ಚಿಕ್ಕಬಳ್ಳಾಪುರ: ಮನೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಲಗಾಲಿಗೆ ಗಂಭೀರ ಗಾಯ ಮಾಡಿಕೊಂಡಿರುವ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ವೈದ್ಯರ ವಿಶ್ರಾಂತಿ ಸೂಚನೆಯನ್ನು ಲೆಕ್ಕಿಸದೆ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಆರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರೂ, ಶಿಕ್ಷಕ ಹಾಗೂ ಆಡಳಿತಗಾರನಾಗಿ ಸುಮ್ಮನೆ ಕೂರಲಾರದೆ ಶಾಲೆಯ ತರಗತಿ ಕೊಠಡಿಯಲ್ಲೇ ಬೆಡ್ ವ್ಯವಸ್ಥೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ, ಕ್ಷೇತ್ರದ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.
ಗಂಭೀರ ಗಾಯಗೊಂಡರೂ ನಿಲ್ಲದ ಕರ್ತವ್ಯ: ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡು ವೈದ್ಯರ ವಿಶ್ರಾಂತಿ ಸೂಚನೆ ಪಡೆದಿದ್ದರೂ, ಶಾಸಕ ಪ್ರದೀಪ್ ಈಶ್ವರ್ ಕೆಲಸದ ಹಾದಿ ಬಿಡಲಿಲ್ಲ.
ತರಗತಿಯಲ್ಲೇ ಬೆಡ್ ವ್ಯವಸ್ಥೆ: ಶಾಲಾ ತರಗತಿ ಕೊಠಡಿಯಲ್ಲೇ ಹಾಸಿಗೆ ಹಾಕಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದರ ಜೊತೆಗೆ ಕ್ಷೇತ್ರದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.
ಸ್ಫೂರ್ತಿದಾಯಕ ಸಂದೇಶ: ‘Execution, not excuses’ ಹಾಗೂ ‘ಕಾಯಕವೇ ಕೈಲಾಸ’ ತತ್ವದಡಿ ತಾವು ನಂಬಿದ ಸತ್ಯ ಮತ್ತು ಸೇವೆಯನ್ನು ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.





Leave a comment