Home ಕ್ರೈಂ ನ್ಯೂಸ್ ಜಮ್ಮು-ಕಾಶ್ಮೀರದಲ್ಲಿ ಪೊಲೀಸರ ಭರ್ಜರಿ ಬೇಟೆ: ಪೊಲೀಸ್ ಅಧಿಕಾರಿ ಹತ್ಯೆ ಸೇರಿ 13 ಗಂಭೀರ ಕೇಸ್‌ನಲ್ಲಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರ ಮೊಹಮ್ಮದ್ ಮನ್ಶಾ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಜಮ್ಮು-ಕಾಶ್ಮೀರದಲ್ಲಿ ಪೊಲೀಸರ ಭರ್ಜರಿ ಬೇಟೆ: ಪೊಲೀಸ್ ಅಧಿಕಾರಿ ಹತ್ಯೆ ಸೇರಿ 13 ಗಂಭೀರ ಕೇಸ್‌ನಲ್ಲಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರ ಮೊಹಮ್ಮದ್ ಮನ್ಶಾ ಬಂಧನ!

Share
ಪೊಲೀಸ್
Share

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆ ಸೇರಿದಂತೆ 13 ಗಂಭೀರ ಅಪರಾಧ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದೆ ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಉಗ್ರನನ್ನು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಮೊಹಮ್ಮದ್ ಮನ್ಶಾ ಬಂಧಿತ ಆರೋಪಿಯಾಗಿದ್ದಾನೆ.

ರಿಯಾಸಿ ಜಿಲ್ಲೆಯ ಥುರೂ ಲಸ್ಸೋಲಿ ನಿವಾಸಿಯಾದ ಮನ್ಶಾ, ಜಮ್ಮು-ಕಾಶ್ಮೀರದ ಅವಂತಿಪೋರಾ ಜಿಲ್ಲೆಯ ಟ್ರಾಲ್  ಪ್ರದೇಶದಲ್ಲಿ ಮಹೋರ್ ಪೊಲೀಸರು, ಜಿಲ್ಲಾ ತಲೆಮರೆಸಿಕೊಂಡವರ ಪತ್ತೆ ದಳ ಹಾಗೂ ಅವಂತಿಪೋರಾ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

2000 ರಿಂದ 2007ರವರೆಗೆ ಸಕ್ರಿಯ ಉಗ್ರನಾಗಿದ್ದ ಈತ, 2007ರಲ್ಲಿ ಭದ್ರತಾ ಪಡೆಗಳಿಗೆ ಶರಣಾಗಿದ್ದನು. ಆದರೆ ತನಿಖೆ ಹಾಗೂ ವಿಚಾರಣೆಯ ವೇಳೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ 13 ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಸರ್ಕಾರದ ವಿರುದ್ಧ ಯುದ್ಧ ಸಾರಿದ ಆರೋಪ ಹಾಗೂ ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣಗಳು ದಾಖಲಾಗಿವೆ.

20 ವರ್ಷಗಳ ಬಳಿಕ ಬಂಧನ: 2000ನೇ ಇಸವಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಯ  ಹತ್ಯೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮನ್ಶಾ, ಡಿಸೆಂಬರ್ 6, 2001ರಂದೇ ನ್ಯಾಯಾಲಯದಿಂದ ಘೋಷಿತ ತಲೆಮರೆಸಿಕೊಂಡ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದ.

ಜಂಟಿ ಕಾರ್ಯಾಚರಣೆ: ರಿಯಾಸಿ ಮತ್ತು ಅವಂತಿಪೋರಾ ಪೊಲೀಸರ ನಿಖರ ಗುಪ್ತಚರ ಮಾಹಿತಿ ಹಾಗೂ ಜಂಟಿ ಕಾರ್ಯಾಚರಣೆಯ ಮೂಲಕ ಟ್ರಾಲ್ ಪ್ರದೇಶದಲ್ಲಿ ಈತನನ್ನು ಬಂಧಿಸಲಾಗಿದೆ.

ನ್ಯಾಯಾಲಯಕ್ಕೆ ಹಾಜರು: ದೀರ್ಘಕಾಲದಿಂದ ಕಾನೂನಿನ ಕಣ್ಣಿಗೆ ಮಣ್ಣೆರೆಚುತ್ತಿದ್ದ ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಡರುಪಡಿಸಿ ಬಾಕಿ ಉಳಿದಿರುವ ವಿಚಾರಣೆಗಳನ್ನು ಎದುರಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಂಡು ತಿರುಗುತ್ತಿದ್ದವರ ವಿರುದ್ಧ ಜಮ್ಮು-ಕಾಶ್ಮೀರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಈ ಯಶಸ್ವಿ ಬಂಧನದಿಂದ ಹಲವು ಹಳೆಯ ಪ್ರಕರಣಗಳಿಗೆ ನ್ಯಾಯ ಸಿಗುವ ನಿರೀಕ್ಷೆಯಿದೆ.

Share

Recent Posts

Recent Comments

No comments to show.
Related Articles