Home ಕ್ರೈಂ ನ್ಯೂಸ್ ಅಪ್ಪ ಅಮ್ಮ ಕಳೆದುಕೊಂಡಿದ್ದವನಿಗೆ ಆಶ್ರಯ ಕೊಟ್ಟವನ ಮಗಳನ್ನೇ ಪ್ರೀತಿಸಿದ್ದ: ಆತ್ಮಹತ್ಯೆ ಮಾಡಿಕೊಳ್ಳೋಣವೆಂದು ನಂಬಿಸಿ ಇಲಿ ಪಾಷಾಣ ಕುಡಿಸಿ ಯುವತಿ ಕೊಂದ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಪ್ಪ ಅಮ್ಮ ಕಳೆದುಕೊಂಡಿದ್ದವನಿಗೆ ಆಶ್ರಯ ಕೊಟ್ಟವನ ಮಗಳನ್ನೇ ಪ್ರೀತಿಸಿದ್ದ: ಆತ್ಮಹತ್ಯೆ ಮಾಡಿಕೊಳ್ಳೋಣವೆಂದು ನಂಬಿಸಿ ಇಲಿ ಪಾಷಾಣ ಕುಡಿಸಿ ಯುವತಿ ಕೊಂದ!

Share
ಆತ್ಮಹತ್ಯೆ
Share

ಫರಿದಾಬಾದ್: ಹರಿಯಾಣದ ಫರಿದಾಬಾದ್‌ನಲ್ಲಿ ನಡೆದ ಘಟನೆಯೊಂದರಲ್ಲಿ, 19 ವರ್ಷದ ಕಾಲೇಜು ವಿದ್ಯಾರ್ಥಿನಿ ಅರುಣಾ ಸಿಂಗ್ ಎಂಬುವವರಿಗೆ ನಕಲಿ ಆತ್ಮಹತ್ಯೆ ಒಪ್ಪಂದದ ನೆಪದಲ್ಲಿ ಇಲಿ ವಿಷ ನೀಡಿ ಹತ್ಯೆಗೈದ ಆರೋಪದ ಮೇಲೆ 24 ವರ್ಷದ ವಿಪಿನ್ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 23 ರಂದು ಹೋಟೆಲ್ ಕೊಠಡಿಯಲ್ಲಿ ಈ ಕೃತ್ಯ ನಡೆದಿದ್ದು, ನವೆಂಬರ್ 24 ರಂದು ಯುವತಿಯ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ತೀವ್ರ ವಿಚಾರಣೆಯ ಬಳಿಕ ಶುಕ್ರವಾರ ಆರೋಪಿಯನ್ನು ಬಂಧಿಸಿ ಮೂರು ದಿನಗಳ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಮೃತ ಯುವತಿ ಅರುಣಾ ಸಿಂಗ್ ಸೋಮವಾರ ಮುಂಜಾನೆ ಕಾಲೇಜಿಗೆಂದು ಮನೆಯಿಂದ ತೆರಳಿದ್ದು, ಆಕೆಯ ಸಹೋದರ ಮೆಟ್ರೋ ನಿಲ್ ಅಲ್ಲಿ ಬಿಟ್ಟು ಬಂದಿದ್ದರು. ಅಲ್ಲಿಂದ ವಿಪಿನ್ ಯಾದವ್ ಆಕೆಯನ್ನು ಬೈಕ್‌ನಲ್ಲಿ ಸರೈ ಖ್ವಾಜಾ ಪ್ರದೇಶದ ಹೋಟೆಲ್‌ಗೆ ಕರೆದೊಯ್ದಿದ್ದನು.

ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಂಬಿಸಿ, ನೀರಿನಲ್ಲಿ ಇಲಿ ವಿಷ ಬೆರೆಸಿ ಅರುಣಾಳಿಗೆ ಕುಡಿಸಿ, ನಂತರ ಕೋಣೆಗೆ ಹೊರಗಿನಿಂದ ಬೀಗ ಜಡಿದು ತಾನು ಪರಾರಿಯಾಗಿದ್ದನು. ತಾನು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳದೆ ಕೇವಲ ಪ್ರೇಯಸಿಯನ್ನು ಕೊಲೆಗೈದು ಪರಾರಿಯಾಗಿರುವ ಈ ಪ್ರಕರಣವು ಈಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ.

