Home ದಾವಣಗೆರೆ ಸೀರೆಯುಟ್ಟು ವೇದಿಕೆ ಮೇಲೆ ಸಾಯಿ ಪಲ್ಲವಿ, ಶ್ರೀಲೀಲಾ ಭರ್ಜರಿ ಸ್ಟೆಪ್ಸ್: ‘ಓಂ’ ಪ್ರೀ-ರಿಲೀಸ್ ಈವೆಂಟ್ ವೀಡಿಯೊ ವೈರಲ್!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಸೀರೆಯುಟ್ಟು ವೇದಿಕೆ ಮೇಲೆ ಸಾಯಿ ಪಲ್ಲವಿ, ಶ್ರೀಲೀಲಾ ಭರ್ಜರಿ ಸ್ಟೆಪ್ಸ್: ‘ಓಂ’ ಪ್ರೀ-ರಿಲೀಸ್ ಈವೆಂಟ್ ವೀಡಿಯೊ ವೈರಲ್!

Share
ಸಾಯಿ ಪಲ್ಲವಿ
Share

ಹೈದರಾಬಾದ್: ಧನುಷ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಓಂ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವು ಸೋಮವಾರ ಹೈದರಾಬಾದ್‌ನ ಜೆಆರ್‌ಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಿತ್ರದ ತಾರಾಗಣವಾದ ಮಮ್ಮುಟ್ಟಿ, ಸಾಯಿ ಪಲ್ಲವಿ ಹಾಗೂ ಶ್ರೀಲೀಲಾ ಭಾಗವಹಿಸಿದ್ದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:

ವೇದಿಕೆಯ ಮೇಲೆ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ಚಿತ್ರದ ‘ಅಲಾಕಾ ಲೂವಾ’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದು, ಇಬ್ಬರೂ ನಟಿಯರ ಡ್ಯಾನ್ಸ್ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಕ್ರೀಮ್ ಬಣ್ಣದ ರೇಷ್ಮೆ ಸೀರೆಯಲ್ಲಿ ಸಾಯಿ ಪಲ್ಲವಿ ಮತ್ತು ಗುಲಾಬಿ ಬಣ್ಣದ ಸೀರೆಯಲ್ಲಿ ಶ್ರೀಲೀಲಾ ಮಿಂಚಿದ್ದು, ಇಬ್ಬರ ಎನರ್ಜಿಟಿಕ್ ಡ್ಯಾನ್ಸ್ ನೋಡಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಧನುಷ್ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಇದೇ ವೇಳೆ ವೇದಿಕೆಯಲ್ಲಿ ಮಾತನಾಡಿದ ಸಾಯಿ ಪಲ್ಲವಿ, ದಳಪತಿ ವಿಜಯ್ ಅವರಂತೆ ರಾಜಕೀಯಕ್ಕೆ ಬಂದು ನಟನೆಯನ್ನು ಬಿಡಬೇಡಿ ಎಂದು ಧನುಷ್ ಅವರಿಗೆ ವಿಶೇಷ ಮನವಿ ಮಾಡಿದರು.

ಸಾಯಿ ಪಲ್ಲವಿ ಮನವಿ: ದಾರಿಯುದ್ದಕ್ಕೂ ಬ್ಯಾನರ್ ಮತ್ತು ಧ್ವಜಗಳನ್ನು ನೋಡಿ ಇದೇನಾದರೂ ರಾಜಕೀಯ ಸಮಾವೇಶವೇ ಎಂದು ಅಂದುಕೊಂಡಿದ್ದೆ. ವಿಜಯ್ ಸರ್ ರಾಜಕೀಯಕ್ಕೆ ಬಂದು ನಟನೆ ನಿಲ್ಲಿಸಿದ್ದಾರೆ, ಆದರೆ ಧನುಷ್ ಸರ್ ನೀವು ಮಾತ್ರ ನಟನೆ ಮುಂದುವರಿಸಬೇಕು ಎಂದು ಸಾಯಿ ಪಲ್ಲವಿ ವಿನಂತಿಸಿದರು.

ತಾರಾಗಣದ ಮೆರುಗು: ಹಿರಿಯ ನಟ ಮಮ್ಮುಟ್ಟಿ, ಧನುಷ್, ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿತು.

ಬಿಡುಗಡೆ ದಿನಾಂಕ: ಧನುಷ್ ನಿರ್ಮಾಣ ಹಾಗೂ ನಟನೆಯ ‘ಓಂ’ ಸಿನಿಮಾ ಇದೇ ನವೆಂಬರ್ 20ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles