Home ಕ್ರೈಂ ನ್ಯೂಸ್ ಛತ್ ಪೂಜೆ ಪ್ರಸಾದ ಮುಟ್ಟಿದ್ದಕ್ಕೆ 4 ವರ್ಷದ ಕಂದಮ್ಮನ ಬರ್ಬರವಾಗಿ ಥಳಿಸಿ ಕೊಂದ ತಾಯಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಛತ್ ಪೂಜೆ ಪ್ರಸಾದ ಮುಟ್ಟಿದ್ದಕ್ಕೆ 4 ವರ್ಷದ ಕಂದಮ್ಮನ ಬರ್ಬರವಾಗಿ ಥಳಿಸಿ ಕೊಂದ ತಾಯಿ!

Share
ತಾಯಿ
Share

ಸಮಸ್ತಿಪುರ (ಬಿಹಾರ): ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ಛತ್ ಪೂಜೆಗಾಗಿ ಸಿದ್ಧಪಡಿಸಿದ್ದ ಪ್ರಸಾದವನ್ನು ಮುಟ್ಟಿದಳು ಎಂಬ ಕಾರಣಕ್ಕೆ 4 ವರ್ಷದ ಕಂದಮ್ಮನನ್ನು ಸ್ವತಃ ಆಕೆಯ ತಾಯಿಯೇ ಬರ್ಬರವಾಗಿ ಥಳಿಸಿ ಹತ್ಯೆ ಮಾಡಿರುವ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಪೂಜೆಯ ಪ್ರಸಾದ ಅಪವಿತ್ರವಾಯಿತು ಎಂಬ ಕೋಪದಲ್ಲಿ ತಾಯಿ ರೀನಾ ಕುಮಾರಿ ಈ ಕೃತ್ಯ ಎಸಗಿದ್ದು, ಮಗುವಿನ ಸಾವಿಗೆ ಕಾರಣರಾದ ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೂಸಾ ಪ್ರದೇಶದ ಮೊಹಮ್ಮದ್‌ಪುರ ಬಿರೌಲಿ ಗ್ರಾಮದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ರೀನಾ ಕುಮಾರಿ ಅವರು ಛತ್ ಪೂಜೆಗಾಗಿ ಪ್ರಸಾದ ತಯಾರಿಸುತ್ತಿದ್ದಾಗ, 4 ವರ್ಷದ ಮಗಳು ಸುಹಾನಿ ಕುಮಾರಿ ಪ್ರಸಾದವನ್ನು ಮುಟ್ಟಿದ್ದಾಳೆ.

ಇದರಿಂದ ಆಕ್ರೋಶಗೊಂಡ ತಾಯಿ ಮಗುವನ್ನು ಮನಬಂದಂತೆ ಥಳಿಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಆರೋಪಿ ತಾಯಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಪ್ರಸಾದ ಮುಟ್ಟಿದ್ದೇ ತಪ್ಪಾಯ್ತು: ಛತ್ ಪೂಜೆಯ ಪ್ರಸಾದವನ್ನು ಮಗು ಮುಟ್ಟಿದ್ದರಿಂದ ಕೋಪಗೊಂಡ ತಾಯಿ ರೀನಾ ಕುಮಾರಿ, ಮಗಳು ಸುಹಾನಿ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ.

ಆರೋಪಿ ತಾಯಿ ಬಂಧನ: ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಪೂಸಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ತಾಯಿಯನ್ನು ಬಂಧಿಸಿದ್ದಾರೆ.

ಮಗುವಿನ ತಂದೆಯ ಆಕ್ರೋಶ: ಘಟನೆ ನಡೆದಾಗ ಇತರ ಕುಟುಂಬ ಸದಸ್ಯರು ಪೂಜಾ ಘಾಟ್‌ಗೆ ತೆರಳಿದ್ದರು ಎಂದು ಮಗುವಿನ ತಂದೆ ರಾಜು ಪಾಸ್ವಾನ್ ತಿಳಿಸಿದ್ದು, ತಮ್ಮ ಪತ್ನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *