Home ಕ್ರೈಂ ನ್ಯೂಸ್ ಹನಿಟ್ರ್ಯಾಪ್ ಹಾಗೂ ಗೂಢಚರ್ಯೆಯ ರಹಸ್ಯ ಬಿಚ್ಚಿಟ್ಟ ಮಾಜಿ ರಷ್ಯನ್ ಏಜೆಂಟ್ ಅಲಿಯಾ ರೋಜಾ: ಗುರಿ ತಲುಪುವ ತಂತ್ರಗಳ ಬಹಿರಂಗ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹನಿಟ್ರ್ಯಾಪ್ ಹಾಗೂ ಗೂಢಚರ್ಯೆಯ ರಹಸ್ಯ ಬಿಚ್ಚಿಟ್ಟ ಮಾಜಿ ರಷ್ಯನ್ ಏಜೆಂಟ್ ಅಲಿಯಾ ರೋಜಾ: ಗುರಿ ತಲುಪುವ ತಂತ್ರಗಳ ಬಹಿರಂಗ!

Share
ಅಲಿಯಾ ರೋಜಾ
Share

ನವದೆಹಲಿ: ಯಶಸ್ವಿ ಗೂಢಚರ್ಯೆ ಅಥವಾ ಗುಪ್ತಚರ ಕಾರ್ಯಾಚರಣೆಯು ಗುರಿಯನ್ನುಸಂಪರ್ಕಿಸುವ ಬಹಳ ಹಿಂದೆಯೇ ಆರಂಭವಾಗುತ್ತದೆ ಎಂದು ಮಾಜಿ ರಷ್ಯನ್ ರಹಸ್ಯ ಏಜೆಂಟ್ ಅಲಿಯಾ ರೋಜಾ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವ್ಯಕ್ತಿಯ ಆಸಕ್ತಿಗಳು, ಮಹತ್ವಾಕಂಕ್ಷೆಗಳು, ದೌರ್ಬಲ್ಯಗಳು ಹಾಗೂ ಆಪ್ತ ವಲಯವನ್ನು ಅಧ್ಯಯನ ಮಾಡುವ ಮೂಲಕ ಮಾನಸಿಕ ಕುಶಲತೆಯಿಂದ ಹೇಗೆ ಪ್ರಭಾವ ಬೀರಬಹುದು ಎಂಬುದರ ಕುರಿತು ಅವರು ಹನಿಟ್ರ್ಯಾಪ್  ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ತಂದೆಯ ಹಿನ್ನೆಲೆಯಿಂದಾಗಿ ಬಾಲ್ಯದಲ್ಲೇ ಗುಪ್ತಚರ ಜಾಲಕ್ಕೆ ಪರಿಚಯವಾದ ರೋಜಾ,ಆಕರ್ಷಣೆ, ಒಲಿಸುವಿಕೆ ಮತ್ತು ಮನೋವೈಜ್ಞಾನಿಕ ತಂತ್ರಗಳ ವಿಶೇಷ ತರಬೇತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಬ್ಯುಸಿನೆಸ್ ಲೀಡರ್‌ಗಳು ಹಾಗೂ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಲು ಹನಿಟ್ರ್ಯಾಪ್ ಅನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಮಾಹಿತಿ ಸಂಗ್ರಹಣೆ ಹಾಗೂ ಅಧ್ಯಯನ: ಗುರಿಯಾಗಿರುವ ವ್ಯಕ್ತಿಯ ಹಿನ್ನೆಲೆ, ದೌರ್ಬಲ್ಯಗಳು ಹಾಗೂ ಅವರು ನಂಬುವವರನ್ನು ಗುರುತಿಸುವುದರ ಮೂಲಕ ಕಾರ್ಯಾಚರಣೆ ಆರಂಭವಾಗುತ್ತದೆ.

ನಂಬಿಕೆ ಗಳಿಸುವುದು: ಅಪರಿಚಿತರಂತೆ ಹೋಗುವ ಬದಲು, ಗುರಿಗೆ ಈಗಾಗಲೇ ಪರಿಚಯವಿರುವ ವ್ಯಕ್ತಿಗಳ ಮೂಲಕ ಹತ್ತಿರವಾಗಿ ಕ್ರಮೇಣ ಭಾವನಾತ್ಮಕ ಸಂಬಂಧ ಬೆಳೆಸಲಾಗುತ್ತದೆ.

ಕಾರ್ಪೊರೇಟ್ ವಲಯದ ಮೇಲೆ ಕಣ್ಣು: ಪ್ರಮುಖ ಕಂಪನಿಗಳ ಸಿಇಒಗಳು ಅಥವಾ ಉದ್ಯಮಿಗಳು ಸೂಕ್ಷ್ಮ ಹಾಗೂ ಪ್ರಮುಖ ಮಾಹಿತಿ ಹೊಂದಿರುವುದರಿಂದ ಅವರು ಸುಲಭವಾಗಿ ಗುರಿಯಾಗುತ್ತಾರೆ ಎಂದು ರೋಜಾ ಎಚ್ಚರಿಸಿದ್ದಾರೆ.

ತಮ್ಮ ಅನುಭವವನ್ನು ಈಗ ಕಾರ್ಪೊರೇಟ್ ಉದ್ಯಮಿಗಳಿಗೆ ಮನಿಪುಲೇಷನ್ ಮತ್ತು ಹನಿಟ್ರ್ಯಾಪ್ ಪ್ರಯತ್ನಗಳನ್ನು ಗುರುತಿಸುವ ಬಗ್ಗೆ ಶಿಕ್ಷಣ ನೀಡಲು ಬಳಸುತ್ತಿರುವುದಾಗಿ ಅಲಿಯಾ ರೋಜಾ ತಿಳಿಸಿದ್ದಾರೆ. ಗೂಢಚರ್ಯೆಯು ಕೇವಲ ರಹಸ್ಯ ದಾಖಲೆಗಳ ಕಳ್ಳತನದಿಂದ ಆರಂಭವಾಗುವುದಿಲ್ಲ, ಬದಲಿಗೆ ಸಾಮಾನ್ಯ ಸಂಭಾಷಣೆ ಹಾಗೂ ನಂಬಿಕೆಯಿಂದ ಶುರುವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles