Home ದಾವಣಗೆರೆ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ನಾನೇ ಬಿಜೆಪಿ ಕಚೇರಿಗೆ ಕಾಲಿಟಿಲ್ಲ: ದಾವಣಗೆರೆಯಲ್ಲಿ ಸಿಡಿದೆದ್ದ ಸಿದ್ದೇಶ್ವರ!
ದಾವಣಗೆರೆನವದೆಹಲಿಬೆಂಗಳೂರು

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ನಾನೇ ಬಿಜೆಪಿ ಕಚೇರಿಗೆ ಕಾಲಿಟಿಲ್ಲ: ದಾವಣಗೆರೆಯಲ್ಲಿ ಸಿಡಿದೆದ್ದ ಸಿದ್ದೇಶ್ವರ!

Share
Share

ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ದಾವಣಗೆರೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮೂವರ ಹೆಸರು ಸೂಚಿಸಿದ್ದೆ. ಆದರೆ ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ. ಹಾಗಾಗಿ, ನಾನೇ ಬಿಜೆಪಿ ಕಚೇರಿಗೆ ಕಾಲಿಟಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಮತ್ತೆ ಸಿಡಿದೆದ್ದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನ ಕಾರ್ಯದರ್ಶಿಗಳ ನೇಮಕ ಸಂಬಂಧ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಗಮನಕ್ಕೆ ತಂದಿದ್ದೆ. ಆದರೂ ನಮ್ಮ ಮಾತಿಗೆ ಬೆಲೆ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನೇ ಕಾರ್ಯಕ್ರಮಗಳಿಗೆ ಹೋಗುತ್ತಿಲ್ಲ. ನಾನೇ ಮೂವರು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಿಸಿದ್ದೆವು. ಆದರೆ ಏಕಾಏಕಿ ತೆಗೆದು ಬೇರೆಯವರನ್ನು ನಿಯೋಜಿಸಲಾಗಿದೆ. 60 ದಿನಗಳಲ್ಲಿ ಸರಿಪಡಿಸುವುದಾಗಿ ಹೇಳಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರು ಕಾರ್ಯಕ್ರಮ, ಪ್ರತಿಭಟನೆಗಳಿಗೆ ಕರೆ ಮಾಡಿದರೂ ನಾನು ಹೋಗುತ್ತಿಲ್ಲ ಎಂದು ಹೇಳಿದರು.

2028ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ. ಯಡಿಯೂರಪ್ಪರು ನಾವು ಏನು ಕೇಳಿದರೂ ಕೊಟ್ಟಿದ್ದಾರೆ. ಅವರ ಬಗ್ಗೆ ಆಕ್ಷೇಪಣೆ ಇಲ್ಲ. ಇನ್ನೂ ಯುವಕರಿದ್ದಾರೆ. ಸರಿಪಡಿಸಿಕೊಂಡು ನಡೆಯಬೇಕು. ಯಾರದ್ದೋ ಮಾತು ಕೇಳಿ ನಿರ್ಧಾರ ತೆಗೆದುಕೊಂಡರೆ ನಮ್ಮ ಅಸಮಾಧಾನ ಏನಿಲ್ಲ ಎಂದು ಹೇಳಿದರು.

Share

Recent Comments

No comments to show.
Related Articles