Home ದಾವಣಗೆರೆ “ಅವಳಿಗೆ ನನಗಿಂತ ಮಗುವಿನ ಮೇಲೆ ಹೆಚ್ಚು ಪ್ರೀತಿ”: ಮಾಜಿ ಪ್ರೆಸ್ ಸೆಕ್ರೆಟರಿ ಕ್ಯಾರೊಲಿನ್ ಲೀವಿಟ್ ಬಗ್ಗೆ ಡೊನಾಲ್ಡ್ ಟ್ರಂಪ್ ತಮಾಷೆ
ದಾವಣಗೆರೆನವದೆಹಲಿಬೆಂಗಳೂರು

“ಅವಳಿಗೆ ನನಗಿಂತ ಮಗುವಿನ ಮೇಲೆ ಹೆಚ್ಚು ಪ್ರೀತಿ”: ಮಾಜಿ ಪ್ರೆಸ್ ಸೆಕ್ರೆಟರಿ ಕ್ಯಾರೊಲಿನ್ ಲೀವಿಟ್ ಬಗ್ಗೆ ಡೊನಾಲ್ಡ್ ಟ್ರಂಪ್ ತಮಾಷೆ

Share
ಡೊನಾಲ್ಡ್ ಟ್ರಂಪ್
Share

ವಾಷಿಂಗ್ಟನ್: ಅಮೆರಿಕದ ಮಾಜಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೀವಿಟ್ ಅವರನ್ನು ಮುಕ್ತಕಂಠದಿಂದ ಕೊಂಡಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಡಳಿತದಿಂದ ನಿರ್ಗಮಿಸಿರುವುದು ತಮಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದಿದ್ದಾರೆ.

ಮಗುವಿನ ಜವಾಬ್ದಾರಿ ಹಾಗೂ ಕುಟುಂಬದ ಸಮಯಕ್ಕಾಗಿ ಲೀವಿಟ್ ಹುದ್ದೆ ತೊರೆದಿರುವುದನ್ನು ಉಲ್ಲೇಖಿಸಿ, “ಅವಳಿಗೆ ನನ್ನಗಿಂತ ತನ್ನ ಮಗು ಮೇಲೆ ಹೆಚ್ಚು ಪ್ರೀತಿ” ಎಂದು ಟ್ರಂಪ್ ತಮಾಷೆಯಾಗಿ ಹೇಳಿದ್ದಾರೆ.

ಫಾಕ್ಸ್ ನ್ಯೂಸ್‌ನ ‘ಸಟರ್ಡೆ ಇನ್ ಅಮೆರಿಕ’ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಲೀವಿಟ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವ ಸಲುವಾಗಿ ಲೀವಿಟ್ ಕಳೆದ ಆಗಸ್ಟ್‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪ್ರಸ್ತುತ ಅವರು ಫಾಕ್ಸ್ ನ್ಯೂಸ್‌ನ ಹೊಸ ಪಾತ್ರದೊಂದಿಗೆ ಗುರುತಿಸಿಕೊಂಡಿದ್ದಾರೆ.

ಬದಲಿ ಹುಡುಕುವುದೇ ಸವಾಲು: ಕ್ಯಾರೊಲಿನ್ ಲೀವಿಟ್ ತಮ್ಮ ಕರ್ತವ್ಯವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದರು. ಅವರ ಸ್ಥಾನಕ್ಕೆ ಬೇರೆ ಸಮರ್ಥ ವ್ಯಕ್ತಿಯನ್ನು ಹುಡುಕುವುದು ಆಡಳಿತಕ್ಕೆ ಕಷ್ಟಕರವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಕುಟುಂಬಕ್ಕೆ ಮೊದಲ ಆದ್ಯತೆ: ಎರಡನೇ ಮಗುವಿನ ಜನನದ ಬಳಿಕ ತಾಯ್ತನ ಹಾಗೂ ವೃತ್ತಿಜೀವನವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದ 28 ವರ್ಷದ ಲೀವಿಟ್, ತಮ್ಮ ಮಕ್ಕಳ ಆರೈಕೆಗಾಗಿ ಶ್ವೇತಭವನದ ಅತ್ಯಂತ ಕಿರಿಯ ಪ್ರೆಸ್ ಸೆಕ್ರೆಟರಿ ಹುದ್ದೆಯಿಂದ ಕೆಳಗಿಳಿದಿದ್ದರು.

ಹೊಸ ಜವಾಬ್ದಾರಿ: ಶ್ವೇತಭವನದ ಜವಾಬ್ದಾರಿಯಿಂದ ಹೊರಬಂದಿರುವ ಲೀವಿಟ್, ನವೆಂಬರ್‌ನಿಂದ ಫಾಕ್ಸ್ ನ್ಯೂಸ್‌ನಲ್ಲಿ ಕೊಡುಗೆದಾರರಾಗಿ ಹೊಸ ಪಯಣ ಆರಂಭಿಸಿದ್ದಾರೆ.

Share

Recent Posts

Recent Comments

No comments to show.
Related Articles