Home ದಾವಣಗೆರೆ ದಾವಣಗೆರೆಯಲ್ಲಿ ನವೆಂಬರ್ 21 ಮತ್ತು 22ರಂದು ಕಾರಾಗೃಹ ಹಾಗೂ ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ: ಫೇಸ್ ರೆಕಗ್ನಿಷನ್ ಹಾಗೂ ಜಾಮರ್ ಕಡ್ಡಾಯ!
ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ನವೆಂಬರ್ 21 ಮತ್ತು 22ರಂದು ಕಾರಾಗೃಹ ಹಾಗೂ ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ: ಫೇಸ್ ರೆಕಗ್ನಿಷನ್ ಹಾಗೂ ಜಾಮರ್ ಕಡ್ಡಾಯ!

Share
ದಾವಣಗೆರೆ
Share

ದಾವಣಗೆರೆ: ಕಾರಾಗೃಹ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಹಾಗೂ  ಶಾಲಾ ಶಿಕ್ಷಣ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ವಿವಿಧ  ನೇರ ನೇಮಕಾತಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆಯನ್ನ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ. ಎಂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರಾಗೃಹ ಇಲಾಖೆ ಮತ್ತು ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು,

ಜಿಲ್ಲೆಯಲ್ಲಿ ನವೆಂಬರ್ 21 ಮತ್ತು 22 ರಂದು  ಎರಡು ದಿನಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ, ಕಾರಾಗೃಹ ಇಲಾಖೆ ನೇಮಕಾತಿ ಸಾಮಾನ್ಯ ಜ್ಞಾನ ಪರೀಕ್ಷೆಯು ಮಧ್ಯಾಹ್ನ 3 ಸಂಜೆ 4:30 ರವರೆಗೆ ನವೆಂಬರ್ 21, ಶನಿವಾರದಂದು ದಾವಣಗೆರೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಕರ್ನಾಟಕವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ಪರೀಕ್ಷೆಯು ನವೆಂಬರ್‌ 22 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ ಎಂದರು.

ಕಾರಾಗೃಹ ಇಲಾಖೆ ಹುದ್ದೆಗಳಿಗೆ ನಡೆಯುವ ದಾವಣಗೆರೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳ ವಿವರ:

ಒಟ್ಟು ಅಭ್ಯರ್ಥಿಗಳ ಸಂಖ್ಯೆ :6,505.

1. ಡಿ.ಆರ್.ಎಂ. ಸೈನ್ಸ್ ಪಿಯು ಕಾಲೇಜು, ಜಿಲ್ಲಾ ಕ್ರೀಡಾಂಗಣದ ಹತ್ತಿರ, ಹದಡಿ ಮುಖ್ಯ ರಸ್ತೆ, ದಾವಣಗೆರೆ-600 ಸಂಖ್ಯೆ ಅಭ್ಯರ್ಥಿಗಳು

2 .ಮೋತಿವೀರಪ್ಪ ಸರ್ಕಾರಿ ಪಿಯು ಕಾಲೇಜು, ಪಿ.ಜೆ. ಎಕ್ಸ್‌ಟೆನ್ಷನ್, ದಾವಣಗೆರೆ-720 ಸಂಖ್ಯೆ,

3. ಸರ್ಕಾರಿ ಮಾಜಿ ಮುನ್ಸಿಪಲ್ ಪಿಯು ಕಾಲೇಜು, ಕೆ.ಆರ್. ರಸ್ತೆ, ಸಿ.ಎಸ್.ಐ. ಜಿಯೋನ್ ಚರ್ಚ್ ಹತ್ತಿರ, ದಾವಣಗೆರೆ-240 ಸಂಖ್ಯೆ,

4.ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಪಿ.ಜೆ. ಎಕ್ಸ್‌ಟೆನ್ಷನ್, ದಾವಣಗೆರೆ      -720 ಸಂಖ್ಯೆ,

