Home ದಾವಣಗೆರೆ ಅಂದು ಗೋವಾದಲ್ಲಿ ಮನೆಮನೆಗೆ ತೆರಳಿ ಅಣಬೆ ಮಾರಾಟ: ಇಂದು 117 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಡಾ. ಸಂಗಮ್ ಕುರಾಡೆ ಸ್ಫೂರ್ತಿದಾಯಕ ಕಥೆ!
ದಾವಣಗೆರೆಬೆಂಗಳೂರುವಾಣಿಜ್ಯ

ಅಂದು ಗೋವಾದಲ್ಲಿ ಮನೆಮನೆಗೆ ತೆರಳಿ ಅಣಬೆ ಮಾರಾಟ: ಇಂದು 117 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಡಾ. ಸಂಗಮ್ ಕುರಾಡೆ ಸ್ಫೂರ್ತಿದಾಯಕ ಕಥೆ!

Share
ಅಣಬೆ
Share

ಪಣಜಿ: ಮಾರುಕಟ್ಟೆಯಲ್ಲಿ ಯಾವುದೇ ಬೇಡಿಕೆಯಿಲ್ಲದ, ಹೆಚ್ಚಿನವರಿಗೆ ಪರಿಚಯವೇ ಇಲ್ಲದ ಕಾಲದಲ್ಲಿ ಅಣಬೆ ಕೃಷಿಗೆ ಕೈಹಾಕಿದ ಗೋವಾದ ಡಾ. ಸಂಗಮ್ ಕುರಾಡೆ ಅವರ ಯಶೋಗಾಥೆ ಇಂದಿನ ಯುವ ಉದ್ಯಮಿಗಳಿಗೆ ಸ್ಫೂರ್ತಿದಾಯಕವಾಗಿದೆ.

1994ರಲ್ಲಿ ಕೇವಲ ಐದು ಬೆಳೆಯುವ ಕೊಠಡಿಗಳೊಂದಿಗೆ ತಮ್ಮ ಉದ್ಯಮ ಆರಂಭಿಸಿದ್ದ ಅವರು, ಇಂದು ಭಾರತದ ಅತಿ ದೊಡ್ಡ ಸಂಘಟಿತ ಅಣಬೆ ಉತ್ಪಾದಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಜೂಆರಿ ಫುಡ್ಸ್ ಗ್ರೂಪ್‌ನ ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇವರ ವ್ಯವಹಾರವು ಪ್ರಸ್ತುತ 117 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಸುತ್ತಿದೆ.

ಆರಂಭದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಮನವೊಲಿಸಲು ಹರಸಾಹಸ ಪಟ್ಟಿದ್ದ ಕುರಾಡೆ, 2009ರ ಭೀಕರ ಪ್ರವಾಹದಲ್ಲಿ ತಮ್ಮ ಸಂಪೂರ್ಣ ವ್ಯವಹಾರವನ್ನು ಕಳೆದುಕೊಂಡರೂ ಧೃತಿಗೆಡದೆ ಪುನರುತ್ಥಾನಗೊಂಡು ಈ ಸಾಧನೆ ಮಾಡಿದ್ದಾರೆ.

ಮಾರುಕಟ್ಟೆ ಸೃಷ್ಟಿಸಿದ ಸಾಹಸಿ: ಅಣಬೆಗಳು ಭಾರತೀಯ ಮನೆಗಳಲ್ಲಿ ಜನಪ್ರಿಯವಾಗಿಲ್ಲದ ಕಾಲದಲ್ಲಿ, ಕುರಾಡೆ ತಾವೇ ಸ್ವತಃ ಮಾಪುಸಾ ಮಾರುಕಟ್ಟೆಗೆ ತೆರಳಿ ವ್ಯಾಪಾರಿಗಳಿಗೆ ಅಣಬೆಯ ಉಪಯೋಗ ಹಾಗೂ ಅಡುಗೆ ಮಾಡುವ ವಿಧಾನವನ್ನು ವಿವರಿಸಿ ಮಾರುಕಟ್ಟೆಯನ್ನು ಸೃಷ್ಟಿಸಿದರು.

ಪ್ರವಾಹದ ಸಂಕಷ್ಟದಿಂದ ಮರುಜನ್ಮ: 2009ರಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಇವರ ಘಟಕ ಸಂಪೂರ್ಣ ನಾಶವಾಗಿತ್ತು. ಆದರೆ ಕೇವಲ ಮೂರು ತಿಂಗಳಲ್ಲಿ ಮರುನಿರ್ಮಾಣಗೊಂಡು, 2014ರಲ್ಲಿ ಉಸ್ಗಾವೊದಲ್ಲಿ ಬೃಹತ್ ಸೌಲಭ್ಯದೊಂದಿಗೆ ವ್ಯವಹಾರವನ್ನು ವಿಸ್ತರಿಸಿದರು.

ಅಗ್ರಿಕಲ್ಚರ್ ಟು ಮ್ಯಾನುಫ್ಯಾಕ್ಚರಿಂಗ್ (Agrifacture): ಕೇವಲ ಬೇಸಾಯ ಮಾತ್ರವಲ್ಲದೆ ಕಾಂಪೋಸ್ಟ್ ತಯಾರಿಕೆ, ಸ್ಪಾನ್ ಉತ್ಪಾದನೆ, ಪ್ಯಾಕಿಂಗ್ ಹಾಗೂ ವಿತರಣೆಯವರೆಗೆ ಅತ್ಯಾಧುನಿಕ ಮಾದರಿಯಲ್ಲಿ ಕಂಪನಿ ಕಾರ್ಯಾಚರಣೆ ನಡೆಸುತ್ತಿದೆ. ಪ್ರಸ್ತುತ ಕಂಪನಿಯು ಪ್ರತಿದಿನ ಸುಮಾರು 28,000 ಕೆಜಿ ಅಣಬೆಗಳನ್ನು ಉತ್ಪಾದಿಸುತ್ತದೆ.

ಕ್ರಿಸಿಲ್ (CRISIL) ವರದಿಯ ಪ್ರಕಾರ, ಕುರಾಡೆ ಪ್ರಮೋಟ್ ಮಾಡಿರುವ ಜೂಆರಿ ಫುಡ್ಸ್ ಗ್ರೂಪ್ 2025ನೇ ಹಣಕಾಸು ವರ್ಷದಲ್ಲಿ 116.7 ಕೋಟಿ ರೂ.ಗಳ ಆಪರೇಟಿಂಗ್ ಆದಾಯವನ್ನು ದಾಖಲಿಸಿದ್ದು, ಕಂಪನಿಯ ನಿವ್ವಳ ಲಾಭ ಕೂಡ ಗಣನೀಯವಾಗಿ ಏರಿಕೆಯಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles