
ದೋಹಾ: ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ‘ಎ’ ತಂಡದ 15 ವರ್ಷದ ವಿಸ್ಮಯ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಅವರು ಜಗತ್ತು ಬೆರಗಾಗುವಂತಹ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಯುಎಇ (UAE) ವಿರುದ್ಧದ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಶತಕ ಹಾಗೂ 40 ಎಸೆತಗಳಲ್ಲಿ 150 ರನ್ಗಳನ್ನು ಸಿಡಿಸಿ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಮತ್ತು ವೇಗದ 150 ರನ್ಗಳ ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಾತ್ರವಲ್ಲ, ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 53 ಎಸೆತಗಳಲ್ಲಿ ಎದುರಿಸಿದ್ದ ವೈಭವ್ ಸೂರ್ಯವಂಶಿ 28 ಸಿಕ್ಸರ್ ಗಳು ಮತ್ತು ಏಳು ಬೌಂಡರಿಗಳನ್ನು ಬಾರಿಸಿ ರಂಜಿಸಿದರು. 204 ರನ್ ಗಳಿಸಿ ಔಟ್ ಆದರು.
ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡವು ಹರ್ಪ್ರೀತ್ ಸಿಂಗ್ ಭಾಟಿಯಾ ಅವರ ತಾಳ್ಮೆಯುತ 130 ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಭಾರತದ ಪರ ದಾಳಿಯೆಸೆದ ಅರ್ಷದ್ ಖಾನ್ 4 ಪ್ರಮುಖ ವಿಕೆಟ್ಗಳನ್ನು ಪಡೆದು ಮಿಂಚಿದರು. ಆದರೆ ಭಾರತಕ್ಕೆ ಇದು ಸವಾಲು ಆಗಲೇ ಇಲ್ಲ. ವೈಭವ್ ಸೂರ್ಯವಂಶಿ ಆಟಕ್ಕೆ ಯುಎಇ ಬೌಲರ್ ಗಳು ಬೆಚ್ಚಿ ಬಿದ್ದರು.
ನಂತರ 250 ರನ್ಗಳ ಗುರಿ ಬೆನ್ನಟ್ಟಿದ ಭಾರತ ‘ಎ’ ಪರ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ, 28 ಎಸೆತಗಳಲ್ಲಿ ಶತಕ ಹಾಗೂ 40 ಎಸೆತಗಳಲ್ಲಿ 150 ರನ್ ಸಿಡಿಸಿದರು. ಅತಿ ದೊಡ್ಡ ಜಯದೊಂದಿಗೆ ಟೂರ್ನಿಯಲ್ಲಿ ತನ್ನ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ವಿಶ್ವ ದಾಖಲೆಯ ಶತಕ ಹಾಗೂ 150: ಕೇವಲ 28 ಎಸೆತಗಳಲ್ಲಿ ಶತಕ ಮತ್ತು 40 ಎಸೆತಗಳಲ್ಲಿ 150 ರನ್ ಗಳಿಸಿ ಲಿಸ್ಟ್-ಎ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ.