5.ಎಸ್.ಎಲ್. ಪಿಯು ಕಾಲೇಜು, ನಿಜಲಿಂಗಪ್ಪ ಬಡಾವಣೆ, ಶ್ರೀ ಗುರುಬಕ್ಕೇಶ್ವರ ಛತ್ರದ ಹತ್ತಿರ, ದಾವಣಗೆರೆ-384 ಸಂಖ್ಯೆ

6.ಎಸ್.ಎ.ಜಿ.ಬಿ. ಕಂಪ್ಯೂಟರ್ ಪಿಯು ಕಾಲೇಜು, 2ನೇ ಮುಖ್ಯ ರಸ್ತೆ, 2ನೇ ಕ್ರಾಸ್, ಸಾಯಿ ರಾಮ ಪಾರ್ಕ್ ಹತ್ತಿರ, ಪಿ.ಜೆ. ಎಕ್ಸ್‌ಟೆನ್ಷನ್, ದಾವಣಗೆರೆ-408 ಸಂಖ್ಯೆ ,

7.ಅಥಣಿ ಕಂಪ್ಯೂಟರ್ ಪಿಯು ಕಾಲೇಜು, ಎಸ್.ಎಸ್. ಬಡಾವಣೆ, ಎ ಬ್ಲಾಕ್, ಕುಂದವಾಡ ಕೆರೆ ಹತ್ತಿರ, ದಾವಣಗೆರೆ-480 ಸಂಖ್ಯೆ,

8.ಸರ್ಕಾರಿ ಬಾಲಕರ ಪಿಯು ಕಾಲೇಜು, ಪಿ.ಜೆ. ಎಕ್ಸ್‌ಟೆನ್ಷನ್, ರೈಲ್ವೆ ನಿಲ್ದಾಣದ ಹತ್ತಿರ, ದಾವಣಗೆರೆ-792 ಸಂಖ್ಯೆ ,

9.ಸೇಂಟ್ ಜಾನ್ಸ್ ಸೈನ್ಸ್ ಪಿಯು ಕಾಲೇಜು, ಶಿವಕುಮಾರ ಸ್ವಾಮಿ ಬಡಾವಣೆ, ಎಚ್.ಆರ್.ಬಿ. ಬಡಾವಣೆ, ದಾವಣಗೆರೆ-624 ಸಂಖ್ಯೆ,

10. ಅಮೃತ ಪಿಯು ಕಾಲೇಜು, #1179/7 ಎಸ್ ನಿಜಲಿಂಗಪ್ಪ ಬಡಾವಣೆ, ದಾವಣಗೆರೆ-480 ಸಂಖ್ಯೆ,

11.  ಡಾ. ಶಾಮನೂರು ಶಿವಶಂಕರಪ್ಪ ಪಿಯು ಕಾಲೇಜು, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂದೆ, ಎಂಬಿಎ ಮೈದಾನ, ಎಸ್.ಎಸ್. ಬಡಾವಣೆ, ದಾವಣಗೆರೆ-1057 ಸಂಖ್ಯೆ.

ನವೆಂಬರ್ 22 (ಭಾನುವಾರ) ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವಸತಿ ಶಾಲಾ ಶಿಕ್ಷಕರು (ದ್ವಿತೀಯ ದರ್ಜೆ ಬೋಧಕರು-2) ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ಜಿಲ್ಲೆಯ 13 ಕೇಂದ್ರಗಳಲ್ಲಿ ಒಟ್ಟು 7,848 ಅಭ್ಯರ್ಥಿಗಳು ಹಾಜರಾಗಲಿದ್ದಾರೆ,

ದಾವಣಗೆರೆಯ ಪರೀಕ್ಷಾ ಕೇಂದ್ರಗಳ ವಿವರ:

