Home ನವದೆಹಲಿ ಗೋಧಿ, ಅಕ್ಕಿ ಹಾಗೂ ಕಬ್ಬಿನ ಬೆಳೆಗಳನ್ನೇ ನಂಬಿಕೊಳ್ಳಬೇಡಿ: ಕೃಷಿ ವೈವಿಧ್ಯೀಕರಣಕ್ಕೆ ಒತ್ತು ನೀಡುವಂತೆ ರೈತರಿಗೆ ಪ್ರಧಾನಿ ಮೋದಿ ಕರೆ!
ನವದೆಹಲಿದಾವಣಗೆರೆಬೆಂಗಳೂರುವಾಣಿಜ್ಯ

ಗೋಧಿ, ಅಕ್ಕಿ ಹಾಗೂ ಕಬ್ಬಿನ ಬೆಳೆಗಳನ್ನೇ ನಂಬಿಕೊಳ್ಳಬೇಡಿ: ಕೃಷಿ ವೈವಿಧ್ಯೀಕರಣಕ್ಕೆ ಒತ್ತು ನೀಡುವಂತೆ ರೈತರಿಗೆ ಪ್ರಧಾನಿ ಮೋದಿ ಕರೆ!

Share
ಅಕ್ಕಿ
Share

ನವದೆಹಲಿ: ಗೋಧಿ, ಅಕ್ಕಿ ಹಾಗೂ ಕಬ್ಬಿನ ಬೆಳೆಗಳನ್ನೇ ನಂಬಿಕೊಳ್ಳಬೇಡಿ. ಕೃಷಿ ವೈವಿಧ್ಯೀಕರಣಕ್ಕೆ ಒತ್ತು ನೀಡುವಂತೆ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. 

ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ ‘ಕಿಸಾನ್ ತಕ್ ಭಾರತ್ ಅಗ್ರಿಕಲ್ಚರ್ ಕಾನ್ಫರೆನ್ಸ್ 2026’  ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ರೈತರು ಕೇವಲ ಗೋಧಿ, ಅಕ್ಕಿ ಮತ್ತು ಕಬ್ಬಿನಂತಹ ಸಾಂಪ್ರದಾಯಿಕ ಬೆಳೆಗಳನ್ನೇ ಅವಲಂಬಿಸದೆ ಕೃಷಿ ವೈವಿಧ್ಯೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ. ಬದಲಾಗುತ್ತಿರುವ ಮಾರುಕಟ್ಟೆ ಬೇಡಿಕೆಗಳು, ಹವಾಮಾನ ವೈಪರೀತ್ಯ ಹಾಗೂ ತಂತ್ರಜ್ಞಾನಕ್ಕೆ ತಕ್ಕಂತೆ ಕೃಷಿ ಪದ್ಧತಿಗಳು ಬದಲಾಗಬೇಕು ಮತ್ತು ಹೈನುಗಾರಿಕೆ, ಮೀನುಗಾರಿಕೆ ಹಾಗೂ ಜೇನುಸಾಕಣೆಯಂತಹ ಉಪ ಕೃಷಿ ಚಟುವಟಿಕೆಗಳು ರೈತರ ಆದಾಯವನ್ನು ಹೆಚ್ಚಿಸಲು ಅತ್ಯಗತ್ಯ ಎಂದು ಪ್ರಧಾನಿ ತಿಳಿಸಿದ್ದಾರೆ.

ಕಳೆದ ದಶಕದಲ್ಲಿ ಭಾರತದ ಕೃಷಿ ಕ್ಷೇತ್ರವು ಸಾಧಿಸಿರುವ ಪ್ರಗತಿಯನ್ನು ಕೊಂಡಾಡಿದ ಪ್ರಧಾನಿ ಮೋದಿ, ದೇಶದ ಕೃಷಿ ಉತ್ಪನ್ನಗಳ ರಫ್ತು ಮೌಲ್ಯವು ವಾರ್ಷಿಕ 4 ಲಕ್ಷ ಕೋಟಿ ರೂ. ದಾಟಿದೆ ಎಂದು ತಿಳಿಸಿದರು. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲಿ ಕ್ರಾಂತಿ ಮತ್ತು ಸಿಹಿ ಕ್ರಾಂತಿ ಯಂತಹ ವಿವಿಧ ಕ್ರಾಂತಿಗಳ ಮೂಲಕ ಭಾರತವು ಹಾಲು, ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು ಹಾಗೂ ಸೆಣಬಿನ ಉತ್ಪಾದನೆಯಲ್ಲಿ ವಿಶ್ವದಲ್ಲೇ ನಂ.1 ಸ್ಥಾನದಲ್ಲಿದೆ ಎಂದರು.

