Home ದಾವಣಗೆರೆ ಅಂಗಾಂಗ ದಾನ ಮಾಡಿದ ನರೇಶ್ ಕುಟುಂಬ: ಪತ್ನಿಗೆ ಉದ್ಯೋಗಾವಕಾಶ, ಪುತ್ರನ ಶಿಕ್ಷಣಕ್ಕೆ ಎಸ್.ಎಸ್. ಜನಕಲ್ಯಾಣ ಟ್ರಸ್ಟ್‌ನಿಂದ ಸಹಾಯ ಘೋಷಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆಬೆಂಗಳೂರು

ಅಂಗಾಂಗ ದಾನ ಮಾಡಿದ ನರೇಶ್ ಕುಟುಂಬ: ಪತ್ನಿಗೆ ಉದ್ಯೋಗಾವಕಾಶ, ಪುತ್ರನ ಶಿಕ್ಷಣಕ್ಕೆ ಎಸ್.ಎಸ್. ಜನಕಲ್ಯಾಣ ಟ್ರಸ್ಟ್‌ನಿಂದ ಸಹಾಯ ಘೋಷಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್

Share
ಅಂಗಾಂಗ
Share

ದಾವಣಗೆರೆ: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ನಗರದ ಆಂಜನೇಯ ಬಡಾವಣೆಯ ನರೇಶ್ ಎಚ್.ಬಿ. ಅವರ ಕುಟುಂಬಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಸಾಂತ್ವನ ಹೇಳಿ, ಅಗತ್ಯ ನೆರವು ನೀಡುವ ಭರವಸೆ ನೀಡಿದರು.

ನರೇಶ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಂಸದರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಅವರ ಪತ್ನಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ, ಪುತ್ರನ ಶಿಕ್ಷಣಕ್ಕೆ ಎಸ್.ಎಸ್. ಜನಕಲ್ಯಾಣ ಟ್ರಸ್ಟ್ ವತಿಯಿಂದ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ‘ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದ ನಡುವೆಯೂ ಇತರರ ಜೀವ ಉಳಿಸುವ ಉದ್ದೇಶದಿಂದ ಅಂಗಾಂಗ ದಾನಕ್ಕೆ ಸಮ್ಮತಿಸಿದ ಕುಟುಂಬದ ನಿರ್ಧಾರ ಅತ್ಯಂತ ಶ್ಲಾಘನೀಯ. ವೈಯಕ್ತಿಕ ನೋವಿನ ನಡುವೆಯೂ ಮಾನವೀಯತೆ ಮೆರೆದ ಕುಟುಂಬದ ಉದಾತ್ತ ನಡೆ ಸಮಾಜಕ್ಕೆ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಂಗಾಂಗ ದಾನವು ಜೀವ ಉಳಿಸುವ ಮಹಾದಾನವಾಗಿದೆ. ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ ಹಲವು ಜೀವಗಳಿಗೆ ಹೊಸ ಬದುಕು ನೀಡಲು ಸಾಧ್ಯವಿದೆ. ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದರು.

‘ನರೇಶ್ ಅವರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಅವರ ಪತ್ನಿಗೆ ಉದ್ಯೋಗಾವಕಾಶ ಹಾಗೂ ಪುತ್ರನ ಶೈಕ್ಷಣಿಕ ಭವಿಷ್ಯಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ನರೇಶ್ ಅವರ ಮಾನವೀಯ ಕೊಡುಗೆ ಹಾಗೂ ಅವರ ಕುಟುಂಬದ ನಿಸ್ವಾರ್ಥ ನಿರ್ಧಾರ ಇತರರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದ ಸಂಸದರು, ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles