Home ದಾವಣಗೆರೆ ಲೋಕಾಯುಕ್ತ ದಾಳಿ ವೇಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಯ ಮನೆಯಲ್ಲಿ 2.5 ಕೆಜಿ ಚಿನ್ನ, ನಗದು ಪತ್ತೆ: ಕೋಟ್ಯಂತರ ರೂ. ಮೌಲ್ಯದ ಅಕ್ರಮ ಸಂಪತ್ತು ಬಯಲು!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಲೋಕಾಯುಕ್ತ ದಾಳಿ ವೇಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಯ ಮನೆಯಲ್ಲಿ 2.5 ಕೆಜಿ ಚಿನ್ನ, ನಗದು ಪತ್ತೆ: ಕೋಟ್ಯಂತರ ರೂ. ಮೌಲ್ಯದ ಅಕ್ರಮ ಸಂಪತ್ತು ಬಯಲು!

Share
ಲೋಕಾಯುಕ್ತ
Share

ಭೋಪಾಲ್: ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಯೊಬ್ಬರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಪಚಮರ್ಹಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂಜೀವ್ ಕುಮಾರ್ ಶರ್ಮಾ ಎಂಬವರ ವಿರುದ್ಧ ಈ ಭ್ರಷ್ಟಾಚಾರದ ಮೇರೆಗೆ ದಾಳಿ ನಡೆದಿದೆ.

ಅಧಿಕಾರಿಯ ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿರುವ ಬಗ್ಗೆ ಬಂದ ದೂರಿನ ಮೇರೆಗೆ ಲೋಕಾಯುಕ್ತ ನ್ಯಾಯಾಲಯದ ವಾರೆಂಟ್ ಪಡೆದು ಭೋಪಾಲ್ ವಿಭಾಗದ ತಂಡವು ಪಚಮರ್ಹಿ ಹಾಗೂ ಛಿಂದ್ವಾರಾದಲ್ಲಿ ಏಕಕಾಲಕ್ಕೆ ಶೋಧ ನಡೆಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅಧಿಕಾರಿಯ ಬಳಿ ಅಕ್ರಮ ಸಂಪಾದನೆಯ 2.5 ಕೆಜಿಗೂ ಅಧಿಕ ಚಿನ್ನ, 1.6 ಕೆಜಿ ಬೆಳ್ಳಿ, ಲಕ್ಷಾಂತರ ರೂ. ನಗದು ಹಾಗೂ ಐಷರಾಮಿ ವಾಹನಗಳು ಪತ್ತೆಯಾಗಿವೆ. ಒಟ್ಟಾರೆ 7.6 ಕೋಟಿ ರೂ. ಗೂ ಅಧಿಕ ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಲಾಗಿದ್ದು, ಭೂ ವ್ಯವಹಾರಗಳ 28 ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಪಾರ ಪ್ರಮಾಣದ ಚಿನ್ನ ಹಾಗೂ ನಗದು: ದಾಳಿಯ ವೇಳೆ 2.528 ಕೆಜಿ ಚಿನ್ನ (ಅಂದಾಜು 3.5 ಕೋಟಿ ರೂ.), 1.656 ಕೆಜಿ ಬೆಳ್ಳಿ ಹಾಗೂ 26.36 ಲಕ್ಷ ರೂ. ನಗದು ಪತ್ತೆಯಾಗಿದೆ.

ಐಷರಾಮಿ ಆಸ್ತಿಗಳು ಹಾಗೂ ವಾಹನಗಳು: ಸ್ಕಾರ್ಪಿಯೋ ಸೇರಿದಂತೆ ನಾಲ್ಕು ವಾಹನಗಳು, ‘ಇಕೋಟೆಲ್ ರಿಸಾರ್ಟ್’ (2 ಕೋಟಿ ರೂ.) ಮತ್ತು ‘ಸೆರೆನಿಟಿ ವಿಲ್ಲಾ’ (1 ಕೋಟಿ ರೂ.) ಆಸ್ತಿ ವಿವರಗಳು ಬೆಳಕಿಗೆ ಬಂದಿವೆ.

ಲೋಕಾಯುಕ್ತ ತನಿಖೆ ಮುಂದುವರಿಕೆ: ಆದಾಯಕ್ಕಿಂತ ಶೇ.560ರಷ್ಟು ಹೆಚ್ಚು ಆಸ್ತಿ ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Related Articles