Home ಕ್ರೈಂ ನ್ಯೂಸ್ ಆಕ್ಸ್‌ಫರ್ಡ್ ಉಪನ್ಯಾಸಕ್ಕೆ ತೆರಳುತ್ತಿದ್ದ ಸಿಜೆಪಿ ನಾಯಕ ಸೌರವ್ ದಾಸ್ ಪಾಸ್‌ಪೋರ್ಟ್ ದೆಹಲಿ ಏರ್‌ಪೋರ್ಟ್‌ನಲ್ಲಿ ತಡೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆಕ್ಸ್‌ಫರ್ಡ್ ಉಪನ್ಯಾಸಕ್ಕೆ ತೆರಳುತ್ತಿದ್ದ ಸಿಜೆಪಿ ನಾಯಕ ಸೌರವ್ ದಾಸ್ ಪಾಸ್‌ಪೋರ್ಟ್ ದೆಹಲಿ ಏರ್‌ಪೋರ್ಟ್‌ನಲ್ಲಿ ತಡೆ!

Share
ಸೌರವ್ ದಾಸ್
Share

ನವದೆಹಲಿ: ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಹ-ಸಂಯೋಜಕ ಸೌರವ್ ದಾಸ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ.

ಇಮಿಗ್ರೇಷನ್ ಕೌಂಟರ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ಅನ್ನು ಬ್ಲ್ಯಾಕ್‌ಲಿಸ್ಟ್/ಫ್ಲ್ಯಾಗ್ ಮಾಡಲಾಗಿದೆ ಎಂದು ಸೌರವ್ ದಾಸ್ ಆರೋಪಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಲಂಡನ್‌ಗೆ ಹೊರಡಲು ವಿಮಾನ ಹತ್ತುವ ಮುನ್ನವೇ ತಮ್ಮ ಪಾಸ್‌ಪೋರ್ಟ್ ಅನ್ನು ಅಧಿಕಾರಿಗಳು ತಡೆದಿದ್ದಾರೆ ಎಂದು ಸೌರವ್ ದಾಸ್ ತಿಳಿಸಿದ್ದಾರೆ. ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಎಲ್‌ಎಸ್‌ಇ  ಮತ್ತು ಎಡಿನ್‌ಬರ್ಗ್ ವಿಶ್ವವಿದ್ಯಾಲಯಗಳಲ್ಲಿ ‘ಕಾಕ್ರೋಚ್ ಮೂವ್‌ಮೆಂಟ್’ ಕುರಿತು ಉಪನ್ಯಾಸ ನೀಡಲು ತಮಗೆ ಆಹ್ವಾನವಿತ್ತು ಎಂದು ಅವರು ಹೇಳಿದ್ದಾರೆ. ಆದರೆ ಸರ್ಕಾರದ ಈ ಕ್ರಮದಿಂದ ತಮಗೆ ಯಾವುದೇ ಅಡ್ಡಿಯಾಗುವುದಿಲ್ಲ ಮುಂದಿನ ದಿನಗಳಲ್ಲಿ ಲಂಡನ್ ಹಾಗೂ ಪ್ಯಾರಿಸ್‌ಗೆ ಪ್ರಯಾಣಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಘಟನೆಯ ವಿವರ: ಲಂಡನ್‌ನಲ್ಲಿ ನಡೆಯುವ ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಚರ್ಚೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸೌರವ್ ದಾಸ್ ಅವರ ಪಾಸ್‌ಪೋರ್ಟ್ ಅನ್ನು ದೆಹಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ ತಪಾಸಣೆ ವೇಳೆ ತಡೆಯಲಾಗಿದೆ.

ಸರ್ಕಾರದ ವಿರುದ್ಧ ಆಕ್ರೋಶ: ಸುಶಿಕ್ಷಿತ ಯುವಕರು ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಬೌದ್ಧಿಕ ಚರ್ಚೆಗಳಲ್ಲಿ ಭಾಗವಹಿಸುವುದನ್ನು ಸರ್ಕಾರಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸೌರವ್ ದಾಸ್ ಕಿಡಿಕಾರಿದ್ದಾರೆ.

ಸಿಜೆಪಿ ಪ್ರತಿಕ್ರಿಯೆ: ಸೌರವ್ ದಾಸ್ ಅವರಿಗೆ ಆಕ್ಸ್‌ಫರ್ಡ್‌ನಿಂದ ಆಹ್ವಾನ ಬಂದಿರುವುದನ್ನು ಸಹಿಸದ ಕೆಲವು ಅಧಿಕಾರದಲ್ಲಿರುವ ವ್ಯಕ್ತಿಗಳು ಈ ರೀತಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಆರೋಪಿಸಿದ್ದಾರೆ.

Share
Related Articles