Home ದಾವಣಗೆರೆ ‘ಭಗವಾನ್ ದಾದಾ’ ಬಾಲನಟನಿಂದ ಜೈಲರ್ 2ವರೆಗೆ ರಜನಿಕಾಂತ್ ಜತೆ ಹೃತಿಕ್ ವಿಶೇಷ ನಂಟು: ಸಂಭಾವನೆ ಪಡೆಯಲಿಲ್ವ ಬಾಲಿವುಡ್ ಖ್ಯಾತ ನಟ? ಯಾಕೆ?
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

‘ಭಗವಾನ್ ದಾದಾ’ ಬಾಲನಟನಿಂದ ಜೈಲರ್ 2ವರೆಗೆ ರಜನಿಕಾಂತ್ ಜತೆ ಹೃತಿಕ್ ವಿಶೇಷ ನಂಟು: ಸಂಭಾವನೆ ಪಡೆಯಲಿಲ್ವ ಬಾಲಿವುಡ್ ಖ್ಯಾತ ನಟ? ಯಾಕೆ?

Share
ರಜನಿಕಾಂತ್
Share

ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಮುನ್ನDಯು ತ್ತಿದ್ದು, ಇದೀಗ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ (Cameo) ಕಾಣಿಸಿಕೊಂಡಿರುವ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಅವರ ಸಂಭಾವನೆ ಕುರಿತಂತೆ ದೊಡ್ಡ ಚರ್ಚೆ ಹುಟ್ಟುಹಾಕಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಜೊತೆ ತೆರೆ ಹಂಚಿಕೊಂಡಿರುವ ಹೃತಿಕ್ ರೋಷನ್, ರಜನಿ ಮೇಲಿನ ಅಪ್ಪಟ ಗೌರವದಿಂದಾಗಿ ಈ ಅತಿಥಿ ಪಾತ್ರಕ್ಕೆ ಯಾವೇ ರೀತಿಯ ಸಂಭಾವನೆಯನ್ನು ಪಡೆದಿಲ್ಲ ಎಂಬ ವರದಿಗಳು ಸದ್ದು ಮಾಡುತ್ತಿವೆ.

ಶೂಟಿಂಗ್ ಸೆಟ್‌ನಲ್ಲಿ ‘ತಲೈವಾ’ ರಜನಿಕಾಂತ್ ಅವರ ಕಾಲಿiಗೆ ನಮಸ್ಕರಿಸಿ ಆಶೀರ್ವಾದ ಪಡೆದ ಹೃತಿಕ್, ಅವರ ಮೇಲಿರುವ ಅಚಲವಾದ ಗೌರವದಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ಈ ಕುರಿತು ಚಿತ್ರತಂಡ ಅಥವಾ ನಟನಿಂದ ಯಾವುದೇ ಅಧಿಕೃತ ಸ್ಪಷ್ಟತೆ ಸಿಕ್ಕಿಲ್ಲ. ಮತ್ತೊಂದೆಡೆ, ಸಿನಿವಲಯದ ಕೆಲ ವರದಿಗಳ ಪ್ರಕಾರ ಅವರು ಈ ಕೆಲವೇ ನಿಮಿಷಗಳ ಪಾತ್ರಕ್ಕಾಗಿ ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂದೂ ಬಿಂಬಿಸಲಾಗಿದೆ.
ಅಂದಹಾಗೆ, ಹೃತಿಕ್ ರೋಷನ್ ಬಾಲ್ಯದಲ್ಲಿ ಬಾಲನಟನಾಗಿ ನಟಿಸಿದ್ದ 1986ರ ‘ಭಗವಾನ್ ದಾದಾ’ ಚಿತ್ರದ ಬಳಿಕ ದಶಕಗಳ ನಂತರ ಈ ಇಬ್ಬರು ದಿಗ್ಗಜರು ಮತ್ತೆ ಒಂದೇ ತೆರೆಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಖತ್ ರೋಮಾಂಚನ ತಂದಿದೆ.
Share

Leave a comment

Leave a Reply

Your email address will not be published. Required fields are marked *

Related Articles