Home ಕ್ರೀಡೆ ಸೂರ್ಯವಂಶಿ ಅಬ್ಬರಕ್ಕೆ ವಿಶ್ವವೇ ಬೆರಗು: ಮುಂದಿನ 5 ವರ್ಷದೊಳಗೆ ಟೆಸ್ಟ್‌ನಲ್ಲಿ 500 ರನ್ ಬಾರಿಸಲಿದ್ದಾರೆ ವೈಭವ್ ಎಂದ ಖ್ಯಾತ ಮಾಜಿ ಕ್ರಿಕೆಟಿಗ!
ಕ್ರೀಡೆದಾವಣಗೆರೆನವದೆಹಲಿಬೆಂಗಳೂರು

ಸೂರ್ಯವಂಶಿ ಅಬ್ಬರಕ್ಕೆ ವಿಶ್ವವೇ ಬೆರಗು: ಮುಂದಿನ 5 ವರ್ಷದೊಳಗೆ ಟೆಸ್ಟ್‌ನಲ್ಲಿ 500 ರನ್ ಬಾರಿಸಲಿದ್ದಾರೆ ವೈಭವ್ ಎಂದ ಖ್ಯಾತ ಮಾಜಿ ಕ್ರಿಕೆಟಿಗ!

Share
ಸೂರ್ಯವಂಶಿ
Share

ದೋಹಾ: ಇನ್ನು ಐದು ವರ್ಷದೊಳಗೆ ಟೆಸ್ಟ್ ನಲ್ಲಿ 500 ರನ್ ಗಳನ್ನು ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ ವೈಭವ್ ಸೂರ್ಯವಂಶಿ ಬಾರಿಸಲಿದ್ದಾರೆ ಎಂದು ಖ್ಯಾತ ಮಾಜಿ ಕ್ರಿಕೆಟಿಗರೊಬ್ಬರು ಭವಿಷ್ಯ ಹೇಳಿದ್ದಾರೆ. 

 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿರುವ ಭಾರತದ 15ರ ಹರೆಯದ ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Sooryavanshi), ಏಷ್ಯಾಕಪ್ ಮೆನ್ಸ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್‌ನಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಲಿಸ್ಟ್ ‘ಎ’ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ದಾಖಲಿಸಿದ ಹೆಗ್ಗಳಿಗೆ ಇವರ ಪಾತ್ರವಾಗಿದೆ. ಇದಕ್ಕೆ ವಿಶ್ವಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದೆ. ಆದರೆ ಮಾಜಿ ಕ್ರಿಕೆಟಿಗರೊಬ್ಬರು ವೈಭವ್ ಸೂರ್ಯವಂಶಿ ಇನ್ನು ಐದು ವರ್ಷಗಳಲ್ಲಿ ಟೆಸ್ಟ್ ಇನ್ನಿಂಗ್ಸ್ ವೊಂದರಲ್ಲಿ 500 ರನ್ ಬಾರಿಸಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ.

ಕೆವಿನ್ ಪೀಟರ್ಸನ್ ಭವಿಷ್ಯ: ವೈಭವ್ ಅವರ ಈ ಅಸಾಧಾರಣ ಆಟವನ್ನು ನೋಡಿ ದಂಗಾಗಿರುವ ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್, “ಮುಂದಿನ 5 ವರ್ಷಗಳಲ್ಲಿ ವೈಭವ್ ಟೆಸ್ಟ್ ಪಂದ್ಯದಲ್ಲಿ 500 ರನ್ ಗಳಿಸಲಿದ್ದಾರೆ” ಎಂದು ಭವಿಷ್ಯ ನುಡಿದ್ದಾರೆ.

ಮತ್ತೊಂದೆಡೆ, ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ವೈಭವ್ ಪ್ರತಿಭೆಯನ್ನು ಕೊಂಡಾಡುತ್ತಲೇ, ಇಂದಿನ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬೌಲರ್‌ಗಳಿಗೆ ಅವಕಾಶವೇ ಇಲ್ಲದಂತೆ ಬ್ಯಾಟ್ಸ್‌ಮನ್‌ಗಳ ಪರವಾಗಿ ಪಂದ್ಯಗಳು ಸಂಪೂರ್ಣವಾಗಿ ವಾಲುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೇಪಾಳ ಮತ್ತು ಪಾಕಿಸ್ತಾನ ‘ಎ’ ವಿರುದ್ಧ ಆರಂಭಿಕ ಪಂದ್ಯಗಳಲ್ಲಿ ಕಡಿಮೆ ರನ್ ಗಳಿಸಿದ್ದ ವೈಭವ್, ಯುಎಇ ವಿರುದ್ಧದ ಈ ಸ್ಫೋಟಕ ಆಟದ ಮೂಲಕ ಮತ್ತೊಮ್ಮೆ ಜಾಗತಿಕ ಕ್ರಿಕೆಟ್ ವಲಯದ ಗಮನ ಸೆಳೆದಿದ್ದಾರೆ.

ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಈ ಹಿಂದೆ ತಾವೇ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ನಂತರ ಕೇವಲ 53 ಎಸೆತಗಳಲ್ಲಿ ಒಟ್ಟು 204 ರನ್ ಸಿಡಿಸಿ ಅಬ್ಬರಿಸಿದರು.

ಈ ಅಸಾಧಾರಣ ಇನಿಂಗ್ಸ್‌ನಲ್ಲಿ ಕೇವಲ 7 ಬೌಂಡರಿಗಳು ಮತ್ತು ಬರೋಬ್ಬರಿ 28 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಲಿಸ್ಟ್ ‘ಎ’ ಕ್ರಿಕೆಟ್‌ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವ ದಾಖಲೆ ಇದುವರೆಗೆ ಇವರ ಹೆಸರಿಗೆ ಒಲಿದಿದೆ. ಅಲ್ಲದೆ, 384.90ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.

ಅತಿ ವೇಗದ ದ್ವಿಶತಕ: ಲಿಸ್ಟ್ ‘ಎ’ ಕ್ರಿಕೆಟ್ ಮಾದರಿಯಲ್ಲಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿದರು.

ಸಿಕ್ಸರ್‌ಗಳ ಸುರಿಮಳೆ: ತಮ್ಮ ಇನ್ನಿಂಗ್ಸ್‌ನಲ್ಲಿ ಒಟ್ಟು 28 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಲಿಸ್ಟ್ ‘ಎ’ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದರು.

Share

Recent Posts

Recent Comments

No comments to show.
Related Articles