ
Share

ಲಂಡನ್: ಆಧುನಿಕ ಕಾಲದ ‘ಹುಕಪ್ ಕಲ್ಚರ್’  ಮತ್ತು ಡೇಟಿಂಗ್ ಆ್ಯಪ್‌ಗಳ ಸಂಸ್ಕೃತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಮದುವೆಗೂ ಮುನ್ನ ಬ್ರಹ್ಮಚರ್ಯ ಕಾಪಾಡಿಕೊಳ್ಳುವುದೇ ಶ್ರೇಷ್ಠ ಎಂದು ಪ್ರತಿಪಾದಿಸಿರುವ ಬ್ರಿಟನ್‌ನ 19 ವರ್ಷದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸಮೀಕ್ಷಾ ಭಟ್ಟಾಚಾರ್ಜಿ  ಅವರು ಜಾಗತಿಕ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಇವರ ಈ ಸ್ಪಷ್ಟ ಹಾಗೂ ಸಾಂಪ್ರದಾಯಿಕ ನಿಲುವು ಒಂದು ಕಡೆ ವ್ಯಾಪಕ ಮೆಚ್ಚುಗೆ ಪಡೆದರೆ, ಮತ್ತೊಂದೆಡೆ ನಕಲಿ ಸ್ತ್ರೀವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿರುವ ಸಮೀಕ್ಷಾ, ತಮಗೆ ಎಂದಿಗೂ ಕ್ಯಾಶುಯಲ್ ಸಂಬಂಧಗಳ ಬಗ್ಗೆ ಆಸಕ್ತಿ ಇರಲಿಲ್ಲ ಮತ್ತು ತಾವು ಇದುವರೆಗೂ ಒಮ್ಮೆಯೂ ನೈಟ್‌ಕ್ಲಬ್‌ಗೆ ಕಾಲಿಟ್ಟಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಇಂದಿನ ಯುವಪೀಳಿಗೆಯಲ್ಲಿ ಕನ್ಯತ್ವವನ್ನುಇನ್ನು ಮುಂದೆ ಅವಮಾನಕರ ವಿಷಯವಾಗಿ ನೋಡುತ್ತಿಲ್ಲ ಬದಲಿಗೆ ಎಲ್ಲರೊಂದಿಗೆ ಬೆರೆಯಲು ದೈಹಿಕ ಸಂಬಂಧ ಬೆಳೆಸಲೇಬೇಕು ಎಂಬ ಒತ್ತಡದಿಂದ ಜನರು ಬೇಸತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವ್ಯಾಪಾರವಾದ ಸಂಬಂಧಗಳು: ಡೇಟಿಂಗ್ ಆ್ಯಪ್‌ಗಳು, ‘ಘೋಸ್ಟಿಂಗ್’ (Ghosting – ದಿಢೀರನೆ ಸಂಪರ್ಕ ಕಡಿದುಕೊಳ್ಳುವುದು) ಮತ್ತು ಅರ್ಥವಿಲ್ಲದ ‘ಸಿಚುಯೇಶನ್‌ಶಿಪ್’ಗಳಿಂದಾಗಿ (Situationships) ಇಂದಿನ ಡೇಟಿಂಗ್ ವ್ಯವಸ್ಥೆಯು ಕೇವಲ ಒಂದು ವ್ಯಾಪಾರದ ವಹಿವಾಟಿನಂತಾಗಿದೆ ಎಂದು ಸಮೀಕ್ಷಾ ಕಳವಳ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಸೀಮಿತವಾದ ಸಾನ್ನಿಧ್ಯ: ದೈಹಿಕ ಸಾನ್ನಿಧ್ಯ ಎಂಬುದು ಕೇವಲ ಬದ್ಧತೆಯುಳ್ಳ ಸಂಬಂಧಕ್ಕೆ, ಅದರಲ್ಲೂ ವಿಶೇಷವಾಗಿ ವಿವಾಹ ಬಂಧಕ್ಕೆ ಮಾತ್ರ ಸೀಮಿತವಾಗಿರಬೇಕು ಎಂಬುದು ಅವರ ದೃಢ ನಿಲುವು. ಹುಕಪ್ ಸಂಸ್ಕೃತಿಯನ್ನು ತಿರಸ್ಕರಿಸಿ ಅನೇಕ ಯುವಕ-ಯುವತಿಯರು ಒಂಟಿಯಾಗಿರಲು ಬಯಸುತ್ತಿದ್ದಾರೆ.

ಸ್ತ್ರೀವಾದಿಗಳ ಇಬ್ಬಂದಿತನಕ್ಕೆ ನೆಟ್ಟಿಗರ ಆಕ್ರೋಶ: ಸಮೀಕ್ಷಾ ಅವರ ಈ ನಿಲುವು ಹೊರಬಿದ್ದ ಬೆನ್ನಲ್ಲೇ, ಒಂದು ವರ್ಗದ ಸ್ತ್ರೀವಾದಿಗಳು ಅವರನ್ನು ಟೀಕಿಸಿದ್ದು ನೆಟ್ಟಿಗರಲ್ಲಿ ಆಕ್ರೋಶ ಮೂಡಿಸಿದೆ.

“ಯಾವಾಗಲೂ ‘ನನ್ನ ದೇಹ, ನನ್ನ ಇಷ್ಟ’ ಎನ್ನುವವರು, ಒಬ್ಬ ಯುವತಿ ಸ್ವಂತ ಇಚ್ಛೆಯಿಂದ ಬ್ರಹ್ಮಚರ್ಯ ಆಯ್ಕೆ ಮಾಡಿಕೊಂಡಾಗ ಏಕೆ ವಿರೋಧಿಸುತ್ತಾರೆ?” ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯ ಮತ್ತು ಆಧುನಿಕ ಸಂಬಂಧಗಳ ನೈತಿಕತೆಯ ಕುರಿತು ಸಮೀಕ್ಷಾ ಅವರ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Share

Recent Posts

Recent Comments

No comments to show.
Related Articles