Home ದಾವಣಗೆರೆ ಮೀಸಲು ಕ್ಷೇತ್ರಗಳ ಆವರ್ತನ ಕೋರಿಕೆ ಅರ್ಜಿ: “ಇದು ಪ್ರತಿಭಟನೆಯ ಕಾಲ, ನೀವು ತಪ್ಪು ನಂಬರ್‌ಗೆ ಕರೆ ಮಾಡಿದ್ದೀರಿ” ಎಂದ ಸುಪ್ರೀಂ ಕೋರ್ಟ್
ದಾವಣಗೆರೆನವದೆಹಲಿಬೆಂಗಳೂರು

ಮೀಸಲು ಕ್ಷೇತ್ರಗಳ ಆವರ್ತನ ಕೋರಿಕೆ ಅರ್ಜಿ: “ಇದು ಪ್ರತಿಭಟನೆಯ ಕಾಲ, ನೀವು ತಪ್ಪು ನಂಬರ್‌ಗೆ ಕರೆ ಮಾಡಿದ್ದೀರಿ” ಎಂದ ಸುಪ್ರೀಂ ಕೋರ್ಟ್

Share
ಸುಪ್ರೀಂ ಕೋರ್ಟ್
Share

ನವದೆಹಲಿ: ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾದ ಕ್ಷೇತ್ರಗಳಿಗೆ ಕಡ್ಡಾಯ ಆವರ್ತನ (Rotation) ವ್ಯವಸ್ಥೆಯನ್ನು ಕೋರಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಮೌಖಿಕ ಟಿಪ್ಪಣಿ ಮಾಡಿದೆ. ಅರ್ಜಿದಾರರ ಪರ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು, “ನೀವು ತಪ್ಪು ನಂಬರ್‌ಗೆ ಕರೆ ಮಾಡಿದ್ದೀರಿ – ಇದು ಪ್ರತಿಭಟನೆಗಳು ಮತ್ತು ಪ್ರದರ್ಶನಗಳ ಕಾಲ, ಬಹುಶಃ ನೀವೂ ಅದೇ ಹಾದಿ ಹಿಡಿಯಬೇಕು” ಎಂದು ಲಘು ಧಾಟಿಯಲ್ಲಿ ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯ 191-ಕಾದಿಪುರ ವಿಧಾನಸಭಾ ಕ್ಷೇತ್ರವು 1952ರ ಮೊದಲ ಚುನಾವಣೆಯಿಂದಲೂ ಎಸ್‌ಸಿಗೆ ಮೀಸಲಾಗಿರುವುದನ್ನು ಪ್ರಶ್ನಿಸಿ ಜಗದೀಶ್ ಸಿಂಗ್ ಎಂಬ ಮತದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ದಶಕಗಳಿಂದ ಒಂದೇ ಕ್ಷೇತ್ರ ಮೀಸಲಿಟ್ಟಿರುವುದರಿಂದ ಕೆಲವೇ ಕೆಲವು ಕುಟುಂಬಗಳಿಗೆ ಲಾಭವಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.

ನ್ಯಾಯಾಲಯದ ಗದರಿಕೆ: ಮೀಸಲು ಕ್ಷೇತ್ರಗಳ ಆವರ್ತನ ವಿಚಾರವು ಶಾಸಕಾಂಗಕ್ಕೆ ಬಿಟ್ಟ ವಿಷಯವಾಗಿದ್ದು, ಸಂವಿಧಾನದ ಪರಿಧಿಯನ್ನು ಮೀರಲು ಅಥವಾ ಸಂವಿಧಾನವನ್ನು ಮರುಬರೆಯಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಮತದಾರರ ಹಕ್ಕಿನ ಕುರಿತು ಅಭಿಪ್ರಾಯ: ಕ್ಷೇತ್ರ ಮೀಸಲಿಟ್ಟ ಮಾತ್ರಕ್ಕೆ ಒಬ್ಬ ವ್ಯಕ್ತಿಯ ಮತದಾನದ ಹಕ್ಕಿಗೆ ಯಾವುದೇಚ್ಯುತಿ ಬರುವುದಿಲ್ಲ. ಮತದಾರರು ತಮ್ಮಿಷ್ಟದ ಪಕ್ಷ ಮತ್ತು ಸಿದ್ಧಾಂತಕ್ಕೆ ಮತ ಚಲಾಯಿಸಬಹು ಹೊರತು ಜಾತಿಯ ಆಧಾರದ ಮೇಲಲ್ಲ ಎಂದು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ನಿಯಮ ಅನ್ವಯಿಸುವುದಿಲ್ಲ: ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿರುವ ಆವರ್ತನ ಪದ್ಧತಿಯನ್ನು ವಿಧಾನಸಭೆಗಳಿಗೂ ಅನ್ವಯಿಸಲು ಆಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ವಕೀಲರ ಚುಟುಕು ಪ್ರತಿಕ್ರಿಯೆ: ಮುಖ್ಯ ನ್ಯಾಯಮೂರ್ತಿಗಳ ಮಾತಿಗೆ ಪ್ರತಿಕ್ರಿಯಿಸಿದ ಅರ್ಜಿದಾರರ ವಕೀಲರು, ತಮಗೆ ಪ್ರತಿಭಟಿಸುವ ಯಾವುದೇ ಉದ್ದೇಶವಿಲ್ಲ ಮತ್ತು ತಮಗೆ ಗಂಟಲು ನೋವು (Sore Throat) ಇದೆ ಎಂದು ತಿಳಿಸಿದಾಗ ನ್ಯಾಯಾಲಯದಲ್ಲಿ ನಗೆಯ ಅಲೆ ಎದ್ದಿತು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles