ಚನ್ನಗಿರಿ: ಚನ್ನಗಿರಿ ತಾಲ್ಲೂಕು ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಯಶಸ್ವಿಯಾಗಿ ಜರುಗಿದೆ. ಸಂಘದ ಅಧ್ಯಕ್ಷರಾಗಿ ಶಿವಕುಮಾರ್. ಎಸ್. ತಣಿಗೆರೆ ಹಾಗೂ ಉಪಾಧ್ಯಕ್ಷರಾಗಿ ಸುಮಿತ್ರಮ್ಮ ಶಿವಮೂರ್ತಿ (ಗೊಲ್ಲರಹಳ್ಳಿ) ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಸಭೆಯಲ್ಲಿ ಸಂಘದ ವಿವಿಧ ಹುದ್ದೆಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಲಲಿತಮ್ಮ ಕೊರಟಿಕೆರೆ, ಕಾರ್ಯದರ್ಶಿಯಾಗಿ ಮಂಜಪ್ಪ ಚಿರಡೋಣಿ ಹಾಗೂ ಖಜಾಂಚಿಯಾಗಿ ಚಂದ್ರಪ್ಪ ಜೋಳದಹಾಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ನೂತನ ಅಧ್ಯಕ್ಷರು: ಶಿವಕುಮಾರ್. ಎಸ್. (ತಣಿಗೆರೆ) ಸಂಘದ ಅಧ್ಯಕ್ಷರಾಗಿ ಆಯ್ಕೆ.
ಪ್ರಮುಖ ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ಸುಮಿತ್ರಮ್ಮ ಶಿವಮೂರ್ತಿ ಗೊಲ್ಲರಹಳ್ಳಿ, ಕಾರ್ಯದರ್ಶಿಯಾಗಿ ಮಂಜಪ್ಪ ಚಿರಡೋಣಿ ಹಾಗೂ ಖಜಾಂಚಿಯಾಗಿ ಚಂದ್ರಪ್ಪ ಜೋಳದ ಹಾಳ ನೇಮಕ.
ಗಣ್ಯರ ಉಪಸ್ಥಿತಿ: ಈ ಸಭೆಯಲ್ಲಿ ಚನ್ನಗಿರಿ ತಹಶೀಲ್ದಾರ್ ಎನ್. ಜೆ. ನಾಗರಾಜ್, ಆಹಾರ ನಿರೀಕ್ಷಕ ಬಿ. ಆರ್. ಶಶಿಧರ್, ವಿ.ಎಸ್.ಎಸ್.ಎನ್. ಕಾರ್ಯದರ್ಶಿಗಳು ಹಾಗೂ ಆಹಾರ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.





Leave a comment