1.ಡಿ ಆರ್ ಎಂ ಸೈನ್ಸ್ ಪಿಯು ಕಾಲೇಜು,ಜಿಲ್ಲಾ ಕ್ರೀಡಾಂಗಣ ಹತ್ತಿರ, ಹದಡಿ ಮುಖ್ಯ ರಸ್ತೆ, ದಾವಣಗೆರೆ, ಅಭ್ಯರ್ಥಿಗಳ ಸಂಖ್ಯೆ 600

2.ಎ ವಿ ಕಮಲಮ್ಮ ಪಿಯು ಕಾಲೇಜು,ಅಕ್ಕಮಹಾದೇವಿ ರಸ್ತೆ, ಪಿ ಜೆ ಎಕ್ಸ್‌ಟೆನ್ಶನ್, ದಾವಣಗೆರೆ- 600

3.ಮೋತಿವೀರಪ್ಪ ಸರ್ಕಾರಿ ಪಿಯು ಕಾಲೇಜು, ಪಿ ಜೆ ಎಕ್ಸ್‌ಟೆನ್ಶನ್, ದಾವಣಗೆರೆ-720

4.ಎ ಆರ್ ಜಿ ಪಿಯು ಕಲಾ ಮತ್ತು ವಾಣಿಜ್ಯ ಕಾಲೇಜು,ಪಿ ಜೆ ಎಕ್ಸ್‌ಟೆನ್ಶನ್, ದಾವಣಗೆರೆ-600

5.ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜು,ಪಿ ಜೆ ಎಕ್ಸ್‌ಟೆನ್ಶನ್, ದಾವಣಗೆರೆ-720,

6.ಎಸ್ ಎಲ್ ಪಿಯು ಕಾಲೇಜು, ನಿಜಲಿಂಗಪ್ಪ ಲೇಔಟ್, ಶ್ರೀ ಗುರುಬಕ್ಕೇಶ್ವರ ಛತ್ರದ ಹತ್ತಿರ, ದಾವಣಗೆರೆ-384

7.ಎಸ್‌ಎಜಿಬಿ ಕಂಪ್ಯೂಟರ್ ಪಿಯು ಕಾಲೇಜು,2ನೇ ಮುಖ್ಯ ರಸ್ತೆ, 2ನೇ ಕ್ರಾಸ್, ಸಾಯಿ ರಾಮ ಪಾರ್ಕ್ ಹತ್ತಿರ, ಪಿ ಜೆ ಎಕ್ಸ್‌ಟೆನ್ಶನ್, ದಾವಣಗೆರೆ-408

8.ಅಥಣಿ ಕಂಪ್ಯೂಟರ್ ಪಿಯು ಕಾಲೇಜು,ಎಸ್ ಎಸ್ ಲೇಔಟ್ ‘ಎ’ ಬ್ಲಾಕ್, ಕುಂದವಾಡ ಕೆರೆ ಹತ್ತಿರ, ದಾವಣಗೆರೆ- 480

9.ಸರ್ಕಾರಿ ಬಾಲಕರ ಪಿಯು ಕಾಲೇಜು,ಪಿ ಜೆ ಎಕ್ಸ್‌ಟೆನ್ಶನ್, ರೈಲ್ವೆ ನಿಲ್ದಾಣದ ಹತ್ತಿರ, ದಾವಣಗೆರೆ-793

10.ಸೇಂಟ್ ಜಾನ್ಸ್ ಸೈನ್ಸ್ ಪಿಯು ಕಾಲೇಜು,ಶಿವಕುಮಾರ ಸ್ವಾಮಿ ಬಡಾವಣೆ, ಎಚ್‌ಆರ್‌ಬಿ ಲೇಔಟ್, ದಾವಣಗೆರೆ-624

11.ಡಾ. ಶಾಮನೂರು ಶಿವಶಂಕರಪ್ಪ ಪಿಯು ಕಾಲೇಜು, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗ, ಎಂಬಿಎ ಮೈದಾನ, ಎಸ್ ಎಸ್ ಲೇಔಟ್, ದಾವಣಗೆರೆ-1080

