ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಪರೀಕ್ಷಾ-ಸಂಬಂಧಿತ ಭಯ, ಮಾನಸಿಕ ಒತ್ತಡ ಮತ್ತು ಆತಂಕವನ್ನು ಹೋಗಲಾಡಿಸಲು ಹಾಗೂ ಅವರಿಗೆ ಸೂಕ್ತ ಬೆಂಬಲ ಒದಗಿಸಲು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ‘ಸಮಗ್ರ ಶಿಕ್ಷಣ ಕರ್ನಾಟಕ’ ಬ್ಯಾನರ್ ಅಡಿಯಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.
ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ‘ಮಾನಸಿಕ ಆರೋಗ್ಯಕ್ಕಾಗಿ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳನ್ನು’ (Educational Resource Persons for Mental Health) ನಿಯೋಜಿಸುವ ಹೊಸ ಅಭಿಯಾನವನ್ನು ಜಾರಿಗೆ ತರಲಾಗಿದೆ.
ಶಾಲೆಗಳಲ್ಲಿ ಮುಕ್ತ ಸಂವಾದಕ್ಕೆ ಅನುಕೂಲಕರವಾದ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ ಮೂಲಕ ಮಕ್ಕಳಲ್ಲಿ ಭರವಸೆಯ ಭಾವನೆಯನ್ನು ಮೂಡಿಸಲು ಈ ಇಲಾಖೆಯು ಮುಂದಾಗಿದೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಎಂಬ ತತ್ವದ ಮೇಲೆ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಸಕಾಲದಲ್ಲಿ ಮಾನಸಿಕ ಸಮಾಲೋಚನೆ ಮತ್ತು ಭಾವನಾತ್ಮಕ ಮಾರ್ಗದರ್ಶನವನ್ನು ಒದಗಿಸಲು ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗಳಿಗೆ ನಿಯೋಜಿಸಲಾಗುವುದು ಎಂದು ಶಿಕ್ಷಣ ಇಲಾಖೆ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ತಿಳಿಸಿದೆ.
ಯೋಜನೆಯ ಮುಖ್ಯ ಉದ್ದೇಶ: ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ, ಆತಂಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುವುದು.
ಅನುಷ್ಠಾನ: ‘ಸಮಗ್ರ ಶಿಕ್ಷಣ ಕರ್ನಾಟಕ’ ಅಡಿಯಲ್ಲಿ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳ (Resource Persons) ನಿಯೋಜನೆ.
ಕಾರ್ಯವೈಖರಿ: ಶಾಲೆಗಳಲ್ಲಿ ಮುಕ್ತ ಸಂವಾದ ಮತ್ತು ಸಮಾಲೋಚನೆಗೆ ಪೂರಕವಾದ ಸಕಾರಾತ್ಮಕ ವಾತಾವರಣ ನಿರ್ಮಾಣ.
ದೃಷ್ಠಿಕೋನ: ಕರ್ನಾಟಕದಾದ್ಯಂತ empathetic (ಸಹಾನುಭೂತಿಯ) ಶೈಕ್ಷಣಿಕ ಪರಿಸರವನ್ನು ನಿರ್ಮಿಸುವುದು ಮತ್ತು ಮಕ್ಕಳ ಸಮಗ್ರ ವಿಕಾಸಕ್ಕೆ ಒತ್ತು ನೀಡುವುದು.





Leave a comment