ಆರೋಪಿಯ ಹಿನ್ನೆಲೆ ಮತ್ತು ಆಶ್ರಯ: ಕೋವಿಡ್ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ವಿಪಿನ್ ಯಾದವ್ ತನ್ನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದನು. ಅರುಣಾ ಸಿಂಗ್ ತಂದೆ ಶಂಭು ಅವರು ನೆರೆಯವರಾಗಿದ್ದ ವಿಪಿನ್‌ಗೆ ಆಶ್ರಯ ನೀಡಿ, ಊಟ ವಸತಿ ಕಲ್ಪಿಸುವುದಲ್ಲದೆ ಬೈಕ್ ಕೂಡ ಖರೀದಿಸಿ ಕೊಟ್ಟಿದ್ದರು. ಈ ನಂಟು ಬೆಳೆದು ಯುವತಿಯೊಂದಿಗೆ ಪ್ರೇಮ ಪ್ರಕರಣಕ್ಕೆ ತಿರುಗಿತ್ತು.

ಆರ್ಥಿಕ ಮುಗ್ಗಟ್ಟು ಮತ್ತು ಸಾಲ: ತಂದೆ ಮೃತಪಟ್ಟ ಬಳಿಕ ವಿಪಿನ್ ತನಗೆ ಬಂದಿದ್ದ ಲಾರಿಗಳು, ಜಮೀನು ಹಾಗೂ ಕಾರನ್ನು ಒಂದೊಂದಾಗಿ ಮಾರಾಟ ಮಾಡಿದ್ದನು. ಅಲ್ಲದೆ ತನ್ನ ಮನೆಯನ್ನೂ ಅಡವಿಟ್ಟು ವಿಪರೀತ ಸಾಲದ ಸುಳಿಗೆ ಸಿಲುಕಿದ್ದನು. ಹೋಟೆಲ್ ಕೋಣೆಯಲ್ಲಿ ದೊರೆತ ಪತ್ರವೊಂದರಲ್ಲಿ ಸಾಲದ ವಹಿವಾಟುಗಳ ವಿವರಗಳು ಪತ್ತೆಯಾಗಿವೆ.

ಪೊಲೀಸರಿಂದ ಪತ್ತೆಯಾದ ಸಾಕ್ಷ್ಯಗಳು: ಹೋಟೆಲ್ ಕೊಠಡಿಯಲ್ಲಿ ಪೊಲೀಸರಿಗೆ ಎರಡು ಪ್ರತ್ಯೇಕ ಟಿಪ್ಪಣಿಗಳು ಮತ್ತು ಇಲಿ ವಿಷದ ಬಾಟಲಿ ಸಿಕ್ಕಿವೆ. ಒಂದು ಟಿಪ್ಪಣಿಯಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆಯಲಾಗಿದ್ದು, ಇನ್ನೊಂದರಲ್ಲಿ 50,000 ರೂ. ನಿಂದ 3.5 ಲಕ್ಷ ರೂ. ವರೆಗಿನ ಆರ್ಥಿಕ ವಹಿವಾಟುಗಳ ವಿವರವಿತ್ತು.

ಆದರೆ ತಾನು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದ ಆರೋಪಿ ಯಾದವ್ ಅಲ್ಲಿಂದ ನಾಪತ್ತೆಯಾಗಿದ್ದರಿಂದ ಪೊಲೀಸರಿಗೆ ಅನುಮಾನ ಬಂದು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫರಿದಾಬಾದ್ ಪೊಲೀಸರು ಆರೋಪಿಯನ್ನು ಮೂರು ದಿನಗಳ ಕಸ್ಟತ್ಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share

Recent Posts

Recent Comments

No comments to show.
Related Articles