Home ದಾವಣಗೆರೆ ಮಹಿಳಾ ಜನಪ್ರತಿನಿಧಿಗಳಿಗೆ ಸೋನಿಯಾ ಗಾಂಧಿಯವರ ತ್ಯಾಗ ಹಾಗೂ ಧೈರ್ಯವೇ ಸದಾ ಸ್ಪೂರ್ತಿ: ಡಾ. ಪ್ರಭಾ ಮಲ್ಲಿಕಾರ್ಜುನ್!
ದಾವಣಗೆರೆನವದೆಹಲಿಬೆಂಗಳೂರು

ಮಹಿಳಾ ಜನಪ್ರತಿನಿಧಿಗಳಿಗೆ ಸೋನಿಯಾ ಗಾಂಧಿಯವರ ತ್ಯಾಗ ಹಾಗೂ ಧೈರ್ಯವೇ ಸದಾ ಸ್ಪೂರ್ತಿ: ಡಾ. ಪ್ರಭಾ ಮಲ್ಲಿಕಾರ್ಜುನ್!

Share
ಸೋನಿಯಾ ಗಾಂಧಿ
Share

ದಾವಣಗೆರೆ: ಭಾರತೀಯ ರಾಜಕೀಯದಲ್ಲಿ ತಮ್ಮದೇ ಆದ ವಿಶಿಷ್ಟ ನಾಯಕತ್ವದ ಛಾಪು ಮೂಡಿಸಿರುವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಗೌರವಾನ್ವಿತ ಶ್ರೀಮತಿ ಸೋನಿಯಾ ಗಾಂಧಿಯವರ ಜೀವನ ಪಯಣವನ್ನು ಅನಾವರಣಗೊಳಿಸುವ ‘Belonging: A Journey of Love’ ಪುಸ್ತಕವನ್ನು ಸ್ವೀಕರಿಸಿರುವುದು ತಮಗೆ ಅತ್ಯಂತ ಸಂತಸ ತಂದಿದೆ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಸೋನಿಯಾ ಗಾಂಧಿಯವರ ಬದುಕು ಕೇವಲ ರಾಜಕೀಯ ನಾಯಕತ್ವದ ಕಥೆಯಲ್ಲ, ಬದಲಾಗಿ ಅದು ಪ್ರೀತಿ, ತ್ಯಾಗ, ಸಹನೆ, ಧೈರ್ಯ ಹಾಗೂ ಜನಸೇವೆಯ ಬದ್ಧತೆಯ ಸ್ಫೂರ್ತಿದಾಯಕ ಪಯಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅತಿ ಸಂಕಷ್ಟದ ಹಾಗೂ ಸವಾಲಿನ ಸಂದರ್ಭಗಳಲ್ಲಿಯೂ ಅವರು ಪ್ರದರ್ಶಿಸಿದ ದೃಢನಿಶ್ಚಯ, ದೂರದೃಷ್ಟಿ ಹಾಗೂ ಜನಪರ ಕಾಳಜಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಸದಾ ಮಾದರಿಯಾಗಿದೆ ಎಂದು ಪ್ರಶಂಸಿಸಿದ್ದಾರೆ.

ಮಹಿಳಾ ನಾಯಕರಿಗೆ ಸ್ಫೂರ್ತಿ: ವಿಶೇಷವಾಗಿ ಮಹಿಳೆಯಾಗಿ ಹಲವು ವೈಯಕ್ತಿಕ ಹಾಗೂ ರಾಜಕೀಯ ಸವಾಲುಗಳನ್ನು ಎದುರಿಸಿ, ದೇಶದ ರಾಜಕೀಯದಲ್ಲಿ ಪ್ರಭಾವಶಾಲಿ ನಾಯಕತ್ವವನ್ನು ನೀಡಿದ ಸೋನಿಯಾ ಗಾಂಧಿಯವರ ಜೀವನ ಪಯಣವು ತಮ್ಮಂತಹ ಮಹಿಳಾ ಜನಪ್ರತಿನಿಧಿಗಳಿಗೆ ಸದಾ ಸ್ಫೂರ್ತಿಯ ಮೂಲವಾಗಿದೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಬಣ್ಣಿಸಿದ್ದಾರೆ.

ಅಪರೂಪದ ಕೃತಿ: ಪ್ರೀತಿ, ಅಗಲಿಕೆ, ಬದುಕಿನ ಅನುಭವಗಳು ಹಾಗೂ ತನ್ನತನದ ಹುಡುಕಾಟವನ್ನು ಒಳಗೊಂಡಿರುವ ಈ ಮಹತ್ವದ ಕೃತಿಯನ್ನು ಓದಲು ತಾವೂ ಸಹ ತುದಿಗಾಲಿನಲ್ಲಿ ನಿಂತು ಉತ್ಸುಕಳಾಗಿರುವುದಾಗಿ ತಿಳಿಸಿದ್ದಾರೆ.

ತ್ಯಾಗ ಮತ್ತು ಸಹನೆಯ ಪ್ರತೀಕ: ಸೋನಿಯಾ ಗಾಂಧಿಯವರ ಒಟ್ಟು ಬದುಕು ತ್ಯಾಗ, ತಾಳ್ಮೆ ಮತ್ತು ಬದ್ಧತೆಯ ಸಂಕೇತವಾಗಿದ್ದು, ಇತಿಹಾಸದ ಪ್ರಮುಖ ಘಟ್ಟಗಳನ್ನು ಈ ಪುಸ್ತಕದ ಮೂಲಕ ಹತ್ತಿರದಿಂದ ತಿಳಿಯಬಹುದು ಎಂದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles