Home ದಾವಣಗೆರೆ “ದ್ವೇಷವನ್ನು ಪ್ರೀತಿಯಾಗಿ ಬದಲಾಯಿಸಿ”: ಗ್ಲೋಬಲ್ ಪೀಸ್ ಹಾನರ್ಸ್ ವೇದಿಕೆಯಲ್ಲಿ ಶಾರುಖ್ ಖಾನ್ ಭಾವುಕ ನುಡಿ, 26/11 ಮತ್ತು ಪಹಲ್ಗಾಮ್ ಹುತಾತ್ಮರಿಗೆ ಗೌರವಾರ್ಪಣೆ!
ದಾವಣಗೆರೆಬೆಂಗಳೂರುಸಿನಿಮಾ

“ದ್ವೇಷವನ್ನು ಪ್ರೀತಿಯಾಗಿ ಬದಲಾಯಿಸಿ”: ಗ್ಲೋಬಲ್ ಪೀಸ್ ಹಾನರ್ಸ್ ವೇದಿಕೆಯಲ್ಲಿ ಶಾರುಖ್ ಖಾನ್ ಭಾವುಕ ನುಡಿ, 26/11 ಮತ್ತು ಪಹಲ್ಗಾಮ್ ಹುತಾತ್ಮರಿಗೆ ಗೌರವಾರ್ಪಣೆ!

Share
ಶಾರುಖ್ ಖಾನ್
Share

ಮುಂಬೈ: ಮುಂಬೈನಲ್ಲಿ ನಡೆದ ‘ಗ್ಲೋಬಲ್ ಪೀಸ್ ಹಾನರ್ಸ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಾಲಿವುಡ್ ನಟ ಶಾರುಖ್ ಖಾನ್, ಜಗತ್ತಿಗೆ ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

ಹಿಂಸೆಯ ಬದಲಿಗೆ ಸಂವಾದಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದ ಅವರು, 26/11 ಮುಂಬೈ ದಾಳಿ, ಪಹಲ್ಗಾಂವ್ ಉಗ್ರದಾಳಿ ಹಾಗೂ ಇತ್ತೀಚಿನ ದೆಹಲಿ ಸ್ಫೋಟಗಳಲ್ಲಿ ಜೀವ ಕಳೆದುಕೊಂಡ ಅಮಾಯಕರಿಗೆ ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾರುಖ್, ದ್ವೇಷವನ್ನು ಪ್ರೀತಿಯನ್ನಾಗಿ ಹೇಗೆ ಬದಲಾಯಿಸಬಹುದು ಎಂದು ತಮ್ಮ ಕಿರಿಯ ಮಗ ಕೇಳಿದ ಪ್ರಶ್ನೆಯನ್ನು ಸ್ಮರಿಸಿದರು. “ಶಾಂತಿ ಎನ್ನುವುದು ದೊಡ್ಡ ಬದಲಾವಣೆಗಳ ಮೂಲಕವಲ್ಲ, ನಮ್ಮೆಲ್ಲರ ಸಣ್ಣ ನಿರ್ಧಾರಗಳಿಂದ ಆರಂಭವಾಗುತ್ತದೆ” ಎಂದು ಅವರು ಹೇಳಿದರು.

ಶಾಂತಿ ಹಾಗೂ ಸಂವಾದಕ್ಕೆ ಕರೆ: ಭಿನ್ನಾಭಿಪ್ರಾಯಗಳಿದ್ದರೂ ಪ್ರತಿಯೊಬ್ಬರ ಕಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ದೇಶವಾದ ಭಾರತವು ಶಾಂತಿ, ಸೌಹಾರ್ದತೆ ಮತ್ತು ಸದ್ಭಾವನೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಶಾರುಖ್ ತಿಳಿಸಿದ್ದಾರೆ.

ಹುತಾತ್ಮರಿಗೆ ನಮನ: ಮುಂಬೈನ 26/11 ಭಯೋತ್ಪಾದನಾ ದಾಳಿ, ಪಹಲ್ಗಾಂವ್ ದಾಳಿ ಹಾಗೂ ದೆಹಲಿ ಸ್ಫೋಟದ ಸಂತ್ರಸ್ತರನ್ನು ಸ್ಮರಿಸಿದ ನಟ, ದೇಶದ ರಕ್ಷಣೆಗಾಗಿ ವೀರಮರಣಪ್ಪಿದ ಸೈನಿಕರ ಶೌರ್ಯವನ್ನು ಕೊಂಡಾಡಿದರು.

ಮುಂದಿನ ಚಿತ್ರ ‘ಕಿಂಗ್’: ವೃತ್ತಿಜೀವನದ ಮುಂಚೂಣಿಯಲ್ಲಿರುವ ಶಾರುಖ್ ಖಾನ್ ಸದ್ಯ ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಚಿತ್ರದ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಮಗಳು ಸುಹಾನಾ ಖಾನ್ ಕೂಡ ನಟಿಸುತ್ತಿದ್ದು, ಡಿಸೆಂಬರ್ 24 ರಂದು ಚಿತ್ರ ಬಿಡುಗಡೆಯಾಗಲಿದೆ.

Share

Recent Posts

Recent Comments

No comments to show.
Related Articles