Home ದಾವಣಗೆರೆ ಭಾವುಕರಾದ ನೌಕರರು: ಸೂರತ್ ವ್ಯಾಪಾರಿಯ ದೊಡ್ಡ ಮನಸ್ಸು, ದೀಪಾವಳಿ ಬೋನಸ್‌ ಆಗಿ ನೌಕರರಿಗೆ ತಲಾ 1 ಲಕ್ಷ ರೂ. ಅಧಿಕ ನಗದು ವಿತರಣೆ!
ದಾವಣಗೆರೆನವದೆಹಲಿಬೆಂಗಳೂರು

ಭಾವುಕರಾದ ನೌಕರರು: ಸೂರತ್ ವ್ಯಾಪಾರಿಯ ದೊಡ್ಡ ಮನಸ್ಸು, ದೀಪಾವಳಿ ಬೋನಸ್‌ ಆಗಿ ನೌಕರರಿಗೆ ತಲಾ 1 ಲಕ್ಷ ರೂ. ಅಧಿಕ ನಗದು ವಿತರಣೆ!

Share
ದೀಪಾವಳಿ
Share

ಸೂರತ್ (ಗುಜರಾತ್): ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಗುಜರಾತ್‌ನ ಸೂರತ್ ನಗರದ ಜವಳಿ ವ್ಯಾಪಾರಿಯೊಬ್ಬರು ತನ್ನ ನೌಕರರಿಗೆ ನೀಡಿದ ಅನಿರೀಕ್ಷಿತ ಉಡುಗೊರೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೂರತ್‌ನಲ್ಲಿ ಜವಳಿ ವ್ಯಾಪಾರ ನಡೆಸುತ್ತಿರುವ ರಾಮಸ್ವರೂಪ್ ಮುಂಡೆ ಎಂಬುವವರು ತಮ್ಮ ಬಳಿ ಕೆಲಸ ಮಾಡುವ ನೌಕರರಿಗೆ ತಲಾ 1 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ತಾಜಾ ನೋಟಿನ ಕಂತೆಗಳ ರೂಪದಲ್ಲಿ ದೀಪಾವಳಿ ಬೋನಸ್ ಆಗಿ ನೀಡಿದ್ದಾರೆ.

ಬೆಳ್ಳಿ ಬಣ್ಣದ ತಟ್ಟೆಯಲ್ಲಿ ಹತ್ತು, ಇಪ್ಪತ್ತು, ಐವತ್ತು, ನೂರು, ಇನ್ನೂರು ಹಾಗೂ ಐನೂರು ಮುಖಬೆಲೆಯ ಹೊಸ ನೋಟುಗಳನ್ನು ಅಂದವಾಗಿ ಜೋಡಿಸಿ ನೌಕರರಿಗೆ ಹಂಚಲಾಗಿದೆ. ಈ ಅನಿರೀಕ್ಷಿತ ಉಡುಗೊರೆಯನ್ನು ಕಂಡು ಕೆಲ ನೌಕರರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಕಷ್ಟದ ದಿನಗಳನ್ನು ಅನುಭವಿಸಿ ಬೆಳೆದಿರುವ ತನಗೆ ನೌಕರರೇ ಕುಟುಂಬದ ಸದಸ್ಯರಿದ್ದಂತೆ ಎಂದು ವ್ಯಾಪಾರಿ ರಾಮಸ್ವರೂಪ್ ಮುಂಡೆ ತಿಳಿಸಿದ್ದಾರೆ.

ಉದಾರ ಬೋನಸ್ ವಿತರಣೆ: ಹಬ್ಬದ ಸಂದರ್ಭದಲ್ಲಿ ಕೇವಲ ಸಿಹಿತಿಂಡಿ ಅಥವಾ ಸಣ್ಣಪುಟ್ಟ ಉಡುಗೊರೆಗಳನ್ನು ನೀಡುವ ಬದಲು, 20 ನೌಕರರಿಗೆ ತಲಾ 1 ಲಕ್ಷ ರೂ. ಗೂ ಅಧಿಕ ನಗದನ್ನು ಬೋನಸ್ ಆಗಿ ನೀಡಿ ಮಾದರಿಯಾಗಿದ್ದಾರೆ.

ನೌಕರರೇ ನನ್ನ ಕುಟುಂಬ: ಬಾಲ್ಯದಲ್ಲಿ ಬಡತನವನ್ನು ಅನುಭವಿಸಿರುವ ತಮಗೆ ಹಬ್ಬದ ದಿನಗಳಲ್ಲಿ ಕುಟುಂಬಗಳು ಎದುರಿಸುವ ಆರ್ಥಿಕ ಮುಗ್ಗಟ್ಟು ತಿಳಿದಿದೆ ಎಂದು ವ್ಯಾಪಾರಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್: ನೌಕರರಿಗೆ ತಟ್ಟೆಯಲ್ಲಿ ಹಣವಿಟ್ಟು ವಿತರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉದ್ಯಮಿಯ ಔದಾರ್ಯವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಶ್ರಮಕ್ಕೆ ತಕ್ಕ ಪ್ರತಿಫಲ: ಇಡೀ ವರ್ಷ ತಮ್ಮ ವ್ಯಾಪಾರ ಹಾಗೂ ಯಶಸ್ಸಿಗೆ ಶ್ರಮಿಸಿದ ನೌಕರರುಳ ಕುಟುಂಬಗಳು ಸಂತೋಷದಿಂದ ಹಬ್ಬ ಆಚರಿಸಲಿ ಎಂಬ ಕಾರಣಕ್ಕೆ ಈ ಉಡುಗೊರೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಸರಳತೆ ಮತ್ತು ಔದಾರ್ಯದ ಈ ನಡೆ ವ್ಯಾಪಾರ ವಲಯದಲ್ಲಿ ಭಾರಿ ಪ್ರಶಂಸೆಗೆ ಕಾರಣವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles