Home ದಾವಣಗೆರೆ ಮಕ್ಕಳಲ್ಲೇ ಮೂಡಲಿದೆ ಕೃಷಿ ಪ್ರೀತಿ: ಕೃತಕ ಬುದ್ಧಿಮತ್ತೆ ಬಳಸಿ ಕೃಷಿ ಶಿಕ್ಷಣ ನೀಡಲು ಮುಂದಾದ ಐಐಟಿ ರೋಫರ್
ದಾವಣಗೆರೆನವದೆಹಲಿಬೆಂಗಳೂರು

ಮಕ್ಕಳಲ್ಲೇ ಮೂಡಲಿದೆ ಕೃಷಿ ಪ್ರೀತಿ: ಕೃತಕ ಬುದ್ಧಿಮತ್ತೆ ಬಳಸಿ ಕೃಷಿ ಶಿಕ್ಷಣ ನೀಡಲು ಮುಂದಾದ ಐಐಟಿ ರೋಫರ್

Share
ಕೃಷಿ
Share

ಹೊಸದೆಹಲಿ: ಭಾರತದ ಕೃಷಿ ವಲಯವು ಎದುರಿಸುತ್ತಿರುವ ಹವಾಮಾನ ವೈಪರೀತ್ಯ, ಆಹಾರ ಭದ್ರತೆ ಮತ್ತು ಕ್ಷೀಣಿಸುತ್ತಿರುವ ಮಣ್ಣಿನ ಆರೋಗ್ಯದಂತಹ ಸವಾಲುಗಳನ್ನು ಎದುರಿಸಲು ಐಐಟಿ ರೋಫರ್ (IIT Ropar) ನವೀನ ಹೆಜ್ಜೆ ಇಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸ್ಮಾರ್ಟ್ ಕೃಷಿ ಕಲ್ಪನೆಗೆ ಪೂರಕವಾಗಿ, 5 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಕೃಷಿ ಮತ್ತು ಜೀವವೈವಿಧ್ಯದ ಬಗ್ಗೆ ಅರಿವು ಮೂಡಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ‘ಅವ್ನಿ’ (AVNI) ಡಿಜಿಟಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಐಐಟಿ ರೋಫರ್‌ನ ANNAM.AI ಯೋಜನಾ ನಿರ್ದೇಶಕ ಪ್ರೊ. ಪುಷ್ಪೇಂದ್ರ ಸಿಂಗ್ ಅವರ ಪ್ರಕಾರ, ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಆಹಾರ ಉತ್ಪಾದನೆಯನ್ನು ಶೇ. 65 ರಿಂದ 70 ರಷ್ಟು ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ. ಆದರೆ ಕೃಷಿ ಭೂಮಿ ಮತ್ತು ಗ್ರಾಮೀಣ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಕಡಿಮೆ ಸಂಪನ್ಮೂಲಗಳೊಂದಿಗೆ ಹೆಚ್ಚು ಇಳುವರಿ ಪಡೆಯುವ ನಿಟ್ಟಿನಲ್ಲಿ ಯುವ ಪೀಳಿಗೆಗೆ ಈಗಿನಿಂದಲೇ ಕೃಷಿ ಜ್ಞಾನ ನೀಡುವುದು ಅತ್ಯಗತ್ಯವಾಗಿದೆ.

ಅವ್ನಿ (AVNI) ಆ್ಯಪ್ ಪರಿಚಯ: 5 ರಿಂದ 15 ವರ್ಷದ ಮಕ್ಕಳು ಮೊಬೈಲ್ ಮೂಲಕ ಗಿಡಮರಗಳು, ಕೀಟಗಳು ಹಾಗೂ ಬೆಳೆಗಳ ಚಿತ್ರಗಳನ್ನು ಸೆರೆಹಿಡಿದು ಅವುಗಳ ಬಗ್ಗೆ ಮಾಹಿತಿ ಪಡೆಯುವ ವಿನೂತನ ಕಲಿಕಾ ಆ್ಯಪ್ ಇದಾಗಿದೆ.

ಕೃಷಿ ಜ್ಞಾನ ಮತ್ತು ಗೇಮಿಂಗ್ ತಂತ್ರ: ಮಕ್ಕಳಿಗೆ ಕಲಿಕೆಯನ್ನು ಆಕರ್ಷಕವಾಗಿಸಲು ಗೇಮ್‌ಗಳ ಮಾದರಿಯಲ್ಲಿ ಪಾಯಿಂಟ್ಸ್ ಹಾಗೂ ಬ್ಯಾಡ್ಜ್‌ಗಳನ್ನು ನೀಡುವುದರೊಂದಿಗೆ ಪ್ರಕೃತಿ ಹಾಗೂ ಕೃಷಿಯ ನಂಟನ್ನು ಪರಿಚಯಿಸಲಾಗುತ್ತದೆ.

ಶಾಲೆಗಳಲ್ಲಿ ಕೃಷಿ ಶಿಕ್ಷಣ: ಮೊಬೈಲ್ ಟ್ಯಾಬ್ಲೆಟ್ ಬಳಸಿ ಶಾಲಾ ಉದ್ಯವನಗಳಲ್ಲಿ ನೇರ ಅಧ್ಯಯನ ನಡೆಸುವ ಮೂಲಕ ಪ್ರಾಯೋಗಿಕ ಕೃಷಿ ಶಿಕ್ಷಣವನ್ನು ಶಾಲೆಗಳಲ್ಲಿ ಜಾರಿಗೆ ತರಲು ಶಿಕ್ಷಣ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಭಾರತದಲ್ಲಿ ಶೇ. 75 ಕ್ಕಿಂತ ಹೆಚ್ಚು ಬೆಳೆಗಳ ಪರಾಗಸ್ಪರ್ಶಕ್ಕೆ ಕೀಟಗಳು ಮತ್ತು ಜೇನುನೊಣಗಳ ಪಾತ್ರ ನಿರ್ಣಾಯಕವಾಗಿದೆ. ಮಕ್ಕಳಿಗೆ ಕೇವಲ ಬೆಳೆಗಳ ಹೆಸರಷ್ಟೇ ಅಲ್ಲದೆ ಮಣ್ಣು, ನೀರು ಹಾಗೂ ಕೀಟಗಳ ನಡುವಿನ ಸಂಬಂಧದ ಬಗ್ಗೆಯೂ ಅರಿವಿರಬೇಕು ಎಂಬುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ. ಕೃಷಿ ಉತ್ಪಾದನೆಯಷ್ಟೇ ಅಲ್ಲದೆ, ಬೆಳೆ ಕಟಾವಿನ ನಂತರ ಮಾರುಕಟ್ಟೆಗೆ ತಲುಪುವವರೆಗಿನ ನಷ್ಟವನ್ನು ತಡೆಯಲು ಡಿಜಿಟಲ್ ಕೃಷಿ ತಂತ್ರಜ್ಞಾನಗಳು ಸಹಕಾರಿಯಾಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles