ಭಾಗಪತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಭಾಗಪತ್‌ನಲ್ಲಿ ಭೀಕರ ಹಾಗೂ ನಡುಕ ಹುಟ್ಟಿಸುವ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯನ್ನು ಕೊಲೆ ಮಾಡಿ ಪ್ರಿಯಕರನೊಂದಿಗೆ ಡೆಹ್ರಾಡೂನ್‌ನಲ್ಲಿ ಹೊಸ ಜೀವನ ಆರಂಭಿಸಲು ಸಂಚು ರೂಪಿಸಿದ್ದ ಮಹಿಳೆಯೊಬ್ಬಳು, ಕೊಲೆಯ ಸಂಪೂರ್ಣ ಯೋಜನೆಯನ್ನು ತಾನೇ ಹೆಣೆದು ಪತಿಯನ್ನೇ ಹತ್ಯೆ ಮಾಡಿಸಿದ್ದಾಳೆ.
ಕೊಲೆ ನಡೆಯುವಾಗ ಪ್ರಿಯಕರನಿಂದ ವಾಟ್ಸಾಪ್‌ನಲ್ಲಿ ಕ್ಷಣ ಕ್ಷಣದ ಅಪ್‌ಡೇಟ್ ಪಡೆದಿರುವ ಖತರ್ನಾಕ್ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಬಾಗ್ಪತ್ ಮೂಲದ ಊರ್ಮಿಳಾ ಮತ್ತು ಆಕೆಯ ಪ್ರಿಯಕರ, ಬೈಕ್ ಮೆಕ್ಯಾನಿಕ್ ಸಿಕಂದರ್ ಬಂಧಿತ ಆರೋಪಿಗಳು. ಅಕ್ಟೋಬರ್ 18 ರಂದು ರಾಮಲೀಲಾ ವೀಕ್ಷಿಸಲು ಹೋದ ಪ್ರಮೋದ್ (ಊರ್ಮಿಳಾ ಪತಿ) ಶವವಾಗಿ ಪತ್ತೆಯಾಗಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಪತ್ನಿ ಊರ್ಮಿಳಾ ಮತ್ತು ಸಿಕಂದರ್ ನಡುವಿನ ಅಕ್ರಮ ಸಂಬಂಧದ ಸುಳಿವು ಸಿಕ್ಕಿದ್ದು, ಕಠಿಣ ವಿಚಾರಣೆ ನಡೆಸಿದಾಗ ಇಡೀ ಕೊಲೆ ಸಂಚು ಬಯಲಾಗಿದೆ.
ಕೊಲೆಯ ಸಂಚು: ಊರ್ಮಿಳಾ ತನ್ನ ಪ್ರಿಯಕರ ಸಿಕಂದರ್‌ಗೆ ಎರಡು ನಿದ್ರೆ ಮಾತ್ರೆಗಳನ್ನು ನೀಡಿ, ಪತಿ ಪ್ರಮೋದ್‌ನ ಮಧ್ಯದಲ್ಲಿ ಬೆರೆಸುವಂತೆ ಸೂಚನೆ ನೀಡಿದ್ದಳು.
ಸಿಸಿಟಿವಿ ತಡೆ ಹಾಗೂ ಹತ್ಯೆ: ಸಿಸಿಟಿವಿ ಕ್ಯಾಮೆರಾಗಳಿಗೆ ಸಿಗದಂತೆ ಹೊಲಗಳ ಮಾರ್ಗವಾಗಿ ತೆರಳಿದ್ದ ಸಿಕಂದರ್, ಪ್ರಮೋದ್‌ಗೆ ನಿದ್ರೆ ಮಾತ್ರೆ ಬೆರೆಸಿದ ಮದ್ಯ ಕುಡಿಸಿದ್ದಾನೆ. ಬಳಿಕ ಗ್ಲಾಸ್ ಬಾಟಲಿಯಿಂದ ತಲೆಗೆ ಬಾರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ವಾಟ್ಸಾಪ್ ಅಪ್‌ಡೇಟ್ ಹಾಗೂ ಸಾಕ್ಷ್ಯ: ಕೊಲೆ ನಡೆಯುತ್ತಿರುವಾಗ ಊರ್ಮಿಳಾ ವಾಟ್ಸಾಪ್ ಮೆಸೇಜ್ ಮೂಲಕ ಸಿಕಂದರ್‌ನಿಂದ ಅಪ್‌ಡೇಟ್ ಪಡೆಯುತ್ತಿದ್ದಳು. ಕೊಲೆ ನಂತರ ನಂಬರ್ ಬ್ಲಾಕ್ ಮಾಡುವುದಾಗಿ ಹೇಳಿದ್ದಳು. ಆದರೆ, ಸಿಕಂದರ್ ವಾಟ್ಸಾಪ್ ಚಾಟ್‌ಗಳ ಸ್ಕ್ರೀನ್‌ಶಾಟ್ ತೆಗೆದುಕೊಂಡಿದ್ದು, ಪೊಲೀಸರಿಗೆ ಪ್ರಮುಖ ಸಾಕ್ಷಿಯಾಗಿದೆ.
ಪ್ರಮೋದ್ ಕೊಲೆಯಾದ ನಂತರ ಆತನ ಶವವನ್ನು ಕಬ್ಬಿನ ಗದ್ದೆಯಲ್ಲಿ ಎಸೆದು ಆರೋಪಿ ಸಿಕಂದರ್ ರಾಮಲೀಲಾ ಕಾರ್ಯಕ್ರಮಕ್ಕೆ ತೆರಳಿದ್ದ. ಪ್ರಸ್ತುತ ಭಾಗಪತ್ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.





Leave a comment