12. ಎಸ್ ಬಿ ಸಿ ಮಹಿಳಾ ಪ್ರಥಮ ದರ್ಜೆ ಕಾಲೇಜು,ಎಸ್ ಎಸ್ ಲೇಔಟ್ ‘ಎ’ ಬ್ಲಾಕ್, ಕುಂದವಾಡ ಕೆರೆ ಹತ್ತಿರ, ದಾವಣಗೆರೆ- 480

13.ಬಿ ಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು,ಎಸ್ ಎಸ್ ಲೇಔಟ್ ‘ಎ’ ಬ್ಲಾಕ್, ಒಳಾಂಗಣ ಕ್ರೀಡಾಂಗಣದ ಹತ್ತಿರ, ದಾವಣಗೆರೆ- 360.   ಒಟ್ಟು 7848 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿ ಕೊಂಡಿರುವರು.

ಪರೀಕ್ಷಾ ಕೇಂದ್ರದ ತಪಾಸಣಾ ಸ್ಥಳದ ಒಳಭಾಗದಲ್ಲಿ ಬ್ಯಾಗ್ ಅಥವಾ ವಸ್ತುಗಳನ್ನು ಇಡುವ ಕೊಠಡಿಗಳನ್ನು ಇರಿಸುವಂತಿಲ್ಲ. ಅನಿವಾರ್ಯವಾದರೆ ತಪಾಸಣಾ ಕೇಂದ್ರಕ್ಕಿಂತ ಮೊದಲೇ ಶಾಮಿಯಾನ ಅಳವಡಿಸಿ ಬ್ಯಾಗ್ ಇಡಲು ವ್ಯವಸ್ಥೆ ಮಾಡಬೇಕು.   ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಪಿಐ/ಎಸ್‌ಐ ನೇತೃತ್ವದಲ್ಲಿ ಪ್ರತಿ 80 ಅಭ್ಯರ್ಥಿಗಳಿಗೆ ಒಬ್ಬರಂತೆ ಪೊಲೀಸ್ ಅಥವಾ ಹೋಂ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಿ, ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಬೇಕು ಎಂದರು.

ಪ್ರತಿ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನೇಮಿಸಬೇಕು. ಎರಡನೇ ಮೇಲ್ವಿಚಾರಕರು ಪ್ರವೇಶದ್ವಾರದಲ್ಲಿ ಮೊಬೈಲ್ ಮೂಲಕ ಅಭ್ಯರ್ಥಿಗಳ ‘ಫೇಸ್ ರೆಕಗ್ನಿಷನ್’ ಹಾಜರಾತಿ ಪಡೆದು, ಬಳಿಕ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಪ್ರವೇಶದ್ವಾರದಲ್ಲೇ ಇಟ್ಟು ಕೊಠಡಿಗೆ ತೆರಳಬೇಕು. ಅಲ್ಲಿ ಮತ್ತೊಮ್ಮೆ ಅಭ್ಯರ್ಥಿಗಳನ್ನು ತಪಾಸಣೆ ಮಾಡಿ, ಕೊಠಡಿಯ ಹಿಂಭಾಗದಲ್ಲಿ ನಿಂತು ನಿಗಾ ವಹಿಸಬೇಕು,ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಕೆ ಕಡ್ಡಾಯವಾಗಿದ್ದು, ಎಲ್ಲಾ ಕೊಠಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಕರು ಲೈವ್ ಮಾನಿಟರಿಂಗ್ ಮೂಲಕ ಪರಿಶೀಲಿಸಲಿದ್ದಾರೆ ಪರೀಕ್ಷೆ ಆರಂಭಕ್ಕೂ ಮುನ್ನ ವೀಕ್ಷಕರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಮೇಲ್ವಿಚಾರಕರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಡಿಡಿಪಿಯು ಪಳನಿಸ್ವಾಮಿ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.

Share
Related Articles