ನಾಗಪುರ: ಪ್ರಪಂಚದಾದ್ಯಂತ ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಮತ್ತು ತಮ್ಮ ಕೈಗೊಂಬೆಗಳನ್ನು ಅಧಿಕಾರದಲ್ಲಿರಿಸಲು “ಆಡಳಿತ ಬದಲಾವಣೆ” ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಭಾರತದ ಕ್ಷಿಪ್ರ ಬೆಳವಣಿಗೆಯು ಇಂತಹ ಶಕ್ತಿಗಳ ಹಾದಿಗೆ ಅಡ್ಡಿಯಾಗಿದ್ದು, ಭಾರತವೇ ಅವರ ಅಂತಿಮ ಗುರಿಯಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
#WATCH | Nagpur, Maharashtra: At RSS' Vijayadashami celebrations, RSS chief Mohan Bhagwat says, "When our country was reeling under the attacks of foreign invaders, when they were unleashing terror on those who followed 'svadharma' here, and there was an atmosphere of terror… pic.twitter.com/FfmbHRCahk
— ANI (@ANI) October 20, 2026
ನಾಗಪುರದಲ್ಲಿ ನಡೆದ ಆರ್‌ಎಸ್‌ಎಸ್‌ನ ವಿಜಯದಶಮಿ ಉತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ, ಹಿಂದೂ ಸಮಾಜ ಮತ್ತು ಸಂಘವನ್ನು ಯಾವ ರೀತಿಯಲ್ಲಿ ದುರ್ಬಲಗೊಳಿಸಬಹುದು ಎಂಬ ಕುರಿತು ರಾಕ್ಷಸಿ ಶಕ್ತಿಗಳು ನಿರಂತರ ಯೋಜನೆ ರೂಪಿಸಿ ಕಾರ್ಯನಿರ್ವಹಿಸುತ್ತಿವೆ. ಸಣ್ಣಪುಟ್ಟ ಅಧಿಕಾರದಾಸೆ ಮತ್ತು ವಿವೇಚನೆಯ ಕೊರತೆಯಿಂದಾಗಿ ಕೆಲ ಪ್ರಭಾವಿ ನಾಯಕರು ಕೂಡ ಈ ದೇಶವಿರೋಧಿ ಕೃತ್ಯಗಳಿಗೆ ಸಾಥ್ ನೀಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಜಾಗತಿಕ ಶಕ್ತಿಗಳ ಪಿತೂರಿ: ಫ್ರಾನ್ಸ್, ಅಲ್ಬೇನಿಯಾ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಉಂಟಾಗಿರುವ ಅಶಾಂತಿಯನ್ನು ಉಲ್ಲೇಖಿಸಿದ ಅವರು, ಪಾಶ್ಚಿಮಾತ್ಯ ದೇಶಗಳಿಂದ ಬೀಸುತ್ತಿರುವ ಬಿರುಗಾಳಿಯು ಕೌಟುಂಬಿಕ ಮೌಲ್ಯ, ನಾಗರಿಕತೆ ಮತ್ತು ಸಂಸ್ಕೃತಿಯನ್ನು ನಾಶಪಡಿಸಲು ಯತ್ನಿಸುತ್ತಿದೆ ಎಂದು ಹೇಳಿದರು.
ಆಡಳಿತ ಬದಲಾವಣೆ ತಂತ್ರ: ಆಡಳಿತ ಬದಲಾವಣೆಯ ಮೂಲಕ ಪರಿಸ್ಥಿತಿಯನ್ನು ಸರಿಪಡಿಸಬಹುದು ಎಂಬುದು ಕೇವಲ ನೆಪ. ತಮ್ಮ ಹಿತಾಸಕ್ತಿ ಕಾಯುವ ಜನರನ್ನು ಅಧಿಕಾರಕ್ಕೆ ತರುವುದೇ ಇಂತಹ ಕಾರ್ಯಾಚರಣೆಗಳ ಮುಖ್ಯ ಉದ್ದೇಶವಾಗಿದೆ.
ಪ್ರಜಾಸತ್ತಾತ್ಮಕ ಚಳವಳಿಗಳ ಸ್ವರೂಪ: ಅಭಿವೃದ್ಧಿಶೀಲ ದೇಶದಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ಸಹಜ. ಆದರೆ, ಚಳವಳಿಗಳ ಮೂಲ ಉದ್ದೇಶ ಕೇವಲ ಪ್ರತಿಭಟಿಸುವುದಾಗಿರಬಾರದು, ಪರಿಹಾರ ಕಂಡುಕೊಳ್ಳುವುದಾಗಿರಬೇಕು.
ಸಮಾಜ ಮತ್ತು ಯುವಜನರ ಪಾತ್ರ: ಭಾರತದ ದೃಢವಾದ ವಿದೇಶಾಂಗ ನೀತಿಗಳು, ಪ್ರಬಲ ನಾಯಕತ್ವ ಹಾಗೂ ದೇಶದ ಯುವ ಪೀಳಿಗೆಯಲ್ಲಿ ಬೆಳೆಯುತ್ತಿರುವ ಜವಾಬ್ದಾರಿಯುತ ನಡವಳಿಕೆಯು ಇಂತಹ ವಿದೇಶಿ ಶಕ್ತಿಗಳ ತಂತ್ರಗಳನ್ನು ವಿಫಲಗೊಳಿಸಿದೆ ಎಂದು ಭಾಗವತ್ ತಿಳಿಸಿದರು.
ಸರ್ಕಾರ, ಆಡಳಿತ ಮತ್ತು ಸಮಾಜದ ವಿವಿಧ ಸಂಘಟನೆಗಳು ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲು ಒಟ್ಟಾಗಿ ಪರಿಹಾರದತ್ತ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು.





Leave a comment