
ದಾವಣಗೆರೆ, ನ.13 (ಕರ್ನಾಟಕ ವಾರ್ತೆ): ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಇವರು ಆಯೋಜಿಸಿರುವ ಬಿಹೆಚ್ಇಎಲ್ ಕುಶಲಕರ್ಮಿ [Fitter, Welder, Turner, Machinist, Electrician, Electronics Mechanic, Foundryman] ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಹತೆ:
10ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಸಂಬAಧಪಟ್ಟ ವೃತ್ತಿಯಲ್ಲಿ ‘ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್’ (NTC/ITI) ಮತ್ತು ‘ನ್ಯಾಷನಲ್ ಅಪ್ರೆಂಟಿಸ್ಶಿಪ್ ಸರ್ಟಿಫಿಕೇಟ್’ (NAC) ಪಡೆದಿರಬೇಕು. ಹಾಗೂ ಎರಡರಲ್ಲೂ, ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕನಿಷ್ಠ 60% ಅಂಕಗಳನ್ನು, ಹಾಗೂ ಎಸ್ಸಿ,ಎಸ್ಟಿ ಅಭ್ಯರ್ಥಿಗಳು ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
ಸದರಿ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ವೆಬೆಸೈಟ್ https://careers.bhel.in ಮೂಲಕ ಆನ್ಲೈನ್ ಮೂಲಕ ನವೆಂಬರ್ 18 ಬೆಳಗ್ಗೆ 11:45 ಘಂಟೆ ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಪರೀಕ್ಷೆಯ ತಾತ್ಕಾಲಿಕ ಪರೀಕ್ಷೆಯು ಡಿಸೆಂಬರ್ 11 ರಂದು ನಡೆಯಲಿದೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 27 ವರ್ಷಗಳು ಹಾಗೂ ಎಸ್ಸಿ,ಎಸ್ಟಿ,ಒ.ಬಿ.ಸಿ,ಇ.ಎಸ್.ಎಮ್/
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 080-26989217/26998 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, ದಾವಣಗೆರೆ. ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ರವೀಂದ್ರ ಡಿ ತಿಳಿಸಿದ್ದಾರೆ.




