Home ಕ್ರೀಡೆ “ಕ್ರಿಕೆಟ್‌ನಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಪ್ರತಿಭೆಯೇ ಮುಖ್ಯ”: ಎಂಪಿ ಇಮ್ರಾನ್ ಮಸೂದ್ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಮುಮ್ತಾಜ್ ಪಟೇಲ್ ಕೌಂಟರ್!
ಕ್ರೀಡೆದಾವಣಗೆರೆನವದೆಹಲಿಬೆಂಗಳೂರು

“ಕ್ರಿಕೆಟ್‌ನಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಪ್ರತಿಭೆಯೇ ಮುಖ್ಯ”: ಎಂಪಿ ಇಮ್ರಾನ್ ಮಸೂದ್ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಮುಮ್ತಾಜ್ ಪಟೇಲ್ ಕೌಂಟರ್!

Share
ಕ್ರಿಕೆಟ್‌
Share

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದ ಸ್ವಪಕ್ಷೀಯ ಸಂಸದ ಇಮ್ರಾನ್ ಮಸೂದ್ ಅವರ ಹೇಳಿಕೆಯಿಂದ ಕಾಂಗ್ರೆಸ್ ನಾಯಕಿ ಮುಮ್ತಾಜ್ ಪಟೇಲ್ ದೂರ ಸರಿದಿದ್ದಾರೆ. ಕ್ರಿಕೆಟ್‌ನಲ್ಲಿ ಆಟಗಾರರ ಆಯ್ಕೆಯು ಎಂದಿಗೂ ಧರ್ಮಕ್ಕಿಂತ ಫಾರ್ಮ್ ಹಾಗೂ ಪ್ರತಿಭೆಯ ಆಧಾರದ ಮೇಲೆ ಮಾತ್ರ ನಡೆಯುತ್ತದೆಯೇ ಹೊರತು ಧರ್ಮದ ಆಧಾರದಲ್ಲಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಬಳಗದಿಂದ ಕೈಬಿಟ್ಟಿರುವುದು ಅವರ ಧರ್ಮದಿಂದಾಗಿ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮುಮ್ತಾಜ್ ಪಟೇಲ್, ಕ್ರೀಡೆಯಲ್ಲಿ ಇಂತಹ ಕೋಮುವಾದಿ ವಿಭಜನೆಗೆ ಅವಕಾಶವಿಲ್ಲ ಎಂದಿದ್ದಾರೆ.

ಪ್ರತಿಭೆಯೇ ಮಾನದಂಡ: ರಾಷ್ಟ್ರೀಯ ತಂಡದ ಆಯ್ಕೆಯಲ್ಲಿ ಯಾವಾಗಲೂ ಕ್ರಿಕೆಟಿಗರ ಫಾರ್ಮ್ ಮತ್ತು ಅರ್ಹತೆಗೆ ಅಗ್ರಸ್ಥಾನ ನೀಡಲಾಗಿದೆಯೇ ವಿನಃ ರಾಜ್ಯ, ಧರ್ಮ, ಸಂಸ್ಕೃತಿ ಅಥವಾ ಜಾತಿಯ ಆಧಾರದ ಮೇಲೆ ಕ್ರಿಕೆಟ್ ವಿಭಜನೆಯಾಗಿರುವುದನ್ನು ತಾನು ಎಂದಿಗೂ ಕಂಡಿಲ್ಲ ಎಂದು ಮುಮ್ತಾಜ್ ಪಟೇಲ್ ತಿಳಿಸಿದ್ದಾರೆ.

ಇಮ್ರಾನ್ ಮಸೂದ್ ಆರೋಪ: ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡಿದ್ದರೂ ಅವರ ಹೆಸರಿನ ಕಾರಣದಿಂದಲೇ (ಸಿರಾಜ್) ತಂಡದಿಂದ ಹೊರಗಿಡಲಾಗಿದೆ ಎಂದು ಇಮ್ರಾನ್ ಮಸೂದ್ ಆರೋಪಿಸಿದ್ದರು. ಅಲ್ಲದೆ ಮೊಹಮ್ಮದ್ ಶಮಿ ಹಾಗೂ ಸರ್ಫರಾಜ್ ಖಾನ್ ಉದಾಹರಣೆಯನ್ನೂ ಅವರು ಉಲ್ಲೇಖಿಸಿದ್ದರು.

ವಿರೋಧ ಮತ್ತು ಖಂಡನೆ: ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ಮಾಜಿ ಕ್ರಿಕೆಟಿಗ ಮದನ್ ಲಾಲ್ ಹಾಗೂ ಶಿವಸೇನಾ ನಾಯಕ ಆನಂದ್ ದುಬೆ ತೀವ್ರವಾಗಿ ಖಂಡಿಸಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಎಂದಿಗೂ ಧರ್ಮದ ಆಧಾರದ ಮೇಲೆ ತಾರತಮ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share

Recent Posts

Recent Comments

No comments to show.
Related Articles