ಅಲ್ಲದೆ, ತೋಟಗಾರಿಕೆ ಉತ್ಪಾದನೆಯು 350 ಮಿಲಿಯನ್ ಟನ್‌ಗಳಿಗೂ ಅಧಿಕGಗೆ ಏರಿಕೆಯಾಗಿದ್ದು, ಇದು ರೈತರಿಗೆ ಬಹುಮುಖಿ ಆದಾಯದ ಮೂಲಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಳೆ ವೈವಿಧ್ಯೀಕರಣಕ್ಕೆ ಕರೆ: ಕೇವಲ ಸಾಂಪ್ರದಾಯಿಕ ಬೆಳೆಗಳಾದ ಅಕ್ಕಿ, ಗೋಧಿ ಮತ್ತು ಕಬ್ಬಿನ ಕೃಷಿಗೆ ಸೀಮಿತವಾಗದೆ ಇಳುವರಿ ವೈವಿಧ್ಯತೆಗೆ ಗಮನಹರಿಸುವಂತೆ ರೈತರಿಗೆ ಪ್ರಧಾನಿ ಮೋದಿ ಸಲಹೆ.

ವಿವಿಧ ಕೃಷಿ ಕ್ರಾಂತಿಗಳ ಸಾಧನೆ: ಶ್ವೇತ ಕ್ರಾಂತಿಯಿಂದ ಹಾಲಿನ ಉತ್ಪಾದನೆ ಶೇ.70ರಷ್ಟು ಹೆಚ್ಚಳವಾಗಿದ್ದರೆ, ನೀಲಿ ಕ್ರಾಂತಿಯ ಪರಿಣಾಮ ಮೀನು ಉತ್ಪಾದನೆಯು ಕಳೆದ ದಶಕದಲ್ಲಿ ದ್ವಿಗುಣಗೊಂಡಿದೆ.

ಭಾರತದ ಜಾಗತಿಕ ಸ್ಥಾನ: ಹಾಲು, ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು ಮತ್ತು ಅಕ್ಕಿ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಪ್ರಧಾನಿ ಹೆಮ್ಮ ವ್ಯಕ್ತಪಡಿಸಿದರು.

ತೋಟಗಾರಿಕೆಯಲ್ಲಿ ಭಾರಿ ಏರಿಕೆ: ದೇಶದ ತೋಟಗಾರಿಕೆ (Horticulture) ಉತ್ಪಾದನೆಯು 280 ಮಿಲಿಯನ್ ಟನ್‌ಗಳಿಂದ 350 ಮಿಲಿಯನ್ ಟನ್‌ಗಳಿಗೂ ಅಧಿಕ ಪ್ರಮಾಣಕ್ಕೆ ವೃದ್ಧಿಸಿದೆ.

ದೇಶದ ರೈತರನ್ನು ಸಬಲೀಕರಣಗೊಳಿಸಲು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೃಷಿಯೊಂದಿಗೆ ಸಂಯೋಜಿತ ಚಟುವಟಿಕೆಗಳು (Allied Activities) ಬಹಳ ಮುಖ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. ಇತ್ತೀಚಿನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ‘ಸ್ಮಾರ್ಟ್ ಕಿಸಾನ್, ವಿಕಸಿತ ಭಾರತ’ ಕನಸನ್ನು ಸಾಕಾರಗೊಳಿಸಲು ರೈತರು ಮುಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.‘

Share

Leave a comment

Leave a Reply

Your email address will not be published. Required fields are marked *