Home ಕ್ರೈಂ ನ್ಯೂಸ್ ಶ್ರೀರಾಮನಿಗೆ ನಿಯಮಗಳು, ಆರೆಸ್ಸೆಸ್‌ಗೆ ವಿನಾಯಿತಿಯೇ?: ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಶ್ರೀರಾಮನಿಗೆ ನಿಯಮಗಳು, ಆರೆಸ್ಸೆಸ್‌ಗೆ ವಿನಾಯಿತಿಯೇ?: ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ರಾಮಲಲ್ಲಾನ ದೇವಸ್ಥಾನದ ಲೆಕ್ಕಪತ್ರವನ್ನೇ ಕಡ್ಡಾಯವಾಗಿ ನೀಡಬೇಕಾದ ಈ ದೇಶದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಗ್ರಹಿಸುವ ಕೋಟ್ಯಂತರ ರೂಪಾಯಿ ‘ಗುರುದಕ್ಷಿಣೆ’ಗೆ ಮಾತ್ರ ಯಾವುದೇ ಲೆಕ್ಕವಿಲ್ಲವೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ಪ್ರಶ್ನಿಸಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಆದರೆ ಆರೆಸ್ಸೆಸ್‌ಗೆ ಮಾತ್ರ ವಿಶೇಷ ವಿನಾಯಿತಿ ಏಕೆ ಎಂದು ಕಿಡಿಕಾರಿದ್ದಾರೆ.

ಭಗವಾ ಧ್ವಜದ ಹೆಸರಿನಲ್ಲಿ ನಗದು ರೂಪದಲ್ಲಿ ಕೋಟ್ಯಂತರ ರೂ. ದೇಣಿಗೆ ಹಾಗೂ ಗುರುದಕ್ಷಿಣೆ ಸಂಗ್ರಹಿಸಿದರೂ ಆದಾಯ ತೆರಿಗೆ ಇಲಾಖೆ (IT) ಹಾಗೂ ಜಾರಿ ನಿರ್ದೇಶನಾಲಯ (ED) ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಬೇರೆ ಯಾರಾದರೂ ಸ್ವಯಂಸೇವಕ ಸಂಘ ಕಟ್ಟಿ ಈ ರೀತಿ ದೇಣಿಗೆ ಸಂಗ್ರಹಿಸಿದರೆ ತಕ್ಷಣವೇ ತನಿಖೆ ಶುರುವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಚುನಾವಣಾ ಆಯೋಗದ ಸ್ವಾಯತ್ತತೆ ಹಾಗೂ ಬಿಜೆಪಿಯವರ ಮೌನ ಸಮರ್ಥನೆ ಕುರಿತಾಗಿಯೂ ಅವರು ಗಂಭೀರ ಆರೋಪಗಳನ್ನು ಮಾಡಿದರು.

ಗುರುದಕ್ಷಿಣೆ ಲೆಕ್ಕಪತ್ರ: ಭಗವಾ ಧ್ವಜದ ಹೆಸರಿನಲ್ಲಿ ನಗದು ರೂಪದಲ್ಲಿ ಸಂಗ್ರಹಿಸಲಾಗುವ ಆರೆಸ್ಸೆಸ್ ಕೋಟ್ಯಂತರ ರೂಪಾಯಿ ಗುರುದಕ್ಷಿಣೆಗೆ ಯಾವುದೇ ಲೆಕ್ಕಪತ್ರವಿಲ್ಲದಿರುವುದರ ಬಗ್ಗೆ ತನಿಖೆಯಾಗಬೇಕು.

ಐಟಿ ಮತ್ತು ಇಡಿ ಮೌನೇಕೆ?: ರಾಮಮಂದಿರದ ಲೆಕ್ಕಪತ್ರ ಕೇಳುವ ಕೇಂದ್ರ ಸರ್ಕಾರಿ ಸಂಸ್ಥೆಗಳು, ಆರೆಸ್ಸೆಸ್ ದೇಣಿಗೆಯ ವಿಚಾರದಲ್ಲಿ ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ಏಕೆ ಎಂದು ಪ್ರಶ್ನೆ.

ಚುನಾವಣಾ ಆಯೋಗದ ಸ್ವಾಯತ್ತತೆ: ಸ್ವತಂತ್ರವಾಗಿರಬೇಕಾದ ಚುನಾವಣಾ ಆಯೋಗವನ್ನು ಪ್ರಶ್ನಿಸಿದರೆ, ಆಯೋಗಕ್ಕಿಂತ ಹೆಚ್ಚಾಗಿ ಬಿಜೆಪಿ ನಾಯಕರು ಹಾಗೂ ಟ್ರೋಲ್ ಪಡೆಗಳು ಯಾಕೆ ಮೈಮೇಲೆಳೆದುಕೊಂಡು ಸಮರ್ಥನೆಗೆ ಇಳಿಯುತ್ತವೆ?

ಕಾನೂನಿನ ಮುಂದೆ ಎಲ್ಲರೂ ಸಮಾನರು: ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ನಿರ್ದಿಷ್ಟ ಸಂಘಟನೆಗಳಿಗೆ ವಿಶೇಷ ವಿನಾಯಿತಿ ನೀಡಬಾರದು ಎಂದು ಆಗ್ರಹ.

ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡಲು ಸಾಧ್ಯವಿಲ್ಲದೆ ಚುನಾವಣಾ ಆಯೋಗವು ಪರದಾಡುತ್ತಿದ್ದು, ಅದನ್ನು ಮರೆಮಾಚಲು ಬಿಜೆಪಿ ನಾಯಕರು ಆಯೋಗದ ಪರವಾಗಿ ಮೈಪಡೆ ಕಟ್ಟಿ ನಿಲ್ಲುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತೀವ್ರವಾಗಿ ಟೀಕಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles